ರಾಜಕುಮಾರ ಮೂವಿ ಹಾಡು ಕೇಳುತ್ತಿದ್ದಂತೆ ಎಮೋಷನಲ್ ಆದ ಬಾದ್​ಶಾ

ಸೆಪ್ಟೆಂಬರ್ 8ರಂದು ಯುವ ದಸರಾ ಕಾರ್ಯಕ್ರಮದಲ್ಲಿ ಬಾದ್​ಶಾ ಭಾಗಿ ಆಗಿದ್ದರು. ಈ ವೇಳೆ ಕನ್ನಡದಲ್ಲಿ ಮಾತನಾಡಿದ ಅವರು, ಕನ್ನಡದ ಒಂದು ಹಾಡು ಕೇಳಿ ಸಖತ್ ಎಮೋಷನಲ್ ಆದರು

ಮೈಸೂರಿನಲ್ಲಿ ‘ಯುವ ದಸರಾ’ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಬಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಸೆಪ್ಟೆಂಬರ್ 8ರಂದು ಬಾಲಿವುಡ್ ಗಾಯಕ ಬಾದ್​ಶಾ ಆಗಮಿಸಿದ್ದರು. ಕನ್ನಡದಲ್ಲಿ ಮಾತನಾಡಿದ್ದೂ ಅಲ್ಲದೆ, ಕನ್ನಡದ ಒಂದು ಹಾಡು ಕೇಳಿ ಅವರು ಸಖತ್ ಎಮೋಷನಲ್ ಆದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ಸ್ ಮಾಡುತ್ತಿದ್ದಾರೆ.

ಕನ್ನಡದಲ್ಲಿ ಮಾತನಾಡಿದ ಬಾದ್​ಶಾ, ‘ಯಾರೂ ಸ್ಟಾರ್ ಅಲ್ಲ, ಯಾರೂ ಸೂಪರ್​ಸ್ಟಾರ್ ಕೂಡ ಅಲ್ಲ. ನಾನು ಸಿಂಗರ್ ಅಲ್ಲ, ನಾನು ಬರಹಗಾರ. ನನಗೆ ಹೇಗೆ ಬರೆಯಬೇಕು ಎಂಬುದು ಗೊತ್ತಷ್ಟೇ. ನಾನು ಫೀಲೀಂಗ್ಸ್​ನ ಬರೆಯುತ್ತೇನೆ. ನಾನು ನಿಮ್ಮಲ್ಲಿ ಒಬ್ಬ. ನಿಮ್ಮ ಆಶೀರ್ವಾದಿಂದ ಇಲ್ಲಿದ್ದೇನೆ. ನಾನು ನಿಮಗೆ ಸದಾ ಚಿರರುಣಿ’ ಎಂದು ಕನ್ನಡದಲ್ಲಿ ಮಾತನಾಡಿದರು ಬಾದ್​ಶಾ. ಅವರ ಈ ಮಾತು ಕೇಳಿ ನೆರೆದಿದ್ದವರು ಥ್ರಿಲ್ ಆದರು.

  • Related Posts

    ರಾಮ್‌ಚರಣ್‌, ಕಿಚ್ಚ ಸುದೀಪ್‌ ಬಾಡಿಗಾರ್ಡ್‌ಗಳ ನಂತರ ಈಗ ಯಶ್‌ ಅಂಗರಕ್ಷಕನ ಹವಾ!

    ಚಿತ್ರರಂಗದಲ್ಲಿ ನೆಚ್ಚಿನ ನಟರ ಜೊತೆಗೆ ಅವರ ಪರ್ಸನಲ್‌ ಬಾಡಿಗಾರ್ಡ್‌ಗಳೂ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಸಖತ್ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ನಟ ರಾಮ್‌ ಚರಣ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ‘ಪೆದ್ದಿ’ ಪ್ರಚಾರದ ವೇಳೆಯಲ್ಲಿ ಅವರ ಪರ್ಸನಲ್ ಸೆಕ್ಯೂರಿಟಿ ಗಾರ್ಡ್, ಆಫ್ರಿಕಾ…

    ರಾಮಾಯಣ’ ಟ್ರೇಲರ್ ಉದ್ದಕ್ಕೂ ರಾವಣನದ್ದೇ ಅಬ್ಬರ !

      ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ‘ರಾಮಾಯಣ’ ಟ್ರೇಲರ್ ಭಾರಿ ಧೂಳೆಬ್ಬಿಸುತ್ತಿದೆ. ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅವರ ರೌದ್ರಾವತಾರದ ಎಂಟ್ರಿಗೆ ಪ್ರೇಕ್ಷಕರು ಥಿಯೇಟರ್‌ನಲ್ಲಿ ಹುಚ್ಚೆದ್ದು ಕುಣಿದಿದ್ದು, ಇಡೀ ಟ್ರೇಲರ್ ಯಶ್ ಅವರ ಅಪ್ರತಿಮ ಡಾಮಿನೇಷನ್‌ನಿಂದ ಕೂಡಿದೆ ಎಂದು ಫ್ಯಾನ್ಸ್ ಕೊಂಡಾಡುತ್ತಿದ್ದಾರೆ. ‘ರಾಮಾಯಣ’ ಟ್ರೇಲರ್…

    You Missed

    ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

    ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

    ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

    ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

    ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

    ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

    ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

    ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

    ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

    ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

    FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

    FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!