ರಾಜ್ಯದ ಅಪಾರ್ಟ್‌ಮೆಂಟ್‌ ಮನೆ ಮಾಲೀಕರಿಗೆ ಸಿಹಿ ಸುದ್ಧಿ!

ಅಪಾರ್ಟ್‌ಮೆಂಟ್‌ ಮಾಲೀಕರು, ಅಪಾರ್ಟ್‌ಮೆಂಟ್‌ ಮನೆ ಮಾಲೀಕರ ಅಸೋಸಿಯೇಷನ್​ಗಳ ಬಹುದಿನಗಳ ಬೇಡಿಕೆಯಾದ ಹೊಸ ಕರ್ನಾಟಕ ಅಪಾರ್ಟ್‌ಮೆಂಟ್‌ (ಮಾಲಿಕತ್ವ ಮತ್ತು ನಿರ್ವಹಣೆ) ಮಸೂದೆ 2025 ಕರಡು ಸಿದ್ಧಗೊಳಿಸಿದೆ. ಆ ಮೂಲಕ 53 ವರ್ಷ ಹಳೆಯ ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲಿಕತ್ವ ಕಾಯ್ದೆ 1972ಗೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ.‌ ಪ್ರಸ್ತಾಪಿತ ಹೊಸ ಮಸೂದೆ ಮೂಲಕ ರಾಜ್ಯದ ಅಪಾರ್ಟ್‌ಮೆಂಟ್‌ ಮನೆ ಮಾಲೀಕರ ಹಿತರಕ್ಷಣೆ, ಹಕ್ಕು ರಕ್ಷಣೆಗೆ ಇನ್ನಷ್ಟು ಬಲ ಸಿಗಲಿದೆ.

ಕರ್ನಾಟಕ ಅಪಾರ್ಟ್‌ಮೆಂಟ್‌ (ಮಾಲಿಕತ್ವ ಮತ್ತು ನಿರ್ವಹಣೆ) ಮಸೂದೆ-2025 ಸಿದ್ಧ. (ETV Bharat)
ಹಳೆಯ ಕಾಯ್ದೆ 1972ರಲ್ಲಿ ರೂಪಿಸಲಾಗಿತ್ತು. ಆ ಸನ್ನಿವೇಶದಲ್ಲಿ ಅಪಾರ್ಟ್‌ಮೆಂಟ್‌ ಸಂಸ್ಕೃತಿ ವಿರಳವಾಗಿತ್ತು. ಕಳೆದ 20 ವರ್ಷಗಳಿಂದೀಚೆಗೆ ಅಪಾರ್ಟ್‌ಮೆಂಟ್‌ ಸಂಸ್ಕೃತಿ ವ್ಯಾಪಕವಾಗಿ ಬೆಳೆದು ಬಂದಿದೆ.‌ ಆದರೆ ಈಗಿನ ಸನ್ನಿವೇಶಕ್ಕೆ ಅನುಗುಣವಾಗಿ ಕಾನೂನುಗಳಲ್ಲಿ ತಿದ್ದುಪಡಿಯಾಗಿಲ್ಲ.‌ ಪ್ರಸ್ತಾಪಿತ ಹೊಸ ಕಾನೂನು ಅಪಾರ್ಟ್‌ಮೆಂಟ್‌ ಮನೆ ಮಾಲೀಕರಿ ಹೆಚ್ಚಿನ ಅಧಿಕಾರ ನೀಡಲಿದೆ. ಹಳೆಯ ಕಾನೂನಿನಲ್ಲಿನ ಲೋಪದೋಷ, ನ್ಯೂನತೆಗಳನ್ನು ಬದಲಾಯಿಸಲಿದೆ.

ಹೊಸ ಅಪಾರ್ಟ್‌ಮೆಂಟ್‌ ಮಸೂದೆಯ ಪ್ರಮುಖ ಉದ್ದೇಶಗಳು: ಹೊಸ ಪ್ರಸ್ತಾಪಿತ ಮಸೂದೆಯಲ್ಲಿ ಕಟ್ಟಡದಲ್ಲಿನ ಒಂದು ಅಪಾರ್ಟ್‌ಮೆಂಟ್​ನ ಮಾಲಿಕತ್ವ ಸಂಬಂಧಿತ ಕಾನೂನುಗಳನ್ನು ಕ್ರೋಢೀಕರಿಸಲಾಗಿದೆ. ರಾಜ್ಯದಲ್ಲಿನ ಅಪಾರ್ಟ್‌ಮೆಂಟ್​ಗಳ ನಿರ್ವಹಣೆಗಾಗಿ ಸ್ಪಷ್ಟ ರೂಪುರೇಷೆ ರೂಪಿಸಲಾಗಿದೆ. ಅಪಾರ್ಟ್‌ಮೆಂಟ್‌ ಮಾಲೀಕರ ಸಂಘಗಳ ನೋಂದಣಿ ಮತ್ತು ನಿರ್ವಹಣೆ ಗೊಂದಲ ಪರಿಹಾರ, ಅಪಾರ್ಟ್‌ಮೆಂಟ್‌ಗಳಲ್ಲಿನ ಗೃಹ ಖರೀದಿದಾರರ ಸಂಘಕ್ಕೆ ಕಾಮನ್‌ ಏರಿಯಾ ಹಸ್ತಾಂತರ, ಬಿಲ್ಡರ್‌ಗಳಿಂದ ಭೂಮಿಯ ಮೇಲಿನ ಹಕ್ಕು ಸಂಘಗಳಿಗೆ ವರ್ಗಾವಣೆ ಮಾಡುವುದು ಹೊಸ ಕರಡು ಮಸೂದೆಯ ಉದ್ದೇಶವಾಗಿದೆ.

ಪ್ರಮುಖವಾಗಿ ಒಂದು ಕಟ್ಟಡದಲ್ಲಿ ಒಂದು ಪ್ರತ್ಯೇಕ ಅಪಾರ್ಟ್‌ಮೆಂಟ್‌ನ ಮಾಲೀಕತ್ವ ಮತ್ತು ಅಂತಹ ಅಪಾರ್ಟ್‌ಮೆಂಟ್‌ಗೆ ಸಂಬಂಧಿಸಿದ ಸಾಮಾನ್ಯ ಪ್ರದೇಶಗಳಾದ ಮೆಟ್ಟಿಲು, ಬಾಲ್ಕನಿ, ಪಾಸೇಜು, ಲಿಫ್ಟ್, ಟೆರೇಸ್, ಪಾರ್ಕ್, ಪ್ಲೇ ಏರಿಯಾ, ಲಾಭೀಸ್, ವಾಟರ್ ಟ್ಯಾಂಕ್ಸ್, ಸಂಪ್ಸ್ ಇರುವ ಪ್ರದೇಶ ಮತ್ತು ಸೌಲಭ್ಯಗಳಲ್ಲಿ ಅವಿಭಜಿತ ಪಾಲನ್ನು ಹಂಚಲು ಕಾನೂನು ರೂಪಿಸಲಾಗಿದೆ. ಜೊತೆಗೆ ಅಪಾರ್ಟ್‌ಮೆಂಟ್‌ಗಳ ಆಡಳಿತ, ಸಾಮಾನ್ಯ ಪ್ರದೇಶಗಳು ಮತ್ತು ಅಪಾರ್ಟ್‌ಮೆಂಟ್ ಕಟ್ಟಡಗಳ ಸೌಲಭ್ಯಗಳ ಕಾರ್ಯಾಚರಣೆ ಮತ್ತು ಬಳಕೆಗೆ ಒಂದು ಕಾರ್ಯವಿಧಾನವನ್ನು ಒದಗಿಸುವುದು ಈ ಹೊಸ ಪ್ರಸ್ತಾಪಿತ ಮಸೂದೆಯ ಉದ್ದೇಶವಾಗಿದೆ.‌

ಅಪಾರ್ಟ್‌ಮೆಂಟ್‌ ಮಾಲಿಕತ್ವ: ಪ್ರಸ್ತಾಪಿತ ಹೊಸ ಕರಡು ಮಸೂದೆ ಪ್ರಕಾರ ಅಪಾರ್ಟ್‌ಮೆಂಟ್‌ ಮನೆ ಮಾಲೀಕ ತನ್ನ ಅಪಾರ್ಟ್‌ಮೆಂಟ್​ನ ಪ್ರತ್ಯೇಕ ಸ್ವಾಧೀನ ಹಾಗೂ ಮಾಲಿಕತ್ವದ ಹಕ್ಕನ್ನು ಹೊಂದಿರುತ್ತಾನೆ. ಅದರ ಜೊತೆಗೆ ಅಪಾರ್ಟ್‌ಮೆಂಟ್​ನ ಸಾಮಾನ್ಯ ಪ್ರದೇಶಗಳ ಬಾಲ್ಕನಿ, ಮೆಟ್ಟಿಲುಗಳು, ಲಾಂಜ್ ಮುಂತಾದ ಸ್ಥಳಗಳ ಅವಿಭಜಿತ ಪಾಲಿನ ಹಕ್ಕುದಾರರಾಗಿರುತ್ತಾರೆ. ಈ ಅವಿಭಜಿತ ಪಾಲನ್ನು ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡ್ ಅಪ್ ಏರಿಯಾವನ್ನು ಪರಿಗಣಿಸಿ ಲೆಕ್ಕ ಹಾಕಲಾಗುತ್ತದೆ.

 

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!