
ಹಂಗಳ ಗ್ರಾಮದ ನಿವಾಸಿಗಳಾದ ಆನಂದ್ ಮತ್ತು ಶುಭಮಾನಸ ದಂಪತಿಯ ಆರು ತಿಂಗಳ ಮಗು ಪ್ರಖ್ಯಾತ್ಗೆ ಇಂದು ಕಿವಿ ಚುಚ್ಚಿಸೋಕೆ ಮುಂದಾಗಿದ್ದರು. ಆದರೆ ಚಿಕ್ಕ ಕಂದವಾದ ಕಾರಣ ಮಗುವಿಗೆ ನೋವು ಆಗ ಬಾರದು ಎಂಬ ಕಾರಣಕ್ಕೆ ಬೋಮ್ಮಲಾಪೂರ ಸರ್ಕಾರಿ ಆಸ್ಪತ್ರೆಗೆ ಮಗುವನ್ನ ಕರೆದುಕೊಂಡು ಹೋದ ಪೋಷಕರು ಕಿವಿಗೆ ಬೆಂಟ್ ಇಂಜೆಕ್ಷನ್(ಅನಸ್ತೀಷಿಯಾ) ಕೊಡಿಸಿದ್ದಾರೆ. ಈ ಇಂಜೆಕ್ಷನ್ ನೀಡಿದ 10 ನಿಮಿಷದೊಳಗೆ ಮಗುವಿಗೆ ರಿಯಾಕ್ಷನ್ ಆಗಿದೆ. ಇದ್ದಕ್ಕಿದ್ದಂತೆ ಪಿಡ್ಸ್ ಬಂದಿದೆ, ತಕ್ಷಣವೇ ಬೋಮ್ಮಲಾಪುರ ಸರ್ಕಾರಿ ಆಸ್ಪತ್ರೆಯಿಂದ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಗೆ ಮಗುವನ್ನ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆ ತಲುಪುವ ಮುನ್ನವೆ ಮಗು ಉಸಿರು ಚೆಲ್ಲಿದೆ. ಈ ವಿಚಾರ ತಿಳಿದು ಮೃತ ಮಗುವಿನ ಕುಟುಂಬಸ್ಥರು ರೊಚ್ಚಿಗೆದ್ದು ವೈದ್ಯರಿಗೆ ಕ್ಲಾಸ್ ತೆಗೆದು ಕೊಂಡಿದ್ದಾರೆ.
ನಾಗದೋಷ ಯಾವ ಕಾರಣಕ್ಕೆ ಬರುತ್ತೆ?
ವೈದ್ಯ ಓವರ್ ಡೋಸ್ ನೀಡಿದ ಪರಿಣಾಮವೇ ಮಗು ಸಾವನ್ನಪ್ಪಿರುವುದಾಗಿ ಕುಟುಂಬಸ್ಥರ ಆರೋಪವಾಗಿದೆ. ಪಿಹೆಚ್ಸಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗುಂಡ್ಲುಪೇಟೆ ತಾಲೂಕು ವೈದ್ಯಾಧಿಕಾರಿ ಡಾ.ಅಲಂಪಾಷಾ ಹೇಳಿದ್ದಾರೆ.

ಕಿವಿಗೆ ನೋವಾಗಬಾರ್ದು ಅಂತ ವೈದ್ಯರ ಬಳಿ ಕರೆದುಕೊಂಡು ಹೋದರೆ, ಆ ವೈದ್ಯ ಮಗುವಿನ ಪ್ರಾಣವನ್ನು ತೆಗೆದಿದ್ದು ನಿಜಕ್ಕೂ ದುರಂತವೇ ಸರಿ. ಮರಣೋತ್ತರ ಪರೀಕ್ಷೆ ವರದಿಯ ಬಳಿಕ ಸತ್ಯಾ ಸತ್ಯತೆ ಬೆಳಕಿಗೆ ಬರಬೇಕಿದೆ. ಎಲ್ಲವನ್ನೂ ನೋಡಿ ರೊಚ್ಚಿಗೆದ್ದ ಬೊಮ್ಮಲಾಪುರ ಗ್ರಾಮದ ನಿವಾಸಿಗಳು ಮಾಧ್ಯಮ ಪ್ರತಿನಿಧಿಗಳನ್ನು ಒಳಬಿಡಿ ಎಂದು ಗಲಾಟೆ ಮಾಡಿದ್ದಾರೆ. ಗ್ರಾಮಸ್ಥರು ರೊಚ್ಚಿಗೇಳುತ್ತಿದ್ದಂತೆ ಮಾಧ್ಯಮದವರನ್ನು ಪೊಲೀಸರು ಒಳಬಿಟ್ಟಿದ್ದಾರೆ.




