
ಸಿನಿಮಾ ಬಿಡುಗಡೆಗೆ ಕೆಲವೇ ದಿನ ಬಾಕಿ ಇರುವ ಈ ಸಮಯದಲ್ಲಿ ಸಾಯಿ ಪಲ್ಲವಿ ಅನಾರೋಗ್ಯಕ್ಕೆ ಈಡಾಗಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯ ಪ್ರಾರಂಭವಾಗಿದ್ದು, ಅನಾರೋಗ್ಯದ ಕಾರಣಕ್ಕೆ ಸಾಯಿ ಪಲ್ಲವಿ ಇವೆಂಟ್‌ಗಳಲ್ಲಿ ಭಾಗಿ ಆಗಲು ಆಗುತ್ತಿಲ್ಲ. ಸಾಯಿ ಪಲ್ಲವಿ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ, ಸಾಯಿ ಪಲ್ಲವಿ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

‘ತಾಂಡೇಲ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಫೆಬ್ರವರಿ 2 ರಂದು ಇದ್ದು, ಈ ಕಾರ್ಯಕ್ರಮಕ್ಕೂ ಸಹ ಸಾಯಿ ಪಲ್ಲವಿ ಬರುವುದಿಲ್ಲ ಎನ್ನಲಾಗುತ್ತಿದೆ. ಸಾಯಿ ಪಲ್ಲವಿ ನಟನೆಯ ‘ತಾಂಡೇಲ್’ ಸಿನಿಮಾದಲ್ಲಿ ನಾಗ ಚೈತನ್ಯ ನಾಯಕ. ಇಬ್ಬರೂ ಒಟ್ಟಿಗೆ ನಟಿಸುತ್ತಿರುವ ಎರಡನೇ ಸಿನಿಮಾ ಇದು.





