ಸೆಮೀಸ್ ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ; ಟೂರ್ನಿಯಿಂದ ಹೊರಬಿದ್ದ ಪಾಕ್ .

ದುಬೈ :- ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕದ ನೆರವಿನಿಂದ ಪಾಕಿಸ್ತಾನ ವಿರುದ್ಧದ ಚಾಂಪಿಯನ್ ಟ್ರೋಫಿಯ ಹೈ ವೋಲ್ವೇಜ್ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದ ಭಾರತ ಸೆಮಿ ಫೈನಲ್ಗೆ ಲಗ್ಗೆ ಹಾಕಿದರೇ, ಸತತ 2ನೇ ಸೋಲು ಅನುಭವಿಸಿದ ಅತಿಥೇಯ ಪಾಕಿಸ್ತಾನ ಟೂರ್ನಿಯಿಂದ ಹೊರ ಬಿದ್ದಿದೆ.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಮಾಡಿದ ಪಾಕಿಸ್ತಾನ 49.4 ಓವರ್ಗಳಲ್ಲಿ 241ರನ್ಗಳಿಗೆ ಆಲೌಟಾಯಿತು. ನಂತರ ಪಾಕಿಸ್ತಾನ ನೀಡಿದ 242ರನ್ ಗಳ ಗುರಿ ಬೆನ್ನತ್ತಿದ ಭಾರತ ಇನ್ನು 7.3 ಓವರ್ಗಳಿರುವಾಗಲೇ 42.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 244 ರನ್ ಗಳಿಸುವ ಮೂಲಕ ಜಯದ ನಗೆ ಬೀರಿತು.

ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಜೋಡಿ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿತು. ವೇಗವಾಗಿ ಆಡುತ್ತಿದ್ದ ರೋಹಿತ್ ಶರ್ಮಾ ಕೇವಲ 15 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಒಳಗೊಂಡ 20 ರನ್ ಗಳಿಸಿ ಶಹೀನ್ ಆಫ್ರಿದಿ ಅವರಿಗೆ ವಿಕೆಟ್ ಒಪ್ಪಿಸಿದರು. ಈ ವೇಳೆ 2ನೇ ವಿಕೆಟ್ಗೆ ಜೊತೆಯಾದ ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ತಾಳ್ಮೆಯ ಆಟವಾಡಿ 69 ರನ್ಗಳ ಜೊತೆಯಾಟ ವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಅಲ್ಲದೇ ನಿಧಾನವಾಗಿ ಪಂದ್ಯ ವನ್ನು ಪಾಕಿಸ್ತಾನದ ಕೈಯಿಂದ ಕಿತ್ತು ಕೊಂಡರು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ಶುಭಮನ್ ಗಿಲ್ ಅವರು 52 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 46 ರನ್ ಗಳಿಸಿ ಅಬ್ರಾರ್ ಅಹ್ಮದ್ ಅವರ ಬೌಲಿಂಗ್ನಲ್ಲಿ ಔಟಾದರು. ಆಗ ತಂಡದ ಮೊತ್ತ 2 ವಿಕೆಟ್ ನಷ್ಟಕ್ಕೆ 100 ರನ್ ಆಗಿತ್ತು. ಕೊಹ್ಲಿ- ಆಯ್ಯರ್ ಶತಕದ ಜೊತೆ ಯಾಟ: ಬಳಿಕ ಶ್ರೇಯಸ್ ಅಯ್ಯರ್ ಜೊತೆ ಗೂಡಿದ ಕೊಹ್ಲಿ ಶತಕದ ಜೊತೆಯಾಟ ವಾಡಿದರು. ಇವರಿಬ್ಬರೂ 114 ರನ್ ಜೊತೆ ಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ತಂದರು. ಈ ವೇಳೆ 67 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 56 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ಕುಶ್ಚಿಲ್ ಶಾ ಅವರ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಕವರ್ಸ್ನಲ್ಲಿದ್ದ ಇಮಾಮ್ ಉಲ್ ಅವರಿಗೆ ಕ್ಯಾಚ ನೀಡಿ ಪೆವಿಲಿಯನ್ ಸೇರಿ ಕೊಂಡರು. ನಂತರ ಬ್ಯಾಟಿಂಗ್ಗೆ ಬಂದ ಹಾರ್ದಿಕ್ ಪಾಂಡ್ಯ3 ರನ್ ಗಳಿಸಿ ನಿರ್ಗ ಮಿಸಿದರು. ಆದರೆ ಆಗಲೇ ಭಾರತ ವಿಜಯದ ಹೊಸ್ತಿಲಲ್ಲಿತ್ತು. ಅಕ್ಷರ್ ಪಟೇಲ್ (3) ಗೆ ಹೆಚ್ಚು ಕೆಲಸ ಉಳಿದಿರಲಿಲ್ಲ.

51ನೇ ಶತಕ ಸಿಡಿಸಿದ ಕಿಂಗ್ ಕೊಹ್ಲಿ: ಕಳೆದ ಕೆಲವು ಪಂದ್ಯಗಳಿಂದ ಲಯ ಕಂಡು ಕೊಳ್ಳಲು ಪರದಾಡುತ್ತಿದ್ದ ವಿರಾಟ್ ಕೊಹ್ಲಿ ತಾಳ್ಮೆ ಹಾಗೂ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿ ಸುವ ಮೂಲಕ ತಂಡಕ್ಕೆ ಜಯ ತಂದು ಕೊಟ್ಟರು. ಪಾಕ್ ವಿರುದ್ಧದ ಪಂದ್ಯಗಳಲ್ಲಿ ಅಬ್ಬರಿಸುವ ವಿರಾಟ್ ಕೊಹ್ಲಿ ಇಂದು ಕೂಡ ಅಬ್ಬರಿಸಿದರು. ಪಂದ್ಯದಲ್ಲಿ ಎಚ್ಚರಿಕೆಯ ಆಟವಾಡಿದ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ 51ನೇ ಶತಕ ಸಿಡಿಸಿ ಸಂಭ್ರಮಿ ಸಿದರು. ಅಲ್ಲದೇ 111 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 100 ರನ್ ಗಳಿಸಿ ಅಜೇಯರಾಗಿ ಉಳಿದು ತಾನೇಕೆ ಚೇಸಿಂಗ್ ಮಾಸ್ಟರ್ ಎಂಬುದನ್ನು ಮತ್ತೊಮ್ಮೆ ಸಾಧಿಸಿ ತೋರಿಸಿದರು. ಪಾಕಿಸ್ತಾನ ಪರ ಶಹೀನ್ ಆಫ್ರಿದಿ 2. ಕುಶ್ಚಿಲ್ ಶಾ ಮತ್ತು ಅಬ್ರಾರ್ ಅಹ್ಮದ್ ತಲಾ ಒಂದೊಂದು ವಿಕೆಟ್ ಪಡೆದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನಕ್ಕೆ ಆರಂಭಿಕ ಆಘಾತ ಎದುರಾಯಿತು. ತಂಡದ ಮೊತ್ತ 47 ರನ್ ಆಗುವಷ್ಟರಲ್ಲೇ ಕೇವಲ 10 ರನ್ಗಳಿಗೆ ಇಮಾಮ್ ಉಲ್ ಹಕ್ ಮತ್ತು 23 ರನ್ ಗಳಿಸಿ ಬಾಬರ್ ಅಜಮ್ ವಿಕೆಟ್ ಒಪ್ಪಿಸಿದ್ದು, ಪಾಕ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಈ ಸಂದರ್ಭ ಸೌದ್ ಶಕೀಲ್ ಮತ್ತು ಕ್ಯಾಪ್ಟನ್ ಮೊಹಮ್ಮದ್ ರಿಜ್ವಾನ್ ಜೊತೆಗೂಡಿ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ 144 ಎಸೆತಗಳಲ್ಲಿ 104 ರನ್ ಗಳಿಸಿ ಭರವಸೆ ಮೂಡಿ ಸಿತು. ಸೌದ್ ಶಕೀಲ್ ಅರ್ಧಶತಕ 62 ರನ್ ಸಿಡಿಸಿದರೇ ರಿಜ್ವಾನ್ 46 ರನ್ ಗಳಿಸಿದರು. ರಿಜ್ವಾನ್ ವಿಕೆಟ್ ಒಪ್ಪಿಸಿ ಹೊರನಡೆಯು ತ್ತಿದ್ದಂತೆ ಮ್ಯಾಚ್ ಪಥವೇ ಬದಲಾ ಯಿತು. ಕ್ರೀಸ್ಗೆ ಬಂದ ಬ್ಯಾಟರ್ಗಳು ಹೆಚ್ಚು ಹೊತ್ತು ನಿಲ್ಲದೇ ವಿಕೆಟ್ಗಳನ್ನು ಒಪ್ಪಿಸಿ ಹೊರ ನಡೆದರು.
ದೇಶಕ್ಕೋಸ್ಕರ ಮುಸಲ್ಮಾನರು ಕೂಡ ಹೋರಾಡಿದ್ದೀವಿ…. ಉದಯಗಿರಿ ಗಲಭೆ ಒಂದು ಆಕಸ್ಮಿಕ ಘಟನೆ…
ಸಲ್ಮಾನ್ ಆಘಾ 19, ತಯ್ಯಬ್ ತಹಿರ್ 4 ರನ್ ಗಳಿಸಿ ಔಟಾದರು. ಖುಷಿಲ್ ಷಾ 38 ರನ್ ಗಳಿಸಿದರು. ಶಾಹೀನ್ ಶಾ ಅಫ್ರಿದಿ ಶೂನ್ಯ ಸುತ್ತಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ನಸೀಮ್ ಷಾ 14 ರನ್ ಗಳಿಸಿದರು. ಭಾರತದ ಪರ ಕುದ್ದೀಪ್ ಯಾದವ್ 3. ಹಾರ್ದಿಕ್ ಪಾಂಡ್ಯ 2, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಉರುಳಿಸಿದರು. ಪಂದ್ಯದಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಭಾರತ ಮಾ.2 ರಂದು ನ್ಯೂಜಿಲೆಂಡ್ ವಿರುದ್ಧ ಲೀಗ್ ಹಂತ ದ ಅಂತಿಮ ಪಂದ್ಯದಲ್ಲಿ ಸೆಣಸಾಡಲಿದೆ.

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು