76 ನೇ ಗಣರಾಜ್ಯೋತ್ಸವ ದಿನ ಆಕರ್ಷಕವಾಗಿ ಕಾಣಿಸ್ಬೇಕಾ? ಹಾಗಾದ್ರೆ ಇಲ್ಲಿದೆ ಕೆಲವು ಟಿಪ್ಸ್ !

ಭಾರತದ ಇತಿಹಾಸದಲ್ಲಿ ಗಣರಾಜ್ಯ ದಿನವು ಪ್ರಮುಖ ದಿನವಾಗಿದ್ದು ಇಡೀ ದೇಶವೇ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. 1950 ಜನವರಿ 26 ರಂದು ಭಾರತ ಸಂವಿಧಾನವನ್ನು ಅಂಗೀಕರಿಸಿದ ದಿನವಾಗಿದೆ. ಹೀಗಾಗಿ ಪ್ರತಿಯೊಂದು ಶಾಲೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಗಣರಾಜ್ಯೋತ್ಸವ ಪ್ರತಿಯೊಬ್ಬ ಭಾರತೀಯನಿಗೂ ಹಬ್ಬವಿದ್ದಂತೆಯೇ ಸರಿ. ಹೌದು,ಭಾರತೀಯ ಪಾಲಿಗೆ ಜನವರಿ 26 ಹೆಮ್ಮೆಯ ದಿನವಾಗಿದೆ. ದೇಶದ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನ. ಹೀಗಾಗಿ ಸ್ವಾತಂತ್ರ್ಯ ಸಿಕ್ಕ ದಿನವನ್ನು ಎಷ್ಟು ಸಂಭ್ರಮದಿಂದ ಆಚರಿಸುತ್ತೇವೋ ಅಷ್ಟೇ ಸಂಭ್ರಮದಿಂದ ಈ ದಿನವನ್ನು ಆಚರಿಸುತ್ತೇವೆ. ಈ ವರ್ಷ ನಾವು 76 ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಗಣರಾಜ್ಯೋತ್ಸವಕ್ಕೆ ತಕ್ಕದಾದ ಥೀಮ್ ನಲ್ಲಿ ಡ್ರೆಸ್ ಮಾಡಿಕೊಂಡು ಹಬ್ಬದಂತೆ ಆಚರಿಸಬಹುದಾಗಿದ್ದು, ಈ ಗಣರಾಜ್ಯೋತ್ಸವ ದಿನ ಈ ರೀತಿ ಉಡುಗೆ ತೊಟ್ಟು ಹಬ್ಬದಂತೆ ಈ ದಿನವನ್ನು ಸಂಭ್ರಮಿಸಬಹುದು.

• ಇಂಡೋ-ವೆಸ್ಟರ್ನ್ ಲುಕ್ ನಲ್ಲಿ ಕಂಗೊಳಿಸಿ : ಇಂಡೋ-ವೆಸ್ಟರ್ನ್ ಲುಕ್ ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ಬಿಳಿ ಸ್ಕರ್ಟ್ ಅನ್ನು ಹಸಿರು ಅಥವಾ ಕೇಸರಿ ಬಣ್ಣದ ಕ್ರಾಪ್ ಟಾಪ್ ನೊಂದಿಗೆ ಮಿಸ್ ಮ್ಯಾಚ್ ಮಾಡಿಕೊಳ್ಳಬಹುದು. ಎಥ್ನಿಕ್ ಟಚ್ಗಾಗಿ ಫ್ಲೋಯಿ ಸ್ಕರ್ಟ್ನೊಂದಿಗೆ ಉದ್ದವಾದ ಕುರ್ತಾವನ್ನು ಧರಿಸಬಹುದು.

• ತ್ರಿವರ್ಣ ಬಣ್ಣದ ಸೀರೆ ಆಯ್ಕೆ ಮಾಡಿ : ಯಾವುದೇ ಕಾರ್ಯಕ್ರಮವಿದ್ದರೂ ಸೀರೆ ಹೆಣ್ಣು ಮಕ್ಕಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳನ್ನೊಳಗೊಂಡ ಮೂರು ಬಣ್ಣದ ಸೀರೆಯೂ ಗಣರಾಜ್ಯೋತ್ಸವಕ್ಕೆ ಹೇಳಿ ಮಾಡಿಸಿದ ಉಡುಗೆಯಾಗಿದೆ. ನೀವು ತ್ರಿವರ್ಣ ಸೀರೆ ಧರಿಸಲು ಸಾಧ್ಯವಾಗದಿದ್ದರೆ ಬಿಳಿ ಬಣ್ಣದ ಸೀರೆ ಧರಿಸಿ ಮೂರು ಬಣ್ಣಗಳ ಒಳಗೊಂಡ ಶಾಲನ್ನು ವಿಭಿನ್ನವಾಗಿ ಧರಿಸಿ ಆಕರ್ಷಕವಾಗಿ ಕಂಗೊಳಿಸಬಹುದು.

• ಕೈಬಳೆ, ಕಿವಿಯೋಲೆ ಮ್ಯಾಚಿಂಗ್ ಇರಲಿ : ಗಣರಾಜ್ಯೋತ್ಸವದ ದಿನ ಎಲ್ಲರ ಗಮನ ಸೆಳೆಯಲು ಬಯಸಿದರೆ ಕೈಬಳೆಗಳು ಹಾಗೂ ಕಿವಿಯೋಲೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದಿಂದ ಕೂಡಿರಲಿ. ಬಟ್ಟೆಗೆ ಹೊಂದುವಂತೆ ತ್ರಿವರ್ಣದ ಸ್ಟಿಕರ್ ಹಾಗೂ ಕ್ಲಿಪ್ ಬಗ್ಗೆ ಹೆಚ್ಚು ಗಮನ ಕೊಡಿ.

• ಬಿಳಿ ಸಲ್ವಾರ್ ಆಯ್ಕೆಯಿರಲಿ : ಬಿಳಿ ಬಣ್ಣದ ಸಲ್ವಾರ್ ಗೆ ಬಿಳಿ ಬಣ್ಣದ ಪ್ಯಾಂಟ್ ಹಾಕಿಕೊಂಡು ಕೇಸರಿ ಮತ್ತು ಹಸಿರು ಬಣ್ಣದ ಮಿಕ್ಸ್ ಇರುವ ದುಪಟ್ಟಾ ಹಾಕಿಕೊಂಡರೆ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ಬಿಳಿ ಟಾಪ್ಗೆ ಹಸಿರು ಅಥವಾ ಕೇಸರಿ ಬಣ್ಣದ ಪ್ಯಾಂಟ್ ಕೂಡ ಧರಿಸಬಹುದು. ಬಿಳಿ ಟಾಪ್ ಗೆ ಟೈಟ್ ಪ್ಯಾಂಟ್, ಪಲಾಜೋ, ಬೆಲ್ ಬಾಟಂ ಪ್ಯಾಂಟ್ಗಳು ಹೊಂದಿಕೆಯಾಗುತ್ತವೆ.

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು