
ಕಾಲಿವುಡ್ಗೆ ಹೆಜ್ಜೆ ಇಟ್ಟ ಸಾನ್ವಿ
ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ‘ಸಿಗ್ಮಾ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿದೇಶದಲ್ಲಿ ಸಿನಿಮಾ ನಿರ್ದೇಶನದ ತರಬೇತಿ ಮುಗಿಸಿ ಬಂದಿರುವ ಜೇಸನ್ ಸಂಜಯ್, ತಮ್ಮ ಚೊಚ್ಚಲ ಚಿತ್ರದಲ್ಲೇ ಭರವಸೆಯ ಕಥಾವಸ್ತುವಿನೊಂದಿಗೆ ಬಂದಿದ್ದಾರೆ. ಈ ಬಿಗ್ ಪ್ರಾಜೆಕ್ಟ್ ಅನ್ನು ಖ್ಯಾತ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸುತ್ತಿದೆ. ಈ ಸಿನಿಮಾದಲ್ಲಿ ಹಾಡುವ ಅವಕಾಶ ಸಾನ್ವಿಗೆ ಸಿಕ್ಕಿದ್ದು, ಈ ಮೂಲಕ ಕಾಲಿವುಡ್ಗೆ ಕಾಲಿಟ್ಟಿದ್ದಾರೆ.
ಹೊಸ ಹೆಜ್ಜೆ ಇಟ್ಟ ಸಾನ್ವಿ
ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದ ‘ಮಸ್ತ್ ಮಲೈಕಾ’ ಹಾಡು ಗಮನ ಸೆಳೆದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಹಾಡು ಭಾರಿ ಟ್ರೆಂಡ್ ಸೃಷ್ಟಿಸಿತ್ತು. ಸಾನ್ವಿ ಅವರ ವಿಶಿಷ್ಟ ಕಂಠ ಮತ್ತು ಧ್ವನಿಯಲ್ಲಿನ ಹೊಸತನ ಯುವಜನತೆಯನ್ನು ಅಪಾರವಾಗಿ ಸೆಳೆದಿತ್ತು. ಆ ಹಾಡಿನ ಯಶಸ್ಸಿನ ಬಳಿಕ ಅವರನ್ನು ಹುಡುಕಿ ಸಾಕಷ್ಟು ಆಫರ್ ಹುಡುಕಿ ಬರುತ್ತಿವೆ. ಅವರು ಈಗ ‘ಸುಲೋಚನ’ ಹಾಡನ್ನು ಒಪ್ಪಿ ಹಾಡಿದ್ದಾರೆ.
ಸಿಗ್ಮಾ ಚಿತ್ರದಲ್ಲಿ ಕಲಾವಿದರ ದಂಡು
‘ಸಿಗ್ಮಾ’ ಸಿನಿಮಾದಲ್ಲಿ ಯುವ ನಟ ಸಂದೀಪ್ ಕಿಶನ್ ಹಾಗೂ ‘ಜಾತಿ ರತ್ನಲು’ ಖ್ಯಾತಿಯ ಫರಿಯಾ ಅಬ್ದುಲ್ಲಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಸ್. ಥಮನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಸಾನ್ವಿ ಅವರ ಗಾಯನಕ್ಕೆ ಅದ್ಭುತ ಮೆಲೋಡಿ ಸ್ಪರ್ಶ ನೀಡಿದ್ದಾರೆ.




