ತಾಯಿಯ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೆ ಒಂದು ವಾರ ತಾಯಿಯ ಹೆ*ದೊಂದಿಗೆ ಕಾಲ ಕಳೆದ ಹೆಣ್ಣು ಮಕ್ಕಳು.

ಹೌದು ಇಂತಹದೊಂದು ದುರ್ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ತಾಯಿ ಮೃತಪಟ್ಟ ಬಳಿಕ ಅಂತ್ಯಕ್ರಿಯೆಗೂ ಹಣವಿಲ್ಲದೇ ಇಬ್ಬರು ಹೆಣ್ಣುಮಕ್ಕಳು ಕಂಗಾಲಾಗಿ ಒಂದು ವಾರದ ಕಾಲ ತಾಯಿ ಶವದೊಂದಿಗೆ ಕಾಲ ಕಳೆದಿದ್ದಾರೆ.
ಹೌದು ,ಅವರು ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ತಾಯಿ. ವಯಸ್ಸಿಗೂ ಮುನ್ನವೇ ಸಾವನ್ನಪ್ಪಿದ್ದರಿಂದ ಮಕ್ಕಳಿಗೆ ಜವಾಬ್ದಾರಿಯನ್ನೂ ಕಲಿಸಿಲ್ಲ. ಹಣಕಾಸಿನ ವ್ಯವಹಾರವನ್ನೂ ಕಲಿಸಿಲ್ಲ. ಹೀಗಾಗಿ, ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ರಾತ್ರಿ ಮಲಗಿದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತಾಯಿ ಸತ್ತ ನಂತರ ಹೇಗೆ ಅಂತ್ಯಕ್ರಿಯೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ಇಲ್ಲದೇ ಹಾಗೂ ಅಂತ್ಯಕ್ರಿಯೆ ನಡೆಸಲು ಹಣವೂ ಇಲ್ಲದೇ ಇಬ್ಬರು ಹೆಣ್ಣು ಮಕ್ಕಳು ಒಂದು ವಾರದ ಕಾಲ ತಾಯಿಯ ಶವದೊಂದಿಗೆ ದಿನ ಕಳೆದಿದ್ದಾರೆ. ಒಂದು ವಾರದವರೆಗೂ ಮಕ್ಕಳ ಸಹಾಯಕ್ಕೆ ಯಾರು ಬರದೇ ಇರುವುದು ನಂಬಲಾರ್ಹವಾಗಿದೆ.

ಈ ಘಟನೆ ಹೈದರಾಬಾದ್ ನಗರದ ಹಿರ ಭಾಗದಲ್ಲಿ ನಡೆದಿದೆ. ಹೈದರಾಬಾದ್ ಹೊರವಲಯದಲ್ಲಿ ಸುತ್ತಮುತ್ತಲೂ ಯಾವುದೇ ಮನೆಗಳ್ಳಿಲ್ಲದೇ ಒಂಟಿಯಾಗಿದ್ದ ಮನೆಯಲ್ಲಿ ತಾಯಿ ಹಾಗೂ ಇಬ್ಬರು ವಯಸ್ಕ ಹೆಣ್ಣು ಮಕ್ಕಳಿದ್ದಾರೆ. ಆದರೆ, ತಾಯಿ ಮಕ್ಕಳಿಗೆ ಮನೆ ಜವಾಬ್ದಾರಿ ಹಾಗೂ ಆರ್ಥಿಕ ವ್ಯವಹಾರ ಜ್ಞಾನದ ಬಗ್ಗೆ ಏನನ್ನೂ ಕಲಿಸಿಲ್ಲ. ತಾಯಿಯೇ ದುಡಿಯುತ್ತಾ ಮನೆ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಇನ್ನು ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದ ತಾಯಿ ಅನಾರೋಗ್ಯದಿಂದ ಚೇತರಿಕೆ ಕಾಣದೇ ಜ.23ರಂದು ಮಲಗಿದ್ದ ಸ್ಥಳದಲ್ಲಿಯೇ ರಾತ್ರಿ ಕೊನೆಯುಸಿರು ಎಳೆದಿದ್ದಾರೆ. ಇದಾದ ನಂತರ ಬೆಳಗ್ಗೆ ಮಕ್ಕಳು ಬಂದು ತಾಯಿಯನ್ನು ಎಬ್ಬಿಸಿದಾಗ ಅಮ್ಮ ಎದ್ದೇಳಲಿಲ್ಲ. ಆಗ ಅಕ್ಕ-ತಂಗಿ ಇಬ್ಬರೂ ಅಮ್ಮನನ್ನು ಪರೀಕ್ಷೆ ಮಾಡಿದಾಗ ಆಕೆಯ ಉಸಿರು ನಿಂತು ಹೋಗಿದ್ದು, ಎದೆಬಡಿತವೂ ನಿಂತು ಹೋಗಿ ದೇಹ ತಣ್ಣಗಾಗಿತ್ತು. ಇದರಿಂದ ಭಯಭೀತರಾದ ಮಕ್ಕಳಿಬ್ಬರೂ ಆತಂಕಕ್ಕೆ ಒಳಗಾಗಿದ್ದಾರೆ. ಅಮ್ಮನನ್ನು ಕಳೆದುಕೊಂಡು ಮುಂದೆ ಏನು ಮಾಡಬೇಕು ಎಂದು ತಿಳಿಯದೇ ಖಿನ್ನತೆಗೆ ಒಳಗಾಗಿದ್ದಾರೆ. ಮುಂದೇನು ಮಾಡಬೇಕು ಎಂಬ ಅರಿವು ಸಹ ಆ ಇಬ್ಬರು ಹೆಣ್ಣು ಮಕ್ಕಳಿಗೆ ಇರಲಿಲ್ಲ.
ಇದಾದ ನಂತರ, ತಮ್ಮ ಮನೆಗೆ ಓಟು ಕೇಳಲು ಬಂದಿದ್ದ ಶಾಸಕರ ಮನೆಗೆ ತೆರಳಿ ತಮ್ಮ ತಾಯಿಯ ಅಂತ್ಯಕ್ರಿಯೆ ಹಣವಿಲ್ಲ ಕೊಡಿ ಎಂದು ಕೇಳಿದಾಗ ಈ ಘಟನೆ ಬಯಲಿಗೆ ಬಂದಿದೆ.ಹೈದರಾಬಾದ್ ನಗರದ ಒಂಟಿ ಮನೆಯಲ್ಲಿ ವಾಸವಿದ್ದ ತಾಯಿ (45) ಜನವರಿ 23 ರಂದು ತೀರಿಕೊಂಡಿದ್ದಾರೆ. ಬೆಳಿಗ್ಗೆ ತಾಯಿ ನಿದ್ದೆಯಿಂದ ಎದ್ದೇಳದಿದ್ದಾಗ ಹೆಣ್ಣುಮಕ್ಕಳು ಪರಿಶೀಲಿಸಿದಾಗ ನಾಡಿಮಿಡಿತ, ಉಸಿರಾಟ ಅಥವಾ ಹೃದಯ ಬಡಿತ ಇಲ್ಲ ಎಂದು ತಿಳಿದುಬಂದಿದೆ. ಇದರಿಂದ ಮೃತ ಮಹಿಳೆಯ 25 ವರ್ಷ ಮತ್ತು 22 ವರ್ಷದ ಹೆಣ್ಣುಮಕ್ಕಳು ತಾಯಿಯ ಖಿನ್ನತೆಗೆ ಒಳಗಾಗಿದ್ದರು. ತಾಯಿ ತೀರಿಕೊಂಡಿದ್ದಾರೆ ಎಂದು ತಿಳಿದ ನಂತರ ಇಬ್ಬರೂ ಬಾಗಿಲು ಮುಚ್ಚಿಕೊಂಡು ಮನೆಯಲ್ಲೇ ಶವದೊಂದಿಗೆ ಒಂದು ವಾರಕ್ಕೂ ಹೆಚ್ಚು ಕಾಲ ಕಳೆದಿದ್ದಾರೆ. ಜನವರಿ 31 ರಂದು ಪೊಲೀಸರು ಇವರನ್ನು ಸಂಪರ್ಕಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಹೌದು ಬೇರೆ ಯಾವುದೇ ಜನಸಂಪರ್ಕವಿಲ್ಲದ ಆ ಊರಿನಲ್ಲಿ ತಾಯಿ ಮತ್ತು ಮಕ್ಕಳು ಒಂಟಿ ಮನೆಯಲ್ಲಿ ವಾಸಿಸುತ್ತಿದ್ದರಿಂದ ಒಂದು ವಾರ ಕಳೆದರೂ ಸಹ ನೆರೆಹೊರೆಯವರಿಗೆ ದುರ್ವಾಸನೆ ಬಂದಿರಲಿಲ್ಲ. ಜನವರಿ 31 ರಂದು ಮನೆಯಿಂದ ಹೊರಬಂದ ಇಬ್ಬರೂ ಶಾಸಕರ ಕಚೇರಿಗೆ ತೆರಳಿ, ನಮ್ಮ ತಾಯಿ ತೀರಿಕೊಂಡಿದ್ದಾರೆ. ಅವರ ಅಂತ್ಯಕ್ರಿಯೆಗೆ ನಮ್ಮ ಬಳಿ ಹಣವಿಲ್ಲ ಎಂದು ತಿಳಿಸಿದ್ದಾರೆ. ಶಾಸಕರ ಕಚೇರಿಯಿಂದ ಪೊಲೀಸರನ್ನು ಸಂಪರ್ಕಿಸುವಂತೆ ಸೂಚಿಸಲಾಯಿತು. ಬಳಿಕ ಪೊಲೀಸರ ನೇತೃತ್ವದಲ್ಲಿ ಇಬ್ಬರೂ ಮಕ್ಕಳನ್ನು ಸಂಪರ್ಕ ಮಾಡಿದಾಗ ಅವರ ತಾಯಿ ಮೃತಪಟ್ಟು ಒಂದು ವಾರವೇ ಕಳೆದಿದ್ದು, ದುರ್ವಾಸನೆ ಬಂದಿದ್ದ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಮಾಡಿದ ನಂತರ ಕಚೇರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಇನ್ನು ಮುಂದೆ ಆ ಇಬ್ಬರು ಹೆಣ್ಣು ಮಕ್ಕಳು ತಮ್ಮ ತಾಯಿ ಇಲ್ಲದೆ, ಜವಾಬ್ದಾರಿಯುತ ಬದುಕನ್ನು ನಡೆಸಬೇಕಾಗಿದೆ.

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು