ಬೆಂಗಳೂರು ವಿರುದ್ಧ ವಾರಿಯರ್ಸ್ ಗೆ ಸೂಪರ್ ಜಯ .

ಪಂದ್ಯ ದಲ್ಲಿ ಸಮಾನ ಸ್ಕೋರ್ ಗಳು ಬಂದ ನಂತರ ಪಂದ್ಯವು ಡ್ರಾಗೊಂಡಿತು. ಡಬ್ಲ್ಯೂಪಿಎಲ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ರೋಚಕ ಸೂಪರ್ಓವರ್ಗೆ ಎಡೆಮಾಡಿ ಕೊಟ್ಟ ಡಬ್ಲ್ಯೂ.ಪಿಎಲ್ ಪಂದ್ಯದಲ್ಲಿ ಸ್ಮೃತಿ ಮಂಧಾನ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಪಿ ವಾರಿಯರ್ಸ್ ಎದುರು 4 ರನ್ ಗಳಿಂದ ಸೋಲು ಕಂಡಿದೆ. ಸೂಪರ್ ಓವರ್ನಲ್ಲಿ ಯುಪಿ ನೀಡಿದ 9 ರನ್ ಗುರಿಯನ್ನು ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಬೆನ್ನಟ್ಟಿದ ಆರ್ಸಿಬಿ 9 ರನ್ಗಳನ್ನು ಕಲೆ ಹಾಕದೆ ಕೇವಲ 4 ರನ್ ಅಷ್ಟೇ ಮಾಡಿ ಸೋಲೊಪ್ಪಿಕೊಂಡಿತು. ಇದಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಆಹ್ವಾನ ಪಡೆದ ಆರ್ ಸಿ.ಬಿ 180 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಯುಪಿ ತಂಡವೂ 20 ಓವರ್ ಗಳಲ್ಲಿ 180 ರನ್ ಗಳಿಸಿ ಪಂದ್ಯ ಡ್ರಾಗೊಂಡಿತು.
ಆರ್ಸಿಬಿ ತಂಡದ ಬೆನ್ನೆಲುಬು ಎಂದೆ ಖ್ಯಾತಿಯನ್ನು ಪಡೆದಿರುವಂತಹ ಎಲ್ಲಿಸ್ ಪೆರ್ರಿ (90, 56, 9 ಪೋರ್, 3 ಸಿಕ್ಸರ್) ಮತ್ತು ಡೇನಿಯಲ್ ವೇಟ್ ಹಾಡ್ಜ್ (57: 41 ಎಸೆತ, 4 ಫೋರ್, 3 ಸಿಕ್ಸರ್) ಅವರ ಸಿಡಿಲಬ್ಬರದ ಅರ್ಧ ಶತಕಗಳ ಸಾಹಸದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್ ಲೀಗ್ನ ತನ್ನ ನಾಲ್ಕನೇ ಪಂದ್ಯದಲ್ಲಿ ಯು.ಪಿ.ವಾರಿಯರ್ಸ್ ವಿರುದ್ಧ ಸವಾಲಿನ ಮೊತ್ತವನ್ನು ಎದುರಾಳಿ ತಂಡಕ್ಕೆ ನೀಡಿತು.
ತವರಂಗಳದ ಮೊದಲ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ಮುಗ್ಗರಿಸಿದ್ದ ಬೆಂಗಳೂರು ತಂಡ, ಪುಟಿ ದೇಳುವ ಹಂಬಲದೊಂದಿಗೆ ವಾರಿಯರ್ಸ್ ವಿರುದ್ಧ ಕಣಕ್ಕಿಳಿಯಿತು. ಆದರೆ ತಂಡದ ಮೊತ್ತ 23 ರನ್ ಆಗುವಷ್ಟರಲ್ಲಿ ಸ್ಟಾರ್ ಆಟಗಾರ್ತಿ ಹಾಗೂ ನಾಯಕಿ ಸ್ಮೃತಿ ಮಂದಾನ 6 ರನ್ ಗಳಿಸಿ , ದೀಪ್ತಿ ಶರ್ಮಾ ರವರಿಗೆ ತಮ್ಮ ವಿಕೆಟ್ ಒಪ್ಪಿಸಿದರು.ಈ ಹಂತದಲ್ಲಿ ಎಲಿಸ್ ಪೆರ್ರಿ ಹಾಗೂ ಡೇನಿಯಲ್ ವ್ಯಾಟ್ ಇಬ್ಬರು ಜೊತೆಗೂಡಿ ಯುಪಿ ವಾರಿಯರ್ಸ್ ಬೌಲರ್ಸ್ ಗಳನ್ನು ದಂಡಿಸಿ ಉತ್ತಮ ಪಾರ್ಟ್ನರ್ಷಿಪನ್ನು ಕಲೆ ಹಾಕಿದರು.
ಪವರ್ ಪ್ಲೇ ಅವಧಿಯಲ್ಲಿ ಒಂದು ವಿಕೆಟ್ ಗೆ 42 ರನ್ ಕಲೆ ಹಾಕಿದ ಆರ್.ಸಿ.ಬಿ, 13 ಓವರ್ ಗಳಲ್ಲಿ 3 ಅಂಕಿ ಮೊತ್ತ ಮುಟ್ಟುವಲ್ಲಿ ಸಫಲವಾಯಿತು. ಈ ಕಷ್ಟದ ಸಮಯದಲ್ಲಿ ಆಶ್ಚರ್ಯದ ಬ್ಯಾಟಿಂಗ್ ತಾರೆ ಪೆರ್ರಿ ಕೇವಲ 36 ಎಸೆತಗಳಲ್ಲಿ 6 ಫೋರ್ ,1 ಸಿಕ್ಸರ್ ಸಹಿತ ಆರ್ಭಶತಕವನ್ನು ಪೂರ್ಣಗೊಳಿಸಿ ಅಭಿಮಾನಿಗಳಿಗೆ ಸಂತಸವನ್ನು ನೀಡಿದರು.
ಎಲೀಸ್ ಪೆರ್ರಿ ಏಳನೇ ಅರ್ಧಶತಕ ಗಳಿಸುವ ಮೂಲಕ ಡಬ್ಲ್ಯೂಪಿಎಲ್ ನಲ್ಲಿ ಅತ್ಯಧಿಕ ಅರ್ಧಶತಕ ಗಳಿಸಿದ ಮೆಗ್ ಲ್ಯಾನಿಂಗ್ಸ್ ಅವರ ದಾಖಲೆಯನ್ನು ಸರಿಗಟ್ಟಿದರು. ಹಾಗೂ ಡಬ್ಲ್ಯೂ ಪಿ ಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಸ್ಕೋರರ್ ಆಗಿ ಆರ್.ಸಿ.ಬಿ ಪರ ಪೆರ್ರಿ ಅವರು ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಎಕ್ಲಿ ಸ್ಟೋನ್ ಎಸೆದ 14ನೇ ಓವರ್ ನ 3 ನೇ ಎಸೆತವನ್ನು ಸಿಕ್ಸರ್ ಗೆ ಹಟ್ಟಿದ ವೇಟ್ ಕೂಡ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಸಂಭ್ರಮಿಸಿದರು. ಬಳಿಕ ಮತ್ತಷ್ಟು ಬಿರುಸಿನ ಆಟಕ್ಕೆ ಮುಂದಾಗಿ ಡೇನಿಯಲ್ ತಹ್ಲಿ ಯಾಗೆ ತಮ್ಮ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಬಿರುಸಾಗಿ ಸಾಗುತ್ತಿದ್ದ 66 ಎಸೆತಗಳಲ್ಲಿ 94 ರನ್ ಗಳ ಇಬ್ಬರ ಜೊತೆ ಆಟ ಕೊನೆಗೊಂಡಿತು. ಇದು ಆರ್ .ಸಿ. ಬಿ ಪರ ಯಾವುದೇ ವಿಕೆಟ್ ಗೆ ಮೂಡಿ ಬಂದ ನಾಲ್ಕನೇ ಗರಿಷ್ಠ ರನ್ ಜೊತೆ ಆಟವಾಗಿರುತ್ತದೆ.
ಅಗ್ರ ಕ್ರಮಾಂಕದ ಬ್ಯಾಟರ್ಗಳ ಅಬ್ಬರದ ಆಟವನ್ನು ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ಮುಂದುವರಿಸುವಲ್ಲಿ ವಿಫಲರಾದರು. ಬ್ಯಾಟಿಂಗ್ ಶಕ್ತಿ ಎನಿಸಿರುವ ರಿಚಾ ಘೋಷ್, ಕನಿಕ ಅಹುಜಾ,ಮತ್ತು ಜಾರ್ಜಿಯಾ ವೇರ್ ಹ್ಯಾಂ ಒಂದಂಕಿ ಮೊತ್ತಕ್ಕೆ ಸೀಮಿತರಾದರು. ಇದು ತಂಡದ ಸರಾಸರಿ ರೇಟ್ ಮೇಲೆ ಪರಿಣಾಮವನ್ನು ಬೀರಿತು. ಅಂತಿಮವಾಗಿ ಆರ್.ಸಿ.ಬಿ, ಎಲಿಸ್ ಪೆರ್ರಿ ಅವರ ಬಿರುಸಿನ ಆಟದ ನೆರವಿನಿಂದ 181 ರನ್ ಗುರಿ ಒಡ್ಡುವಲ್ಲಿ ಯಶಸ್ವಿಯಾಯಿತು.
ಸಂಕ್ಷಿಪ್ತ ಸ್ಕೋರ್ ವಿವರ ಇಲ್ಲಿದೆ.
ಆರ್.ಸಿ. ಬಿ :- 20 ಓವರ್ ಗಳಲ್ಲಿ 6 ವಿಕೆಟ್ ಗೆ 180 (ಎಲಿಸ್ ಪರಿ 90″, ಡೇನಿಯಲ್ ವೇಟ್ ಹಾಡ್ಜ್ :57, ;
(ತಹ್ಲಿಯಾ 30ಕ್ಕೆ1, ಹೆನ್ರಿ 34ಕ್ಕೆ1).
ಯುಪಿ ವಾರಿಯರ್ಸ್: 20 ಓವರ್ ಗಳಲ್ಲಿ 180 (ಎಕ್ಲೆಸ್ಟೋನ್ 33, ಶ್ವೇತಾ 31; ಸ್ನೇಹ ರಾಣಾ 27ಕ್ಕೆ3, ರೇಣುಕಾ 36ಕ್ಕೆ 2).
ಸೂಪರ್ ಓವರ್
ಯುಪಿ ವಾರಿಯರ್ಸ್ :- 1 ವಿಕೆಟ್ ಗೆ 8 ರನ್. ಆರ್.ಸಿ.ಬಿ :- ವಿಕೆಟ್ ಕಳೆದುಕೊಳ್ಳದೆ 4 ರನ್ .

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!