ಆಡಳಿತ, ವಿಪಕ್ಷ, ರಾಷ್ಟ್ರ ಮಟ್ಟದ ರಾಜಕಾರಣದ 48 ಮಂದಿಯ ಹನಿಟ್ರ್ಯಾಪ್ ಆಗಿದೆ-ರಾಜಣ್ಣ ಆಕ್ರೋಶ.

ಬೆಂಗಳೂರು :- ರಾಜಕಾರಣಿಗಳ ಹನಿಟ್ರ್ಯಾಪ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿಂದು ಘೋಷಿಸಿದರು.
ಹನಿಟ್ರ್ಯಾಪ್ ಪ್ರಕರಣಗಳು ಸಾರ್ವ ಜನಿಕ ಜೀವನದಲ್ಲಿರುವ ರಾಜಕಾರಣಿಗಳ ಬದುಕಿಗೆ ಹಾನಿ ಉಂಟು ಮಾಡುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್ ಹಾಗೂ ಮುನಿರತ್ನ ಅವರು ಸದನದಲ್ಲಿ ಮಾಡಿರುವ ಪ್ರಸ್ತಾಪವನ್ನು ಸರ್ಕಾರ ಗಂಭೀರ ವಾಗಿ ತೆಗೆದುಕೊಂಡಿದೆ. ಸಚಿವ ರಾಜಣ್ಣ ತಮಗೆ ಲಿಖಿತ ದೂರು ನೀಡುವುದಾಗಿ ಹೇಳಿದ್ದಾರೆ. ಅವರ ದೂರನ್ನು ಆಧರಿಸಿ ಉನ್ನತ ಮಟ್ಟದ ತನಿಖೆ ನಡೆಸಿ, ಸತ್ಯಾ ಸತ್ಯತೆ ಬಯಲು ಮಾಡುತ್ತೇನೆ.
ಸದನದ ಪ್ರತಿಯೊಬ್ಬ ಸದಸ್ಯರ ಹಕ್ಕು ಕಾಪಾಡುವುದು ನಮ್ಮ ಕರ್ತವ್ಯ ಹನಿಟ್ರಾಪ್ ಮೂಲಕ ಜನಪ್ರತಿನಿಧಿಗಳ ಗೌರವಕ್ಕೆ ಚ್ಯುತಿ ತರುವುದನ್ನು ಕೊನೆಗಾಣಿಸುತ್ತೇನೆ. ರಾಜ್ಯ ವಿಧಾನಮಂಡಲಕ್ಕೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಗೌರವ ಇದೆ. ಅದಕ್ಕೆ ಚ್ಯುತಿ ತರಲು ಬಿಡುವುದಿಲ್ಲ. ಈ ಸದನದಲ್ಲಿ ದೊಡ್ಡ ಮಹನೀಯರು ತಮ್ಮ ಆದರ್ಶ ಮತ್ತು ಛಾಪು ಮೂಡಿಸಿದ್ದಾರೆ. ಹನಿ ಟ್ರ್ಯಾಪ್ ಮೂಲಕ ಸದಸ್ಯರ ಗೌರವಕ್ಕೆ ಚ್ಯುತಿ ತಂದು ಅವರುಗಳ ಕುಟುಂಬದ ಮಾನ ತೆಗೆಯುತ್ತಿರುವವರ ವಿರುದ್ಧ ಕಠಿಣ ಕ್ರಮ ತಗೆದುಕೊಳ್ಳುವುದಾಗಿ ತಿಳಿಸಿದರು.

ಚರ್ಚೆ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಸಚಿವರು. ಶಾಸಕರನ್ನು ಹನಿಟ್ರಾಪ್ ಮಾಡಲಾಗಿದೆ. ಸಹಕಾರ ಸಚಿವ ರಾಜಣ್ಣ ಅವರ ಮೇಲೆಯೇ ಹನಿಟ್ರ್ಯಾಪ್ ಆಗಿದೆ. ಇದನ್ನು ಸರ್ಕಾರ ಮಾಡಿಸುತ್ತಿದೆಯೇ ಅಥವಾ ಸರ್ಕಾರದಲ್ಲಿರುವವರು ಮಾಡುತ್ತಿದ್ದಾ ರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಗೃಹ ಸಚಿವರೂ ಸದನದಲ್ಲಿದ್ದಾರೆ. ಅವರು ಉತ್ತರ ನೀಡಬೇಕು ಮತ್ತು ಹನಿಟ್ರ್ಯಾಪ್ ಮಾಡುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕೆ ಉನ್ನತ ಮಟ್ಟದ ತನಿಖೆ ನಡೆಸಿ ಎಂದು ಆಗ್ರಹಿಸಿದರು. ಸದನದಲ್ಲೇ ಇದ್ದ ರಾಜಣ್ಣ, ನನ್ನ ಹೆಸರನ್ನು ಪ್ರಸ್ತಾಪಿಸಿರುವುದರಿಂದ ನಾನು ವಾಸ್ತವಾಂಶ ತಿಳಿಸಲೇಬೇಕು. ಕರ್ನಾಟಕ ಎಂದರೆ, ಪೆನ್ಡ್ರೈವ್ ಮತ್ತು ಸಿ.ಡಿ. ಫ್ಯಾಕ್ಟರಿ ಎಂಬ ಕುಖ್ಯಾತಿ ಆಗಿದೆ, ಸದನದಲ್ಲಿರುವ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರಲ್ಲದೆ, ರಾಷ್ಟ್ರಮಟ್ಟದ ರಾಜಕಾರಣದ 48 ಮಂದಿಯ ಹನಿಟ್ರ್ಯಾಪ್ ನಡೆದಿದೆ.
ಇದರ ಹಿಂದಿರುವವರು ಬಹಿರಂಗ ಗೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ನಾನು, ಗೃಹ ಸಚಿವರಿಗೆ ಲಿಖಿತ ದೂರು ನೀಡುತ್ತೇನೆ. ಈ ಸಿ.ಡಿ. ಮತ್ತು ಪೆನ್ ಡ್ರೈವ್ಗಳ ನಿರ್ಮಾಪಕರು, ನಿರ್ದೇಶಕರು, ನಟರು ಸೇರಿದಂತೆ ಯಾರೆಲ್ಲಾ ಭಾಗಿಯಾಗಿ ದ್ದಾರೆ ಅವರನ್ನು ಹೊರಗೆಳೆಯಬೇಕು. ನನ್ನ ಬಳಿ ಕೆಲವು ಮಹತ್ವದ ದಾಖಲೆ ಗಳಿವೆ. ಅವುಗಳನ್ನು ಗೃಹ ಸಚಿವರಿಗೆ ದೂರು ಪ್ರತಿಯ ಜೊತೆ ನೀಡುತ್ತೇನೆ. ಹಾಸನದಲ್ಲಿ
ನಡೆದ ಸಿಡಿ ಮತ್ತು ಪೆನ್ಡ್ರೈವ್ ಪ್ರಕರಣ ಬಯಲಾಗಿ ನೂರಾರು ಹೆಣ್ಣುಮಕ್ಕಳ ಬಾಳು ಹಾಳಾಗಿದೆ. ಇನ್ನು ಮುಂದೆ ಇಂತಹ ಕೃತ್ಯಗಳು ರಾಜ್ಯದಲ್ಲಿ ನಡೆಯಬಾರದು. ಈ ಪಿತೂರಿ ಹಿಂದೆ ಯಾರೆಲ್ಲಾ ಇದ್ದಾರೋ ಅವರ ಮುಖವಾಡ ಕಳಚಬೇಕು, ಗೃಹ ಸಚಿವರು ಇದರತ್ತ ತಕ್ಷಣ ಕಾರ್ಯಮಗ್ನ ರಾಗಬೇಕು ಎಂದು ಮನವಿ ಮಾಡಿದರು.

ನನ್ನ ಮನೆ ಹಾಳು ಮಾಡಿದರು:
ರಾಜಣ್ಣ ಮಾತು ಮುಗಿಸುತ್ತಿದ್ದಂತೆ ಹನಿಟ್ರ್ಯಾಪ್ಗೆ ಒಳಗಾಗಿ ಜೈಲು ಸೇರಿದ್ದ ಬಿಜೆಪಿ ಶಾಸಕ ಮುನಿರತ್ನ ಮಾತನಾಡಿ, ರಾಜಕೀಯ ದ್ವೇಷ ದಿಂದ ಸಿ.ಡಿ. ಮಾಡಿ ನನ್ನ ಮನೆ ಹಾಳು ಮಾಡಿದರು. ನಾನೊಬ್ಬನೇ ಅಲ್ಲ, ರಮೇಶ್ ಜಾರಕಿಹೊಳಿ, ಎಚ್.ಡಿ.ರೇವಣ್ಣ ಕುಟುಂಬ ವನ್ನು ಸಿ.ಡಿ. ಮತ್ತು ಪೆನ್ಡ್ರೈವ್ ಫ್ಯಾಕ್ಟರಿ ಮಾಲೀಕ ನಾಶ ಮಾಡಿದ. ನನ್ನ ಮೇಲೆ ಸುಳ್ಳು ರೇಪ್ ಕೇಸ್ ಹಾಕಿಸಿ ಜೈಲಿಗೆ ಹೋಗುವಂತೆ ಮಾಡಿದ.
ಉನ್ನತ ಮಟ್ಟದ ತನಿಖೆಗೆ ನಿರ್ಧಾರ
ನಾನು ರೇಪ್ ಮಾಡಿಲ್ಲ ಬೇಕಿದ್ದರೆ, ಆತ ನಂಬುವ ದೇವರುಗಳ ಮೇಲೆ ಆಣೆ ಮಾಡಲಿ. ನಾನೂ ಮಾಡುತ್ತೇನೆ ಎಂದು ಸದನದಲ್ಲಿ ದೇವರುಗಳ ಚಿತ್ರಗಳನ್ನು ಪ್ರದರ್ಶಿಸಿದರು. ನನ್ನ ಮೇಲೆ ರೇಪ್ ಆರೋಪ ಮಾಡಿದಾಕೆ ಇರುವುದು ಎಲ್ಲೋ, ನನ್ನ ವಿರುದ್ಧ ರಾಮನಗರದಲ್ಲಿ ಪ್ರಕರಣ ದಾಖಲಿಸಿ, ನಮ್ಮ ಕುಟುಂಬದ ಮಾನ ಹರಾಜು ಮಾಡಿದ. ಈಗಲೂ ನಮ್ಮ ಮೊಮ್ಮಕ್ಕಳು ಬೀದಿಯಲ್ಲಿ ತಲೆ ಎತ್ತಿ ಓಡಾಡದಂತೆ ಆಗಿದೆ.
ನನ್ನ ಮೇಲಿನ ರೇಪ್ ಪ್ರಕರಣವನ್ನು ಸಿಬಿಐಗೆ ವಹಿಸಿ, ಸತ್ಯಾಸತ್ಯತೆ ಹೊರ ಬರಲಿ, ನೀವು ಇದನ್ನು ಹೀಗೇ ಬಿಟ್ಟರೆ ಅವನು ಉನ್ನತ ಅಧಿಕಾರ ಪಡೆಯಲು ತನ್ನ ವಿರೋಧಿಗಳೆಲ್ಲರನ್ನೂ ಹನಿಟ್ರ್ಯಾಪ್ ಮಾಡುತ್ತಾನೆ ಎಂದು ಗುಡುಗಿದರು.
ಮುನಿರತ್ನ ಮಾತಿಗೆ ಬೆಂಬಲ ವ್ಯಕ್ತಪಡಿಸಿದ ಸುನೀಲ್ ಕುಮಾರ್, ಸಿ.ಡಿ. ಮತ್ತು ಪೆನ್ಡ್ರೈವ್ ಫ್ಯಾಕ್ಟರಿ ಹಿಂದಿರುವ ಕೈಗಳನ್ನು ಬಹಿರಂಗಪಡಿಸಿ, ನಾವು ಸಾರ್ವ ಜೆನಿಕ ಜೀವನದಲ್ಲಿ ಇರುವವರು ಕೆಲವು ವಿಷಯಗಳನ್ನು ವಿರೋಧಿಸುತ್ತೇವೆ. ಹಾಗಂತ, ನಮ್ಮಗಳ ವಿರುದ್ಧ ಹನಿಟ್ರ್ಯಾಪ್ ಮಾಡಿಸಿದರೆ, 224 ಸದಸ್ಯರ ಗತಿ ಏನು,
ಉನ್ನತ ಹುದ್ದೆ ಪಡೆಯಲೋ ಅಥವಾ ಬೇರೆ ಉದ್ದೇಶಕ್ಕೋ ಅವರನ್ನು ವಿರೋ ಧಿಸುವವರನ್ನೆಲ್ಲಾ ಹನಿಟ್ರ್ಯಾಪ್ ಮಾಡುತ್ತಾ ಹೋದರೆ, ಇದು ಎಲ್ಲಿಗೆ ತಲುಪುತ್ತೆ. ರಾಜ್ಯ ವಿಧಾನಮಂಡಲದ ಗೌರವ ಕಾಪಾಡಲು ಗೃಹ ಸಚಿವರು ಸಿ.ಡಿ., ಪೆನ್ಡ್ರೈವ್ ಪ್ರಕರಣಗಳಿಗೆ ಇತಿಶ್ರೀ ಹಾಡಬೇಕು ಎಂದು ಆಗ್ರಹಿಸಿದರು. ಸಚಿವರಿಂದ ಸಿಎಂ ಭೇಟಿ: ಹನಿಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಸಚಿವರುಗಳು ಇಂದು ಸಂಜೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತ್ತು ವಿಧಾನಪರಿಷತ್ ಸದಸ್ಯರೂ ಆದ ಅವರ ಪುತ್ರ ರಾಜೇಂದ್ರ ಅವರನ್ನು ಹನಿಟ್ರಾಪ್ ಮಾಡಲು ಯತ್ನಿಸಿರುವ ಬಗ್ಗೆ ಇಂದು ವಿಧಾನಸಭೆಯಲ್ಲಿ ಭಾರೀ ಚರ್ಚೆ ನಡೆದಿತ್ತು. ಮಂಡಿ ನೋವಿ ನಿಂದಾಗಿ ಮುಖ್ಯಮಂತ್ರಿಗಳು ಸದನದಲ್ಲಿ ಹಾಜರಿರಲಿಲ್ಲ. ಇಂದು ಸದನ ಆರಂಭವಾಗುವ ಮುನ್ನವೇ ಸಚಿವ ಸತೀಶ್ ಜಾರಕಿಹೊಳಿ ಅವರು ಹನಿಟ್ರಾಪ್ ಬಗ್ಗೆ ಮಾದ್ಯಮಗಳಿಗೆ ಹೇಳಿಕೆ ನೀಡಿ, ನಂತರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು.

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು