ಮಾನವೀಯತೆಗೆ ಮಾದರಿಯಾದ ಮಾನವ…. ದೇವರಂತೆ ಬಂದು ಅಜ್ಜಿ ಹಾಗೂ ಗೋವಿನ ಹಸಿವು ನೀಗಿಸಿದ ವ್ಯಕ್ತಿ…

ಇದು ಕಲಿಯುಗ, ಎಂತಹ ಚಿತ್ರ ವಿಚಿತ್ರ ಘಟನೆಗಳನ್ನು ನಾವು ನೋಡ್ತಾ ಇರ್ತೀವಿ ಹಾಗೂ ಕೇಳ್ತಾ ಇರ್ತೀವಿ. ಹೆತ್ತ ತಂದೆ ತಾಯಿಗಳನ್ನೇ ನೋಡಿಕೊಳ್ಳಲು ಹಿಂಜರಿಯುವ ಈ ಕಾಲದಲ್ಲಿ ವ್ಯಕ್ತಿಯೊಬ್ಬ ತರಕಾರಿ ಮಾರುವ ಅಜ್ಜೀ ಹಾಗೂ ಹಸುವಿನ ಹೊಟ್ಟೆ ತುಂಬಿಸಿದ್ದಾನೆ.ಕೆಲವರು ಏನು ಪ್ರತಿಫಲ ಅಪೇಕ್ಷಿಸದೇ ಇನ್ನೊಬ್ಬರಿಗೆ ಸಹಾಯ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಇಂತಹ ಕೆಲವು ವಿಡಿಯೋಗಳು ಮನಸ್ಸಿಗೆ ತುಂಬಾನೇ ಹತ್ತಿರವಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ದುಡಿಯುವ ಕೈಗೆ ಆಸರೆಯಾಗದ್ದು, ಹಸಿದ ಗೋವಿಗೆ ಅನ್ನದಾತನಾಗಿದ್ದು, ಅದರಲ್ಲೇ ಸಂತೋಷ ಕಂಡುಕೊಂಡಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ವ್ಯಕ್ತಿಯ ಹೃದಯಶ್ರೀಮಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈಗಿನ ಕಾಲದಲ್ಲಿ ಮಾನವೀಯತೆ ಹಾಗೂ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ವ್ಯಕ್ತಿಗಳನ್ನು ನೋಡುವುದೇ ಕಷ್ಟ. ಒಬ್ಬರ ಹಸಿವನ್ನು ನೀಗಿಸುವುದು ಹಾಗೂ ಮುಖದಲ್ಲಿ ನಗು ತರಿಸುವುದು ಅಷ್ಟು ಸುಲಭವಲ್ಲ. ಈಗಿನ ಕಾಲದಲ್ಲಿ ಎಲ್ಲರಿಗೂ ಇಂತಹ ಮನಸ್ಸು ಇರುವುದಿಲ್ಲ. ಆದರೆ ಕಷ್ಟಕ್ಕೆ ಮರುಗುವ, ಇನ್ನೊಬ್ಬರಿಗೆ ಸಾಹಸ ಮಾಡುವ ವ್ಯಕ್ತಿಗಳನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಇದಕ್ಕೆ ಉದಾಹರಣೆ ಎನ್ನುವಂತಹ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇಲ್ಲೊಬ್ಬ ಮಹಾನುಭಾವ ಗೋವಿನ ಹಸಿವನ್ನು ನೀಗಿಸಿ, ಹಿರಿ ಜೀವಕ್ಕೆ ಆಸರೆಯಾಗುವ ಮೂಲಕ ಅಜ್ಜಿಯ ಮುಖದಲ್ಲಿ ನಗುವನ್ನು ಮೂಡಿಸಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ವ್ಯಕ್ತಿಯೂ ಗುಣವನ್ನು ಕೊಂಡಾಡಿದ್ದಾರೆ.

ವ್ಯಕ್ತಿಯೊಬ್ಬನು ಕ್ಯಾರೆಟ್ ತಿನ್ನುತ್ತಾ ನಿಂತಿರುವುದನ್ನು ನೋಡಬಹುದು. ಆ ಬಳಿಕ ಗೋವೊಂದು ಈತನ ಬಳಿ ಬಂದು ಕೈಯಲ್ಲಿದ್ದ ಕ್ಯಾರೆಟ್ ತಿಂದಿದೆ. ತದನಂತರದಲ್ಲಿ ರಸ್ತೆಯ ಬಳಿ ಕ್ಯಾರೆಟ್ ಮಾರಾಟ ಮಾಡುತ್ತಿದ್ದ ಅಜ್ಜಿಯ ಬಳಿ ಹೋಗಿದ್ದು ಆಕೆಯ ಬಳಿಯಿದ್ದ ಎಲ್ಲಾ ಕ್ಯಾರೆಟನ್ನು ತಾನೇ ಖರೀದಿಸಿದ್ದಾನೆ. ಅಜ್ಜಿಯ ಕೈಗೆ ಒಂದಿಷ್ಟು ಹಣವನ್ನು ಇಟ್ಟು ಅಲ್ಲಿಂದ ಹೊರಟಿದ್ದಾನೆ. ತದನಂತರದಲ್ಲಿ ತಾನು ಖರೀದಿಸಿರುವ ಕ್ಯಾರೆಟ್ ಎಲ್ಲವನ್ನು ಅಲ್ಲೇ ಇದ್ದ ಹಸುಗಳಿಗೆ ತಿನ್ನಲು ಇಟ್ಟು ಅವುಗಳ ಹಸಿವನ್ನು ನೀಗಿಸಿರುವುದನ್ನು ನೀವಿಲ್ಲಿ ನೋಡಬಹುದು.ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರು ಈತನ ಮಾಡಿದ ಒಳ್ಳೆಯ ಕೆಲಸಕ್ಕೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಪ್ರಾಣಿಗಳು ಒಳ್ಳೆಯ ವ್ಯಕ್ತಿಗಳನ್ನು ಬಹುಬೇಗನೇ ಗುರುತಿಸುತ್ತವೆ’ ಎಂದಿದ್ದಾರೆ. ಇನ್ನೊಬ್ಬರು, ‘ಇಂತಹ ವ್ಯಕ್ತಿಗಳನ್ನು ನೋಡಿದಾಗ ನಿಜಕ್ಕೂ ಖುಷಿಯಾಗುತ್ತದೆ. ಸ್ವಾರ್ಥಿಗಳ ಪ್ರಪಂಚದಲ್ಲಿ ಈ ವ್ಯಕ್ತಿ ಮಾಡುವ ಕೆಲಸಗಳು ಎಲ್ಲರಿಗೂ ಮಾದರಿ’ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊರ್ವ ಬಳಕೆದಾರರು, ‘ಈ ಜಗತ್ತಿನ ಎಲ್ಲಾ ಗೌರವವು ನಿಮ್ಮಂತಹ ವ್ಯಕ್ತಿಗೆ ಸಿಗಬೇಕು’ಎಂದಿದ್ದಾರೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

  ಒಡಿಶಾದ ಶಿಕ್ಷಾ ಓ ಅನುಸಂಧಾನ ವಿಶ್ವವಿದ್ಯಾಲಯವು ಕರ್ನಾಟಕದ ಹೆಮ್ಮೆಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ, ನ್ಯಾಯದ ಪರವಾದ ಬದ್ಧತೆ, ವಿದ್ವತ್ತು ಹಾಗೂ ಮಾನವೀಯ ಮೌಲ್ಯಗಳ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!