RCB vs CSK ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿ.

ಇಂಡಿಯನ್ ಪ್ರೀಮಿಯರ್ ಲೀಗ್ನ 52ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡ 20 ಓವರ್ಗಳಲ್ಲಿ 213 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 16.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿದ್ದರು. ಅದರಂತೆ ಕೊನೆಯ 22 ಎಸೆತಗಳಲ್ಲಿ ಸಿಎಸ್ಕೆ ತಂಡಕ್ಕೆ ಕೇವಲ 42 ರನ್ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ಕಣಕ್ಕಿಳಿದ ಡೆವಾಲ್ಡ್ ಬ್ರೆವಿಸ್ ಲುಂಗಿ ಎನ್ಗಿಡಿ ಎಸೆತದಲ್ಲಿ ಎಲ್ಬಿ ಆಗಿದ್ದರು. ಆರ್ಸಿಬಿ ಆಟಗಾರರ ಮನವಿಗೆ ಅಂಪೈರ್ ಎಲ್ಬಿಡಬ್ಲ್ಯೂ ಔಟ್ ನೀಡಿದರು. ಆದರೆ ನಿಯಮ ಗೊತ್ತಿಲ್ಲದೆ ಬ್ಯಾಟರ್ಗಳು ರನ್ ಕದಿಯಲು ಓಡಿದ್ದು ಸಿಎಸ್ಕೆ ಪಾಲಿಗೆ ದುಬಾರಿಯಾಯಿತು.ಐಪಿಎಲ್ ನಿಯಮದ ಪ್ರಕಾರ, ಎಲ್ಬಿಡಬ್ಲ್ಯೂ ಆದರೆ 15 ಸೆಕೆಂಡ್ಗಳ ಒಳಗೆ ಡಿಆರ್ಎಸ್ಗೆ ಮನವಿ ಸಲ್ಲಿಸಬೇಕು. ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ, ಮನವಿಯನ್ನು ತಿರಸ್ಕರಿಸಲಾಗುತ್ತದೆ. ಆದರೆ ಈ ನಿಯಮದ ಬಗ್ಗೆ ಅರಿವಿಲ್ಲದೆ, ಡೆವಾಲ್ಡ್ ಬ್ರೆವಿಸ್ ಹಾಗೂ ರವೀಂದ್ರ ಜಡೇಜಾ 2 ರನ್ ಓಡಿದ್ದಾರೆ. ಅದರಲ್ಲೂ ಒಂದು ರನ್ ಕಲೆಹಾಕಿದ ಬಳಿಕ ಡಿಆರ್ಎಸ್ಗೆ ಮನವಿ ಸಲ್ಲಿಸಿದ್ದರೂ ಬ್ರೆವಿಸ್ ಅವರಿಗೆ ರಿವ್ಯೂ ಲಭಿಸುತ್ತಿತ್ತು.

ಇದರ ಪರಿಕಲ್ಪನೆಯೇ ಇಲ್ಲದೆ, ರವೀಂದ್ರ ಜಡೇಜಾ ಡೆವಾಲ್ಡ್ ಬ್ರೆವಿಸ್ ಅವರನ್ನು 2ನೇ ರನ್ಗಾಗಿ ಕರೆದಿದ್ದಾರೆ. ಇತ್ತ ಕಡೆಯಿಂದ ಸ್ಟ್ರೈಕ್ನತ್ತ ಓಡಿದ ಬ್ರೆವಿಸ್ ಆ ಬಳಿಕ ಜಡೇಜಾ ಜೊತೆ ಚರ್ಚಿಸಿ ಡಿಆರ್ಎಸ್ಗೆ ಮನವಿ ಸಲ್ಲಿಸಿದ್ದಾರೆ. ಅಷ್ಟರಲ್ಲಾಗಲೇ ಟೈಮರ್ 25 ಸೆಕೆಂಡ್ಗಳನ್ನು ದಾಟಿತ್ತು. ಅಂದರೆ 15 ಸೆಕೆಂಡ್ಗಳಲ್ಲಿ ತೆಗೆದುಕೊಳ್ಳಬೇಕಾದ ರಿವ್ಯೂ ಅನ್ನು ಬ್ರೆವಿಸ್ 25 ಸೆಕೆಂಡ್ಗಳ ಬಳಿಕ ತೆಗೆದುಕೊಂಡಿದ್ದಾರೆ. ಹೀಗಾಗಿ ಅಂಪೈರ್ ಮನವಿಯನ್ನು ತಿರಸ್ಕರಿಸಿದರು.

ಇದರಿಂದಾಗಿ ಡೆವಾಲ್ಡ್ ಬ್ರೆವಿಸ್ ಮೇಲ್ಮನವಿ ಇಲ್ಲದೆ ಪೆವಿಲಿಯನ್ಗೆ ಹಿಂತಿರುಗಬೇಕಾಯಿತು. ಕುತೂಹಲಕಾರಿ ವಿಷಯ ಎಂದರೆ ಅದು ನಾಟೌಟ್ ಆಗಿತ್ತು. ಅಂದರೆ ರಿಪ್ಲೇ ವಿಡಿಯೋದಲ್ಲಿ ಡೆವಾಲ್ಡ್ ಬ್ರೆವಿಸ್ ಕಾಲಿಗೆ ತಾಗಿದ ಚೆಂಡು ವಿಕೆಟ್ನಿಂದ ದೂರ ಸಾಗುತ್ತಿರುವುದು ಕಂಡು ಬಂದಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ಅಂಪೈರ್ ಔಟ್ ಎಂದು ತೀರ್ಪು ನೀಡಿದ ಬಳಿಕ ಓಡಿದ ರನ್ಗಳನ್ನು ಪರಿಗಣಿಸಲಾಗುವುದಿಲ್ಲ ಎಂಬುದು. ಅಲ್ಲದೆ ಡಿಆರ್ಎಸ್ ತೆಗೆದುಕೊಳ್ಳುವ ಮುನ್ನ ಓಡಿದ ರನ್ಗಳನ್ನು ನೀಡಲಾಗುವುದಿಲ್ಲ.

ಈ ಸಾಮಾನ್ಯ ನಿಯಮಗಳು ಕೂಡ ರವೀಂದ್ರ ಜಡೇಜಾ ಹಾಗೂ ಡೆವಾಲ್ಡ್ ಬ್ರೆವಿಸ್ಗೆ ಗೊತ್ತಿರಲಿಲ್ಲ. ಪರಿಣಾಮ ಡಿಆರ್ಎಸ್ ತೆಗೆದುಕೊಳ್ಳದೇ ರನ್ಗಾಗಿ ಓಡಿದ್ದಾರೆ. ಹೀಗೆ ರನ್ಗಳಿಸಲು ಓಡಿದ್ದರ ಪರಿಣಾಮ ಡೆವಾಲ್ಡ್ ಬ್ರೆವಿಸ್ ಡಿಆರ್ಎಸ್ ಅವಕಾಶವನ್ನು ತಪ್ಪಿಸಿಕೊಂಡರು. ಅಲ್ಲದೆ ನಾಟೌಟ್ ಆಗಿದ್ದರೂ, ರಿವ್ಯೂ ಅವಕಾಶವಿಲ್ಲದೆ ಬ್ರೆವಿಸ್ ಪೆವಿಲಿಯನ್ ಸೇರಬೇಕಾಯಿತು. ಒಂದು ವೇಳೆ ಅತ್ಯುತ್ತಮ ಫಾರ್ಮ್ನಲ್ಲಿದ್ದ ಬ್ರೆವಿಸ್ ಕಡೆಯಿಂದ ಒಂದೆರಡು ಬಿಗ್ ಹಿಟ್ ಮೂಡಿಬಂದಿದ್ದರೆ ಸಿಎಸ್ಕೆ ತಂಡವು ಗೆಲ್ಲುವ ಅವಕಾಶವಿರುತ್ತಿತ್ತು. ಆದರೆ ಡಿಆರ್ಎಸ್ ನಿಯಮ ಗೊತ್ತಿಲ್ಲದೆ ಸಿಎಸ್ಕೆ ಬ್ಯಾಟರ್ಗಳು ಮಾಡಿದ ಪ್ರಮಾದದಿಂದಾಗಿ ಚೆನ್ಣೈ ಸೂಪರ್ ಕಿಂಗ್ಸ್ ತಂಡವು 2 ರನ್ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!