ಮಾಲಗತ್ತಿ ದಶಬಲ ಟ್ರಸ್ಟ್ ವತಿಯಿಂದ ‘ಕಾವ್ಯ ಡಮರುಗ’ 2025ರ ರಾಜ್ಯ ಮಟ್ಟದ ಕವಿಗೋಷ್ಠಿ.

ಮೈಸೂರು : ಮಾಲಗತ್ತಿ ದಶಬಲ ಟ್ರಸ್ಟ್ ರೈಟರ್ಸ್ ಅಕಾಡೆಮಿ ವತಿಯಿಂದ ಮಾನಸ ಗಂಗೋತ್ರಿ ಯ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಕಾವ್ಯ ಡಮರುಗ 2025 ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಕವನ ಸಂಕಲನಾ ಮತ್ತು ಕಂಡ ಕಾವ್ಯ ಬಿಡುಗಡೆ ಸಮಾರಂಭವನ್ನು ಇಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ. ಶ್ರೀ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಸಮಾರಂಭದ ಉದ್ಘಾಟನೆಯನ್ನು ಬೆಂಗಳೂರು ಐಪಿಎಸ್ ಅಧಿಕಾರಿ ಹಾಗೂ ಖ್ಯಾತ ಸಾಹಿತಿಗಳಾದ ಡಾ. ಧರಣಿ ದೇವಿ ಮಾಲಗತ್ತಿಯವರು ನೆರವೇರಿಸಿದರು.
ಕಾರ್ಯಕ್ರಮದ ಕುರಿತು ಪ್ರಾಥಮಿಕ ನುಡಿಯನ ಡಾ. ನೀ.ಗೂ. ರಮೇಶ್ ನೀಡಿದರು . ಅಧ್ಯಕ್ಷತೆಯನ್ನು ಮೈಸೂರು ದಶಬಲ ಟ್ರಸ್ಟ್ ನ ಉಪಾಧ್ಯಕ್ಷರಾದ ಡಾ. ಡಿಕೆ ರಾಜೇಂದ್ರ ಅವರು ವಹಿಸಿಕೊಂಡಿದ್ದರು. ಹೆಸರಾಂತ ವಿಮರ್ಶಕರಾದ ಡಾ. ಆಶಾದೇವಿ ಎಂಎಸ್ ರವರು ಕಂಡ ಕಾವ್ಯದ ಬಿಡುಗಡೆ ಹಾಗೂ ಯವ್ವ ತಾಯವ್ವ ಮಾತೆಯ ಮಹಾಗೀತೆ ಪುಸ್ತಕಗಳನ್ನ ಬಿಡುಗಡೆಗೊಳಿಸಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ಇನ್ ಕೆ ಲೋಲಾಕ್ಷಿ ಹಾಗು ಡಾ. ಅರವಿಂದ ಮಾಲಗತ್ತಿ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕಾವ್ಯ ಡಮರುಗ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬೆಂಗಳೂರಿನ ಪ್ರಖ್ಯಾತ ಕವಿಗಳಾದ ಬಿ. ಆರ್. ಲಕ್ಷ್ಮಣರಾವ್ ನೆರವೇರಿಸಿದರು.
ಕವಿಮಾತು: ಸೋಸಲೆ ಗಂಗಾಧರ್, ಮೈಸೂರು

ಆಹ್ವಾನಿತ ಕವಿಗಳ ಪಟ್ಟಿ

  1. ಧಾರಿಣಿ ಮಾಯಾ, ಬೆಂಗಳೂರು
  2. ಜಯಪ್ಪ ಹೊನ್ನಾಳಿ
  3. ಡಾ. ಮೈಸೂರು ಉಮೇಶ್
  4. ಡಿ. ಬಿ. ಢಂಗ, ಧಾರವಾಡ
  5. ಮೀನಾ ಮೈಸೂರು
  6. ರೇಚಂಬಳ್ಳಿ ದುಂಡಮಾದಯ್ಯ, ಚಾಮರಾಜನಗರ
  7. ಪ್ರಶಾಂತ್ ಬೆಳತೂರು, ಮೈಸೂರು
  8. ವಾಸಂತಿ ಸಾಲ್ಮನಿ, ವಿಜಯನಗರ
  9. ರಹಮತ್ ಉನ್ನೀಸಾ, ಚಿತ್ರದುರ್ಗ
  10. ಭಾರತಿ ಮೂಲಿಮನಿ, ವಿಜಯನಗರ
  11. ಡಾ. ದೊಡ್ಡಗೌಡ ಬಿ. ಸಿ, ಹಾಸನ
  12. ಅಭಿಷೇಕ್ ವೈ.ಎಸ್. ಮೈಸೂರು
  13. ಸುಜ್ಜಲೂರು ಮಹದೇವಸ್ವಾಮಿ, ಮೈಸೂರು
  14. ಗಂಗಾಧರ್ ಬನ್ನಿಹಟ್ಟಿ, ಶಿವಮೊಗ್ಡಾ.
  15. ದಕ್ಷ ಮಾಲಗತ್ತಿ, ಮಂಗಳೂರು
  16. ಸೌಮ್ಯಶ್ರೀ ನಿಕ್ಕಂ, ದಾವಣಗೆರೆ
  17. ತೋಟದಮೋನ ಕೃಷ್ಣಮೂರ್ತಿ, ತುಮಕೂರು
  18. ಶಂಭುಲಿಂಗ ಎಂ, ಮಂಡ್ಯ
  19. ಸುಮಂಗಲಾ ರವಿ ಚಕ್ರಸಾಲಿ, ದಕ್ಷಿಣಕನ್ನಡ
  20. ಗುಡ್ಡಪ್ಪ ಎನ್ ಚಟ್ರಮ್ಮನವರ, ಹಾವೇರಿ
  21. ನಳಿನಿ ಬಾಲಸುಬ್ರಮಣ್ಯ, ಶಿವಮೊಗ್ಗ
  22. ಸತೀಶ್ ಗರಣಿ, ಬೆಂಗಳೂರು
  23. ರಜಿತಾ ಕಾರ್ಯಪ್ಪ, ಕೊಡಗು
  24. ಡಾ. ಮಂಜುನಾಥ ಅರ್ಕಸಾಲಿ, ಗದಗ
  25. ಶಾಲಿನಿ ಎಂ ಗೌಡ, ಚಿಕ್ಕಮಗಳೂರು
  26. ಚನ್ನಪ್ಪ ಎಸ್ ಬಾಗ್ಲಿ, ಯಾದಗಿರಿ
  27. ಧನಂಜಯ ಮೆಂಗಸಂದ್ರ, ಚಿತ್ರದುರ್ಗ
  28. ಸುಭಾಷ್ ಹೇಮಣ್ಣ ಚವ್ಹಾಣ, ಹುಬ್ಬಳ್ಳಿ
  29. ಹನುಮೇಶ ಹೆಚ್. ಬಿ, ಕೊಪ್ಪಳ
  30. ಶಿವಲೀಲಾ ಅರ್ಜುನ ಕೋರವಾರ, ವಿಜಯಪುರ
  31. ಕೃಷ್ಣ ಜಿ, ಉಡುಪಿ

ರೈಟರ್ಸ್ ಅಕಾಡೆಮಿಯು ತನ್ನ ಸಂಸ್ಥೆಯ ಕುರಿತಾಗಿ ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಮಾಲಗತ್ತಿ ಎಂಬ ಹೆಸರು ಇಂದು ಒಬ್ಬ ವ್ಯಕ್ತಿಯ ಹೆಸರೋ ಮನೆತನದ ಹೆಸರೋ ಆಗಿ ಉಳಿದಿಲ್ಲ. ಬದಲಿಗೆ ಅದೊಂದು ಮಾದರಿಯಾಗಿ ರೂಪುಗೊಂಡಿದೆ. ‘ಮಾಲಗತ್ತಿ’ ಎಂಬುದು ಒಂದು ಸಾಹಿತ್ಯಕ ಮಾದರಿ, ಆಡಳಿತದ ಮಾದರಿ, ಕಾರ್ಯದಕ್ಷತೆಯ ಮಾದರಿ, ಸ್ವಾಭಿಮಾನದ ಮಾದರಿ, ಪ್ರಗತಿಪರ ಆಲೋಚನೆಯ ಮಾದರಿ. ಅದನ್ನು ಆ ಕುಟುಂಬದ ಕುಡಿಗಳು ಸಾಬೀತು ಮಾಡಿದ್ದಾರೆ. ಅವರೆಲ್ಲರೂ ಅಷ್ಟಕ್ಕೇ ತೃಪ್ತರಾಗದೆ ತಮ್ಮ ಇಡೀ ಕುಟುಂಬ ಸಮಾಜದಿಂದ ಪಡೆದುಕೊಂಡಿರುವುದನ್ನು ಸಾಧ್ಯವಾದಷ್ಟು ಸಮಾಜಕ್ಕೆ ಹಿಂತಿರುಗಿಸಲು ಮುಂದಾಗಿದ್ದಾರೆ. ಅದರ ಫಲವಾಗಿ ಹುಟ್ಟಿಕೊಂಡಿದ್ದು ‘ಮಾಲಗತ್ತಿ ದಶಬಲ ಟ್ರಸ್ಟ್’, ಅವರ ಸಮಾನ ಮನಸ್ಕ ಸ್ನೇಹಿತರು, ವಿದ್ಯಾರ್ಥಿಗಳ ಜೊತೆಗೂಡಿ ಕಟ್ಟಿಕೊಂಡ ಸಂಸ್ಥೆ ಇದು. ಮೈಸೂರು ಇದರ ಕೇಂದ್ರಸ್ಥಾನವಾದರೂ ಇದರ ಕಾರ್ಯವ್ಯಾಪ್ತಿ ಇಡೀ ರಾಜ್ಯ. ಇದರ ಒಂದು ಅಂಗ ಸಂಸ್ಥೆ ‘ರೈಟರ್ಸ್ ಅಕಾಡೆಮಿ’. ಇದು ಸಂಪೂರ್ಣವಾಗಿ ಸಾಹಿತ್ಯಕ ಚಟುವಟಿಕೆಗಳಿಗೆ ಮೀಸಲಾದ ಸಂಸ್ಥೆ.

ಪ್ರಸ್ತುತ ರೈಟರ್ಸ್ ಅಕಾಡೆಮಿಯು 2025ನೇ ಸಾಲಿನಲ್ಲಿ ತನ್ನ ಚೊಚ್ಚಲ ‘ಕಾವ್ಯ ಢಮರುಗ’ ಎಂಬ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಕವನ ಸಂಕಲನ ಪ್ರಕಟಣೆ ಮಾಡುತ್ತಿದೆ. ಈ ಕವಿಗೋಷ್ಠಿಗೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಕವಿಗಳು ಭಾಗಿಯಾಗುತ್ತಿರುವುದು ಅದ್ಭುತ ಬೆಳವಣಿಗೆ. ಹಾಗೂ ‘ಕಾವ್ಯ ಢಮರುಗ’ಕ್ಕೆ ಕವಿತೆ ಕಳುಹಿಸಿದ ಎಲ್ಲರಿಗೂ ಕವಿಗೋಷ್ಠಿಯಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆ ಇಲ್ಲದ ಕಾರಣ ಆಯ್ದ ಉತ್ತಮ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ನಿರ್ಧಾರಕ್ಕೆ ರೈಟರ್ಸ್ ಅಕಾಡೆಮಿ ಬಂದಿದೆ. ಪ್ರತೀ ವರ್ಷ ಜರುಗಲಿರುವ ಈ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ‘ಕಾವ್ಯ ಢಮರುಗ’. ಎಂದು ಕರೆಯಲಾಗಿದೆ. ಈ ಢಮರುಗದ ದನಿ ಕರುನಾಡಿನಾದ್ಯಂತ ಮೊಳಗಲು ನಿಮ್ಮೆಲ್ಲರ ಸಹಕಾರವಿರಲಿ ಎಂದು ರೈಟರ್ಸ್ ಅಕಾಡೆಮಿ ಮೈಸೂರು ತಿಳಿಸಿದೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!