ಈ ಮನೆಯಲ್ಲಿ ಹಾವುಗಳ ರಾಶಿ, ಮೈ ಜುಮ್ ಎನಿಸುವುದು ಖಚಿತ….

ಹಾವುಗಳ ಹೆಸರು ಕೇಳಿದ ಕೂಡಲೇ ಭಯ ಪಡುತ್ತೇವೆ. ಅಪ್ಪಿ ತಪ್ಪಿ ಈ ಹಾವು ಮನೆಯೊಳಗೆ ಬಂದು ಬಿಟ್ಟರೆ, ಅದು ಹೊರಗೆ ಹೋಗುವ ತನಕ ನಾವು ಮನೆಯೊಳಗೆ ಕಾಲಿಡಲ್ಲ. ಆದರೆ ಇಲ್ಲೊಂದು ಮನೆಯ ನೆಲಮಾಳಿಗೆಯ ಮೇಲೆ ಹತ್ತಕ್ಕೂ ಹೆಚ್ಚು ಹಾವುಗಳು ಕಾಣಿಸಿಕೊಂಡಿದ್ದು, ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಭಯಭೀತರಾಗಿದ್ದಾರೆ.

ಮಳೆಗಾಲದಲ್ಲಿ ಹಾವುಗಳು ಮನೆಯ ಸುತ್ತಮುತ್ತ ಕಾಣಿಸಿಕೊಳ್ಳುತ್ತವೆ. ಹಲವು ಬಾರಿ ಮನೆಯ ಮೂಲೆಯಲ್ಲಿ ಅಥವಾ ಬೆಚ್ಚಗೆಗಿರುವ ಸ್ಥಳಗಳಲ್ಲಿ ಅವಿತು ಕುಳಿತುಕೊಳ್ಳುವುದನ್ನು ನೀವು ನೋಡಿರಬಹುದು. ಸಾಮಾನ್ಯವಾಗಿ ಒಂದು ಹಾವು ಕಣ್ಣಿಗೆ ಬಿದ್ದ ಕೂಡಲೇ ಎದೆ ಹಿಡಿದು ಓಡಿ ಹೋಗುವವರೇ ಹೆಚ್ಚು. ಆದರೆ ಇದೀಗ ಮನೆಯ ನೆಲ ಮಾಳಿಗೆಯ ಗೂಡಿನಂತಹ ರಚನೆಯಲ್ಲಿ ಹತ್ತಕ್ಕೂ ಹೆಚ್ಚು ಹಾವುಗಳು ಕಂಡು ಬಂದಿದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್ ಆಗಿದ್ದು, ಈ ದೃಶ್ಯವು ಎಲ್ಲರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಈ ಘಟನೆಯೂ ಉತ್ತರ ಪ್ರದೇಶದ ಮಹಾರಾಜ್‌ಗಂಜ್ನ ಹಾರ್ದಿದಾಲಿ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಸಂಸ್ಥೆ ಭಾರತ ಸಮಾಚಾರ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನೆಲಮಾಳಿಗೆಯ ಗೂಡಿನಂತಹ ರಚನೆಯಲ್ಲಿ ಹತ್ತಕ್ಕೂ ಹೆಚ್ಚು ಹಾವುಗಳನ್ನು ಕಾಣಬಹುದು. ಹಾವುಗಳು ಗಿಜಿಗುಟ್ಟುತ್ತಾ ನಿಧಾನವಾಗಿ ಚಲಿಸುತ್ತಿದೆ. ಈ ದೃಶ್ಯವು ಒಂದು ಕ್ಷಣ ಮೈ ಜುಮ್ ಎನ್ನುವಂತೆ ಮಾಡುತ್ತದೆ. ಮನೆಯ ನೆಲಮಾಳಿಗೆಯ ಮೇಲೆ ಹಾವುಗಳ ರಾಶಿಯನ್ನು ಕಂಡ ಗ್ರಾಮಸ್ಥರು ತಕ್ಷಣವೇ ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!