
ಮೈಸೂರು ವಿವಿ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಜಮಾಯಿಸಿದ ವಿದ್ಯಾರ್ಥಿ ಗಳು, ಅಂಬೇಡ್ಕರ್ ಭಾಮುತ್ರವುಳ್ಳ ಬ್ಯಾನವನ್ನು ಏಕಾಏಕಿ ತೆರವುಗೊಳಿಸಿರುವ ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ ವರ್ಗಕ್ಕೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ಕುಲಸಚಿವರು ಏಕಾಏಕಿ ಎಓಗೆ ಫೋನ್ ಮಾಡಿ ತೆರವುಗೊಳಿಸಲು ಸೂಚಿಸಿದ್ದಾರೆ. ಸಂಶೋಧಕರ ಸಂಘ ದಿಂದ ಅಂಬೇಡ್ಕರ್ ಅವರ ಜಯಂತಿಯ ಶುಭಾಶಯ ಕೋರಿದ್ದ ಬ್ಯಾನರ್ ಅದು. ಸಂಘದ ಗಮನಕ್ಕೂ ತಾರದೇ, ಏಕಾಏಕಿ ತೆರವುಗೊಳಿಸಲು ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.

ಸಂಶೋಧಕರ ಸಂಘದ ಉಪಾಧ್ಯಕ್ಷ ಮಹೇಶ ಮಾತನಾಡಿ, ದುರುದ್ದೇಶ ಪೂರ್ವಕವಾಗಿಯೇ ತೆರವುಗೊಳಿಸಲಾ ಗಿದೆ. ಬ್ಯಾನರ್ ಅನ್ನು ಹರಿದು ಹಾಕಿದ್ದಾರೆ. ಇದಕ್ಕೆ ಕಾರಣರಾದವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜನಾ ರ್ಧನ್ ಅವರಿಗೆ ಘಟನೆ ಬಗ್ಗೆ ವಿವರಿಸಿದ ಸಂಶೋಧಕರ ಸಂಘದ ಅಧ್ಯಕ್ಷ ಶಿವ ಶಂಕರ್. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದು ವಿವಿ ಆಡಳಿತಾಧಿಕಾರಿ ಗಳು (ಎಓ) ಎಂದು ದೂರಿದರು.
ಬಳಿಕ ಮಾತನಾಡಿದ ಜನಾರ್ಥನ್, ಎಓ ಅವರೊಂದಿಗೆ ಫೋನ್ನಲ್ಲಿ ಮಾತ ನಾಡಿದ್ದು, ADಡಿಕೆಟ್ನಲ್ಲಿ ಎಲ್ಲಾ ಬ್ಯಾನರ್ ಗಳನ್ನು ಸುರಕ್ಷಿತವಾಗಿ ತೆರವು ಮಾಡಿ, ಬಳಿಕ ಎಲ್ಲೆಲ್ಲಿ ಹಾಕಲು ಅವಕಾಶ ನೀಡ ಬೇಕೆಂದು ನಿರ್ಧರಿಸುವ ತೀರ್ಮಾನ ವಾಗಿದೆ. ಹಾಗಾಗಿ ಅಂಬೇಡ್ಕರ್ ಭಾವಚಿತ್ರ ಹೊಂದಿದ್ದ ಬ್ಯಾನರ್ ಅನ್ನು ಸುರಕ್ಷಿತವಾಗಿ ತೆರವು ಮಾಡಿ. ಇಟ್ಟಿದ್ದೇವೆ. ಯಾವುದೇ ರೀತಿ ಅಪಮಾನ ಮಾಡಿಲ್ಲ ಎಂದಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳು, ತೆರವುಗೊಳಿಸಿದವರನ್ನು ಆನಾನತು ಮಾಡಲೇಬೇಕೆಂದು ಆಗ್ರಹಿಸಿದರು .
ನಂತರ ಸ್ಥಳಕ್ಕೆ ಬಂದ ಡೀನ್ ಗುರು ಸಿದ್ದಯ್ಯ ಮಾತನಾಡಿ, ಬ್ಯಾನರ್ ಸಂಬಂಧ ವಿವಿಧ ಸಂಘಟನೆಗಳು ನಮ್ಮ ಬ್ಯಾನರ್ ಹಾಕಲು ಅವಕಾಶ ಕೊಡಿ ಎಂದು ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಗೊಂದಲ ಆಗಬಾರದೆಂಬ ಕಾರಣಕ್ಕೆ ತೆರವು ಮಾಡಿದ್ದಾರೆ. ನಾಳೆ ಬೆಳಗ್ಗೆ ಮತ್ತೆ ಬ್ಯಾನರ್ ಹಾಕಿಸಲು ಕ್ರಮಾ ವಹಿಸುವುದು. ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪದ ವಿದ್ಯಾರ್ಥಿಗಳು, ತೆರವುಗೊಳಿ ಸಲು ಕಾರಣರಾದವರ ವಿರುದ್ಧ ಕ್ರಮ ಆಗಬೇಕು. ಸ್ಥಳಕ್ಕೆ ಕುಲಪತಿಗಳೇ ಬರಲೇ ಬೇಕು ಎಂದು ಪಪ್ಪಿ ಹಿಡಿದರಲ್ಲದೆ, ಅಂಬೇಡ್ಕರ್ ಭಾವಚಿತ್ರ ಇಲ್ಲಿ ಇರಬಾರದು ಎಂಬ ಉದ್ದೇಶದಿಂದ ತೆರವು ಮಾಡಿಸಿದ್ದಾರೆ. ಅಲ್ಲದೆ. ಪ್ರತಿಭಟನೆ ಮಾಡುತ್ತಾರೆ ಎಂದು ವಿದ್ಯುತ್ ದೀಪಗಳನ್ನು ಆಫ್ ಮಾಡಿಸಿ ದ್ದಾರೆ ಎಂದು ದೂರಿದರು.
ವಿಸಿ ಮನವೊಲಿಕೆ ವಿಫಲ: ಆ ನಂತರ ಸ್ಥಳಕ್ಕೆ ಭೇಟಿ ನೀಡಿದ ಕುಲಪತಿ ಡಾ.ಎನ್.ಕೆ. ಲೋಕನಾಥ್, ತೆರವು ಮಾಡಿದವರಿಗೆ ನಾಳೆ ಬೆಳಗ್ಗೆಯೊಳಗೆ ಮತ್ತೆ ಬ್ಯಾನರ್ ಹಾಕುವಂತೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳು ತೆರವು ಮಾಡಿದವರನ್ನು ಈ ಕೂಡಲೇ ಅಮಾನತು ಮಾಡಲೇ ಬೇಕು ಎಂದು ಒತ್ತಾಯಿಸಿದರು.
ಯಾರು ತೆರವು ಮಾಡಿದ್ದು ಎಂಬುದು ನನಗೆ ಗೊತ್ತಿಲ್ಲ ಎಂದು ಕುಲಪತಿಗಳು ಹೇಳಿದಾಗ ವಿದ್ಯಾರ್ಥಿಗಳು ತಲಪತಿ ಅಮಗೂ ತಿಳಿಸದೇ ತೆರವು ಮಾಡಿದ್ದಾರೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ವರು ರಾಷ್ಟ್ರನಾಯಕರಿಗೆ ಅಪಮಾನ ಮಾಡಲಾಗಿದೆ. ಹಾಗಾಗಿ ನೀವೇ ದೂರು ಕೊಟ್ಟು ಪ್ರಕರಣ ದಾಖಲಿಸಿ ಎಂದು ಕುಲಪತಿಗಳನ್ನು ಆಗ್ರಹಿಸಿದರು. ಸ್ಥಳದಲ್ಲಿದ್ದ ಪೊಲೀಸರು ವಿದ್ಯಾರ್ಥಿ ಗಳನ್ನು ಸಮಾಧಾನಗೊಳಿಸಿದ ಬಳಕ ಮತ್ತೆ ಮಾತನಾಡಿದ ಕುಲಪತಿಗಳು, ಎಓ ಅವರಿಗೆ ಕರೆ ಮಾಡಿದ್ದೆ, ಅವರು ಫೋನ್ ತೆಗೆಯುತ್ತಿಲ್ಲ. ಯಾರು ತೆರವು ಮಾಡಿ ದ್ದಾರೆ ಎಂದು ಪರಿಶೀಲನೆ ಮಾಡಿ, ನಾಳೆ ಅವರ ವಿರುದ್ಧ ಕ್ರಮ ವಹಿಸಲಾಗುವುದು ಎಂದರು. ಆದರೆ ವಿದ್ಯಾರ್ಥಿಗಳು ಇದಕ್ಕೆ ಒರದೇ ಪ್ರತಿಭಟನೆ ಮುಂದುವರೆಸಿದರು.
ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ನಟರಾಜ್ ಶಿವಣ್ಣ ಮಾತನಾಡಿ, ತೆರವು ಮಾಡಿರು ವುದು ತಪ್ಪು ಸರಿಪಡಿಸಲು ಒಪ್ಪಿದ್ದಾರೆ. ಸಿಂಡಿಕೇಟ್ ಸದಸ್ಯನಾಗಿ ನಮ್ಮ ವಿವಿ ಪರವಾಗಿ ಕ್ಷಮೆ ಕೇಳುತ್ತೇನೆ. ಅಮಾನತು ಸಂಬಂಧ ಸಿಂಡಿಕೇಟ್ ನಲ್ಲಿ ಸಹ ಚರ್ಚೆ ಮಾಡಬೇಕಾಗುತ್ತದೆ. ನಾನೇ ಆ ಬಗ್ಗೆ ಮಾತನಾಡುತ್ತೇನೆ ನಿಮ್ಮ ಬೇಡಿಕೆ ಈಡೇರಿ ಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬ್ಯಾನರ್ ತೆಗೆಯುವ ವಿಷಯ ಸಿಂಡಿ ಕೇಟ್ ಸಭೆಯಲ್ಲಿ ಯಾವುದೇ ಚರ್ಚೆಯೇ ಆಗಿಲ್ಲ ಇದು ಸುಳ್ಳು ಎಂದು ತಿಳಿಸಿದರು. ನಂತರ ಕುಲಪತಿಗಳು ದೂರು ಕೊಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಮಾಡಿಸ ಬೇಕೆಂದು ವಿದ್ಯಾರ್ಥಿಗಳು ಬೇಡಿಕೆ ಇಟ್ಟಾಗ, ಗಂಭೀರ ವಿಷಯವಾದ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರದಲ್ಲಿ ಕ್ರಮ ವಹಿಸುತ್ತೇವೆ ಸಮಯ ಕೊಡಿ ಎಂದು ಕುಲಪತಿಗಳು ಹೇಳಿದರು. ಆದರೆ ಇದಕ್ಕೊಪ್ಪದ ವಿದ್ಯಾರ್ಥಿ ಗಳು ಪ್ರತಿಭಟನೆ ಮುಂದುವರೆಸಿದರು.





