ಧರ್ಮಸ್ಥಳ ಬುರುಡೆ ರಹಸ್ಯ- ಸಾಕ್ಷಿದಾರನ ಪರವಾಗಿ ಬರ್ತಾರಾ 6 ಮಂದಿ ಸ್ಥಳೀಯರು?

ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ ರೋಚಕ ತಿರುವ ಸಿಗುವ ಸಾಧ್ಯತೆಯಿದೆ. ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿರುವ ಸಾಕ್ಷಿದಾರನ ಪರವಾಗಿ ಮತ್ತೆ 6 ಜನ ಸ್ಥಳೀಯರು ಮುಂದೆ ಬರುವ ಸಾಧ್ಯತೆಯಿದೆ.

ಹೌದು. ದೂರಿನಲ್ಲಿ ದೂರುದಾರ ನಾನೊಬ್ಬನೇ 13 ಜಾಗಗಳಲ್ಲಿ ಹೆಣವನ್ನು ಹೂತಿದ್ದೇನೆ ಎಂದು ತಿಳಿಸಿದ್ದ. ಇಲ್ಲಿಯವರೆಗೆ ಪಾಯಿಂಟ್‌ ಸಂಖ್ಯೆ 12ರವರೆಗೆ ಶೋಧ ನಡೆದಿದ್ದು 6ನೇ ಪಾಯಿಂಟ್‌ನಲ್ಲಿ ಮಾತ್ರ ಅಸ್ಥಿಪಂಜರ ಸಿಕ್ಕಿದೆ. ಉಳಿದ 12 ಜಾಗದಲ್ಲಿ ಯಾವುದೇ ಅಸ್ಥಿ ಪತ್ತೆಯಾಗಿಲ್ಲ.

ದೂರುದಾರನ ಈ ಪ್ರಯತ್ನ ವಿಫಲವಾದ ಬೆನ್ನಲ್ಲೇ ಆತ ಹೆಣ ಹೂತು ಹಾಕಿದ್ದನ್ನು ನೋಡಿದ್ದೇವೆ. ಆತನ ಹುಡುಕಾಟದಲ್ಲಿ ತಾವು ಕೂಡ ಸಹಾಯ ಮಾಡುವುದಾಗಿ 6 ಮಂದಿ ಮುಂದೆ ಬಂದಿದ್ದಾರೆ ಎನ್ನಲಾಗುತ್ತಿದೆ.

6 ಜನ ಬಂದಿರುವ ಬಗ್ಗೆ ವಿಶೇಷ ತನಿಖಾ ತಂಡ (SIT) ಅಧಿಕೃತವಾಗಿ ಇಲ್ಲಿಯವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಈಗ ಈ 6 ಜನರ ಸ್ಥಳೀಯರ ಮಾಡುತ್ತಿರುವ ಆರೋಪದ ಅಸಲಿಯತ್ತಿನ ಬಗ್ಗೆ ಚರ್ಚೆ ಆರಂಭವಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ಇಂದು ಕೊನೆಯ ಪಾಯಿಂಟ್‌ನಲ್ಲಿ ಶೋಧ

ಚರ್ಚೆ ಏನು?
ದೂರುದಾರ ತಾನೊಬ್ಬನೇ ಹೂತಿರುವುದಾಗಿ ದೂರು ನೀಡಿದ್ದು ಈ ಆಧಾರದಲ್ಲಿ ಈಗ ತನಿಖೆ ನಡೆಯುತ್ತಿದೆ. ಅಷ್ಟೇ ಅಲ್ಲದೇ ಧರ್ಮಸ್ಥಳ ತೊರೆದ ನಂತರ ನನಗೆ ಜೀವ ಭಯ ಇತ್ತು. ಈ ಕಾರಣಕ್ಕೆ ನಾನು ಇಲ್ಲಿಯವರೆಗೆ ಮುಂದೆ ಬಂದಿಲ್ಲ ಎಂದು ಹೇಳಿದ್ದ.

ಈಗ ಹೊಸದಾಗಿ 6 ಜನ ಸ್ಥಳೀಯರೇ ಬಂದಿರುವ ಕಾರಣ ಇಲ್ಲಿಯವರೆಗೆ ಅವರು ಯಾಕೆ ಮೌನವಾಗಿದ್ದರು? ಸ್ಥಳೀಯರೇ ಆಗಿದ್ದರೆ ಈ ಮೊದಲೇ ದೂರು ನೀಡಬಹುದಿತ್ತು. ಅಷ್ಟೇ ಅಲ್ಲದೇ ಈ ಪ್ರಕರಣ ಸದ್ದು ಮಾಡಿದ ನಂತರ ಎಸ್‌ಐಟಿ ರಚನೆಯಾಗಿ 12 ಸ್ಥಳಗಳವರೆಗೆ ಶೋಧ ನಡೆಸುವವರೆಗೆ ಸುಮ್ಮನ್ನಿದ್ದ ಈ ವ್ಯಕ್ತಿಗಳು ಶೋಧ ನಡೆಸುವಾಗ ಮೊದಲೇ ಯಾಕೆ ಮುಂದೆ ಬರಲಿಲ್ಲ ಎಂಬ ಪ್ರಶ್ನೆಯ ಜೊತೆ ಹಲವು ಅನುಮಾನ ಎದ್ದಿದೆ.

ಎಸ್‌ಐಟಿ ಸೋಮವಾರ ಪಾಯಿಂಟ್‌ ಸಂಖ್ಯೆ 11 ರಲ್ಲಿ ಉತ್ಕನನ ನಡೆಸಬೇಕಿತ್ತು. ಆದರೆ ಈ ಜಾಗದ ಮೇಲಿನ ಭಾಗಕ್ಕೆ ತೆರಳಿತ್ತು. ಈ ಜಾಗದಲ್ಲಿ ತೆರಳಿದಾಗ ಮನುಷ್ಯನ ಮೂಳೆಗಳು ಸಿಕ್ಕಿತ್ತು. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೂಳೆ ಇದಾಗಿದ್ದು ನೆಲದಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ: ದಿನಕ್ಕೆ ಅಂದಾಜು 2 ಲಕ್ಷ ರೂ. ಖರ್ಚು- ಯಾವುದಕ್ಕೆ ಎಷ್ಟು?

ಶವ ಹೂತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚನೆಯಾಗಿದ್ದು ಈಗ ನೆಲದ ಮೇಲೆ ಅಸ್ಥಿ ಸಿಕ್ಕಿದ್ದರಿಂದ ಇದರ ತನಿಖೆಗೆ ಇಳಿದಿದೆ. ಈ ಮೊದಲು ಜಯಂತ್‌ ಟಿ ಅವರು ಧರ್ಮಸ್ಥಳ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಮೃತದೇಹಗಳನ್ನು ಹೂತು ಹಾಕಲಾಗಿದೆ. ಯುವತಿಯ ಮೃತದೇಹವನ್ನು ಹೂತು ಹಾಕಿರುವುದನ್ನು ತಾನು ನೋಡಿದ್ದೇನೆ ಎಂದು ಆರೋಪಿಸಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣವೂ ಈಗ ಎಸ್‌ಐಟಿಗೆ ವರ್ಗಾವಣೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನ ದೂರು ನೀಡಲು ಮುಂದೆ ಬಂದರೆ ಎಸ್‌ಐಟಿ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತದೆ. ಆ ಎಲ್ಲಾ ವ್ಯಕ್ತಿಗಳು ಮಾಡಿದ ದೂರುಗಳನ್ನು ಸ್ವೀಕಾರ ಮಾಡುತ್ತಾ ಎನ್ನುವ ದೊಡ್ಡ ಪ್ರಶ್ನೆ ಎದ್ದಿದೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!