ನಟಿ ರಮ್ಯಾ ಬಳಿಕ ಸೋನು ಶೆಟ್ಟಿಗೂ ಬಂತು ಅಶ್ಲೀಲ ಕಮೆಂಟ್ಸ್.

ಅಭಿಮಾನದ ಹೆಸರಲ್ಲಿ ರಮ್ಯಾಗೆ ಚುಚ್ಚಿದ ಅಶ್ಲೀಲ ಮೆಸೆಜ್​ಗಳ ಈಟಿ ಈಗ ಮತ್ತೊಬ್ಬ ಮಾಡೆಲ್ ಒಬ್ಬರತ್ತ ತಿರುಗಿವೆ. ರಮ್ಯಾ ನಂತರ ಮಾಡೆಲ್​​ ಒಬ್ಬರಿಗೆ ಅದೆ ರೀತಿಯ ಕಿರುಕುಳ ಶುರುವಾಗಿದೆ ಅಂತ ಆ ಮಾಡೆಲ್​ ಆರೋಪಿಸಿದ್ದಾರೆ.

ಅಭಿಮಾನದ ಹೆಸರಲ್ಲಿ ರಮ್ಯಾಗೆ ಚುಚ್ಚಿದ ಅಶ್ಲೀಲ ಮೆಸೆಜ್​ಗಳ ಈಟಿ ಈಗ ಮತ್ತೊಬ್ಬ ಮಾಡೆಲ್ ಒಬ್ಬರತ್ತ ತಿರುಗಿವೆ. ಜಾಮೀನು ಸಿಕ್ಕರೆ ಸಾಕು ದೇವರೇ ಅಂತ ದರ್ಶನ್​ ಅಂಡ್ ಗ್ಯಾಂಗ್​ ಕೋರ್ಟ್​ಗಳ ಸುತ್ತಾ ಅಲೆದಾಡ್ತಿದ್ರೆ, ಇತ್ತ ಅಶ್ಲೀಲ ಪದಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಕಂಟಕ ಹೆಚ್ಚಾಗ್ತಿದೆ. ರಮ್ಯಾ ನಂತರ ಮಾಡೆಲ್​​ ಒಬ್ಬರಿಗೆ ಅದೆ ರೀತಿಯ ಕಿರುಕುಳ ಶುರುವಾಗಿದೆ ಅಂತ ಆ ಮಾಡೆಲ್​ ಆರೋಪಿಸಿದ್ದಾರೆ.

https://youtu.be/3z6lK4bu4F4?si=WrYgYHV1zerXedbqಪಕ್ಷ ಅಧಿಕಾರಕ್ಕೆ ತರಲು 5 ವರ್ಷ ಕಷ್ಟ ಪಟ್ಟಿದ್ದು ನಾನು, SM ಕೃಷ್ಣ CM ಆದ್ರು : ಮಲ್ಲಿಕಾರ್ಜುನ ಖರ್ಗೆ

ಸೋನು ಶೆಟ್ಟಿ ಇನ್​ಸ್ಟಾಗ್ರಾಮ್​ನಲ್ಲಿ ತನ್ನ ಹಾಟ್​ ಹಾಟ್​ ಲುಕ್ ಮೂಲಕವೇ ಸಾವಿರಾರು ಫಾಲೋವರ್ಸ್​ ಹೊಂದಿರೋ ರೂಪದರ್ಶಿ ಕಮ್ ಡಿಜಿಟಲ್ ಕ್ರಿಯೇಟರ್. ಅಷ್ಟೇ ಅಲ್ಲ, ಸೋನು ಶೆಟ್ಟಿ ಅಪ್ಪಟ ಕಿಚ್ಚ ಸುದೀಪ್ ಅಭಿಮಾನಿ ಅಂತಾ ಹೇಳಿಕೊಳ್ತಾರೆ. ಇಂತಹ ಸೋನು ಶೆಟ್ಟಿಗೆ ಇತ್ತೀಚೆಗೆ ದರ್ಶನ್​ ಅಭಿಮಾನಿಗಳಿಂದ ಅಶ್ಲೀಲ ಸಂದೇಶಗಳು ಹೆಚ್ಚಾಗ್ತಿವೆ ಅಂತಾ ಈಕೆಯೂ ಸಿಡಿದೆದ್ದು ನಿಂತಿದ್ದಾರೆ.

3 ದಿನಗಳಿಂದ ಅಶ್ಲೀಲವಾದ ಕಮೆಂಟ್ಸ್​ ಮಾಡ್ತಿದ್ದಾರೆ. ಅವರ ಪದಗಳಲ್ಲಿ ಅಶ್ಲೀಲತೆ ಅದೆಷ್ಟರ ಮಟ್ಟಿಗಿದೆ ಅಂದ್ರೆ, ಅದನ್ನ ನೋಡೋದಕ್ಕೂ ಆಗ್ತಿಲ್ಲ..ಅಷ್ಟೇ ಅಲ್ಲ…ನಾನು ಕಿಚ್ಚ ಸುದೀಪ್ ಅಭಿಮಾನಿಯಾಗಿರೋದ್ರಿಂದ ನನಗೆ ಈ ಥರಾ ಹಿಂಸೆ ಮಾಡ್ತಿದ್ದಾರೆ ಅನ್ನೋದು ಸೋನು ಶೆಟ್ಟಿಯ ಗಂಭೀರ ಆರೋಪ ಆಗಿದೆ.

ದರ್ಶನ್​ ಅಭಿಮಾನಿಗಳು ಸುದೀಪ್​ರನ್ನ ಟ್ರೋಲ್​ ಮಾಡ್ತಿದ್ರಂತೆ. ಅದನ್ನ ನೋಡೋದಕ್ಕಾಗದೇ, ಸೋನು ಅವರ ವಿರುದ್ಧ ರಿಯಾಕ್ಟ್​ ಮಾಡಿದ್ದಾರೆ. ಅವ್ರಿಗೆ ತಕ್ಕ ಪಾಠ ಕಲಿಸಲೇಬೇಕು ಅಂತಾ ಒಂದು ವಿಡಿಯೋ ಮಾಡಿ ಹಾಕಿದ್ದಾರೆ. ದರ್ಶನ್​ ಹಾಗೂ ಅವರ ಫ್ಯಾನ್ಸ್ ಇಷ್ಟ ಆಗಲ್ಲ. ಅವರು ರೌಡಿ ಆಗಬೇಕಿತ್ತು. ಅಪ್ಪಿ-ತಪ್ಪಿ ಹೀರೋ ಆಗಿದ್ದಾರೆ. ಅದುವೇ ಪ್ರಾಬ್ಲಂ. ಅವರ ಫ್ಯಾನ್ಸ್ ಕೂಡ ಹಾಗೆಯೇ ಇದ್ದಾರೆ. ಅವರ ಫ್ಯಾನ್ಸ್​ಗೆ ಬುದ್ಧಿ ಕಲಿಸಬೇಕು ಅಂತೆಲ್ಲಾ ಆ ವಿಡಿಯೋದಲ್ಲಿ ಸೋನು ಹೇಳಿದ್ದರು. ಅದ್ಯಾವಾಗ ದರ್ಶನ್​ ಫ್ಯಾನ್ಸ್​ನ ಹಿಯಾಳಿಸಿ ಈಕೆಯೂ ಟ್ರೋಲ್​ ಮಾಡೋದಕ್ಕೆ ಶುರುಮಾಡಿದ್ರೋ, ಈಕೆಯ ವಿರುದ್ಧ ಮತ್ತಷ್ಟು ಅಶ್ಲೀಲ ಪದಗಳ ದಾಳಿ ನಡೆಸಲಾಗಿದೆ. ತಾಯಿ ಬಗ್ಗೆ ಮಾತನಾಡಿದ್ದಾರೆ. ಅದ್ಯಾವಾಗ ತಾಯಿ ಬಗ್ಗೆ ಮಾತನಾಡೋದನ್ನ ಸಹಿಸಿಕೊಳ್ಳೋದಕ್ಕೆ ಸಾಧ್ಯವಾಗ್ಲಿಲ್ವೋ.. ಮತ್ತೆ ಸೋನು ಒಂದು ವಿಡಿಯೋ ಮಾಡಿದ್ದಳು. ನಾನ್​ ನಿಮಗೆ ಠಕ್ಕರ್ ಕೊಡ್ತಾನೆ ಇರ್ತೀನಿ ಏನ್​ ಮಾಡ್ತೀರಾ ಮಾಡ್ಕೊಳ್ಳಿ ಅಂತಾನೇ ಹೇಳಿ ಮತ್ತೊಂದು ವಿಡಿಯೋ ಮಾಡಿ ಹಾಕಿದ್ದಾರೆ.

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು