ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಾಲ್ಕು ಕಾರುಗಳನ್ನು ಜಪ್ತಿ ಮಾಡಲು ಕೋರ್ಟ್ ಆದೇಶ.

ಮೈಸೂರು : ಭೂ ಸ್ವಾಧೀನದ ಬಾಕಿ ಪರಿಹಾರ ಹಣ ಪಾವತಿಸದ ಹಿನ್ನೆಲೆಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರಕೆ ಸೇರಿದ ನಾಲ್ಕು ಕಾರುಗಳ ಜಪ್ತಿಗೆ ಮೈಸೂರಿನ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆದೇಶಿಸಿದೆ.

ಮೈಸೂರಿನ ಹೃದಯ ಭಾಗದಲ್ಲಿರುವ ಡಿ.ದೇವರಾಜ ಅರಸು ರಸ್ತೆಯ ಅಗಲೀಕರಣಕ್ಕಾಗಿ 1979ರಲ್ಲಿ ಗುಣಾಂಬ ಮ್ಯಾಟೆರ್ನಿಟಿ ಆಂಡ್ ಚೈಲ್ಡ್ ವೇಲ್‌ಫೇ‌ರ್ ಟ್ರಸ್ಟ್‌ಗೆ ಸೇರಿದ ಜಾಗವನ್ನು ಅಂದಿನ ಸಿಐಟಿಐ (ಇಂದಿನ ಎಂಡಿಎ) ಭೂಸ್ವಾಧೀನಪಡಿಸಿ ಕೊಂಡಿತ್ತು. ಈ ಸಂಬಂಧ ನಿಗದಿಪಡಿಸಿದ ಪರಿಹಾರ ನ್ಯಾಯಸಮ್ಮತವಲ್ಲವೆಂದು ಟ್ರಸ್ಟ್ ನ್ಯಾಯಾಲಯದ ಮೊರೆ ಹೋಗಿತ್ತು.

ಇದೀಗ ಕೋರ್ಟ್ ಆದೇಶದಂತೆ ಬಾಕಿ ಪರಿಹಾರ ಪಾವತಿಸದ ಕಾರಣ ಎಂಡಿಎಗೆ ಸೇರಿದ ನಾಲ್ಕು ಕಾರುಗಳನ್ನು ಜಪ್ತಿ ಮಾಡಿಕೊಳ್ಳುವಂತೆ 4ನೇ ಹೆಚ್ಚುವರಿ ಸಿವಿಲ್ ಕೋರ್ಟ್ ಆದೇಶ ನೀಡಿದೆ. ಅದರಂತೆ ಮಂಗಳವಾರ ಟ್ರಸ್ಟ್ ಪರ ವಕೀಲ ಬಿ.ಎಸ್.ಚಂದ್ರಶೇಖರ್, ಕೋರ್ಟ್ ಅಮೀನ್ ಬರಿಗೈಯಲ್ಲಿ ಹಿಂತಿರುಗಿದರು.

ಈ ಸಂಬಂಧ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ವಕೀಲ ಬಿ.ಎಸ್.ಚಂದ್ರಶೇಖರ್, ಬಾಕಿ ಪರಿಹಾರ ಹಣ ಮತ್ತು ಅದರ ಮೇಲಿನ ಬಡ್ಡಿ ಹಣವನ್ನು ಪಾವತಿ ಮಾಡದ ಹಿನ್ನೆಲೆಯಲ್ಲಿ ಎಂಡಿಎಗೆ ಸೇರಿದ ನಾಲ್ಕು ಕಾರುಗಳ ವಶಕ್ಕೆ ಕೋರ್ಟ್ ಜಪ್ತಿ ವಾರಂಟ್ ಹೊರಡಿಸಿದೆ ಎಂದು ತಿಳಿಸಿದರು.

ನಿಗದಿಪಡಿಸಿದ ಪರಿಹಾರ ಹಣ ಸೂಕ್ತವಲ್ಲ ವೆಂದು ಟ್ರಸ್ಟ್‌ನಿಂದ ತಕಾರರು ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ಕಡತವನ್ನು ನ್ಯಾಯಾಲಯಕ್ಕೆ ಎಂಡಿಎ ಸಲ್ಲಿಸಿತ್ತು. ಭೂ ಸ್ವಾಧೀನ ಕಾಯ್ದೆ ಕಲಂ 18ರ ಅಡಿಯಲ್ಲಿ 4ನೇ ಹೆಚ್ಚುವರಿ ಸಿವಿಲ್ ಕೋರ್ಟ್, ಹೆಚ್ಚಿನ ಪರಿಹಾರ ನೀಡುವಂತೆ ತೀರ್ಪು ನೀಡಿತ್ತು. ಆ ಬಳಿಕ ಕೋರ್ಟ್ ಸೂಚಿಸಿದ ಒಟ್ಟು 8 ಕೋಟಿ ಪರಿಹಾರದ ಹಣದಲ್ಲಿ ಹಂತ ಹಂತವಾಗಿ 5 ಕೋಟಿ ರೂ. ಅನ್ನು ಎಂಡಿಎಯಿಂದ ಸದರಿ ಟ್ರಸ್ಟ್‌ಗೆ ಪಾವತಿ ಮಾಡಲಾಗಿದೆ. ಆದರೆ ಬಾಕಿ ಇರುವ 3 ಕೋಟಿ ರೂ.ಗೂ ಅಧಿಕ ಪರಿಹಾರದ ವನ್ನು ಪಾವತಿಸದೇ ವಿಳಂಬ ಮಾಡುತ್ತಿರುವ ಪ ಯಲ್ಲಿ ಡಿಕ್ಕಿದಾರರಾದ ಟ್ರಸ್ಟ್ನವರು ಕೋರ್ಟ್‌ನಲ್ಲಿ ಅರ್ಜಿ ಪ್ರಕರಣ ದಾಖಲಿಸಿದ್ದರು ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಕೋರ್ಟ್ ಎಂ ಡಿ ಎ ಆಯುಕ್ತರ ಕಾರು ಸೇರಿದಂತೆ ನಾಲ್ಕು ಕಾದ ಜಪ್ತಿಗೆ ಆದೇಶಿಸಿದೆ. ಹೀಗಾಗಿ ಕೋರ್ಟ್ ಅಮೀನ್ ಸುರೇಶ್ ಜಪ್ತಿ ವಾರಂಟ್ಅನ್ನು ಎಂ ಡಿ ಎ. ಅಧಿಕಾರಿಗಳ ಮುಂದೆ ಹಾಜರುಪಡಿಸಿದರೂ ಪ್ರಯೋಜನವಾಗಿಲಿಲ್ಲ. ಜಪ್ತಿಗೆ ಸಂಬಂಧಿಸಿದ ಕಾರುಗಳು ಎಂ ಡಿ ಎ ಕಜೇರಿ ಆವರಣದಲ್ಲಿ ಇರಲಿಲ್ಲ ಎಂದರು.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!