ಪೋಷಕರಿಂದ ಗಂಡನ ಮನೆಯವರ ವಿರುದ್ಧ ಆರೋಪ
ದೀಪಾ ಹೆತ್ತವರು ಆಕೆಯ ಗಂಡನ ಮನೆಯವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪತಿ ಉದಯ್ ಮತ್ತು ತಾಯಿ ಮೇಲೆ ಕೊ*ಲೆ ಆರೋಪ ಮಾಡಿದ್ದಾರೆ. 12 ವರ್ಷಗಳ ಹಿಂದೆ ಗುರುಹಿರಿಯರ ಸಮ್ಮುಖದಲ್ಲಿ ಮಗಳಿಗೆ ಉದಯ್ ಜೊತೆ ಮದ್ವೆ ಮಾಡಿಕೊಟ್ಟಿದ್ವಿ. ಜೋಡಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದರು. ಸಂಸಾರ ಸುಃಖವಾಗಿತ್ತು ಅನ್ನುವಾಗಲೇ ದುರಂತ ನಡೆದುಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ನನ್ನ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ. 12 ವರ್ಷಗಳ ಹಿಂದೆ ಜಮೀನು ಮಾರಿ ಮಗಳ ಮದುವೆ ಮಾಡಿಕೊಟ್ಟಿದ್ದೇವು. ಭರ್ಜರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಇತ್ತೀಚೆಗೆ ಉದಯ್ಗೆ ಬ್ಯೂಟಿ ಪಾರ್ಲರ್ ಅಂಟಿ ಜೊತೆ ಅಕ್ರಮ ಸಂಬಂಧ ಇತ್ತು. ಇದೇ ವಿಚಾರ ವೈಮನಸ್ಸಿಗೆ ಕಾರಣವಾಯ್ತು.
ಈ ಅಕ್ರಮ ಸಂಬಂಧ ಹಿರಿಯರ ಗಮನಕ್ಕೂ ಬಂದಿತ್ತು. ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ಮಾತುಕತೆ ನಡೆದು, ಆಂಟಿಗೆ ಕಟ್ಟಿದ್ದ ತಾಳಿಯನ್ನು ತೆಗೆಸಲಾಗಿತ್ತು. ಇಷ್ಟಾದರೂ ಉದಯ್ ಮತ್ತು ಅಂಟಿ ನಡುವೆ ಹೆಚ್ಚು ಒಡನಾಟ ಮಾಡಿಕೊಂಡಿದ್ದ. ಇದೇ ವಿಚಾರಕ್ಕೆ ದೀಪ ಮತ್ತು ಉದಯ್ ನಡುವೆ ಗಲಾಟೆ ಆಗಿದೆ. ಆಗಸ್ಟ್ 6 ರಂದು ದೊಣ್ಣೆಯಿಂದ ದೀಪ ಮೇಲೆ ಹಲ್ಲೆ ಮಾಡಿದ್ದಾರೆ. ಎಲ್ಲಾದರೂ ಹೋಗು ಎಂದು ಉದಯ್ ಹಲ್ಲೆ ನಡೆಸಿದ್ದಾನೆ. ಇದರಿಂದ ಮನನೊಂದು ಕ್ರಿಮಿನಾಶಕ ಸೇವಿಸಿದ್ದಾಳೆ. ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 9ರಂದು ಪ್ರಾಣ ಬಿಟ್ಟಿದ್ದಾಳೆ ಎಂದು ಕಣ್ಣೀರು ಇಟ್ಟಿದ್ದಾರೆ.
ಘಟನೆ ಸಂಬಂಧ ಸೂರ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮೃತ ಗೃಹಿಣಿ ಕುಟುಂಬದ ಆಗ್ರಹಿಸಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.






