ಪ್ರಜ್ವಲ್ ರೇವಣ್ಣಗೆ ದಿನಕ್ಕೆ ಎಷ್ಟು ಕೂಲಿ ಗೊತ್ತಾ? ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆ.

ರೇಪ್ ಕೇಸ್ ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣಗೆ ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆಯಾಗಲಿದೆ. ಪ್ರಜ್ವಲ್ ವಿದ್ಯಾಭ್ಯಾಸದ ಮೇಲೂ ಕೆಲಸ ಹಂಚಿಕೆಯಾಗಬಹುದು. ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಈಗ ದಿನಗೂಲಿ ಪಡೆಯಬೇಕಾಗಿದೆ.ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಗೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಪ್ರಜ್ವಲ್ ರೇವಣ್ಣಗೆ ಜೈಲ್ಲಿ‌ನಲ್ಲಿ ಏನು ಕೆಲಸ ಕೊಡಬೇಕು ಎಂಬುದರ ಬಗ್ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ. ಶೀಘ್ರದಲ್ಲೇ ಪ್ರಜ್ವಲ್ ರೇವಣ್ಣಗೆ ಜೈಲ್ಲಿನಲ್ಲಿ ಕೆಲಸವನ್ನು ನೀಡಲಿದ್ದಾರೆ.
ಸದ್ಯ ಪ್ರಜ್ವಲ್ ವಿದ್ಯಾಭ್ಯಾಸ ಮೇಲೆ ಕೆಲಸ ನೀಡಲು ಚಿಂತನೆ ನಡೆದಿದೆ. ಅಪರಾಧಿ ಪ್ರಜ್ವಲ್ ಬಿ.ಇ. ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ.

ವ್ಯಾಸಂಗಕ್ಕೆ ಹೊಂದಿಕೊಳ್ಳುವ ಕೆಲಸ ನೀಡಲು ಜೈಲು ಅಧಿಕಾರಿಗಳ ಪ್ಲ್ಯಾನ್ ಮಾಡಿದ್ದಾರೆ. ಸಜಾಬಂಧಿ ಖೈದಿಗಳು ಕಡ್ಡಾಯವಾಗಿ ಜೈಲ್ಲಿ‌ನಲ್ಲಿರುವ ಯಾವುದಾದರೊಂದು ಕೆಲಸ ಮಾಡಬೇಕು. ಜೈಲಿನಲ್ಲಿ ಬೇಕರಿ, ತೋಟಗಾರಿಕೆ, ಗ್ರಂಥಾಲಯ ನಿರ್ವಹಣೆ, ಶಿಕ್ಷಣ, ಮಗ್ಗ, ಸಣ್ಣ ಪುಟ್ಟ ಕೈಗಾರಿಕೆ ಕೆಲಸ , ಅಡುಗೆ ಮನೆ ನಿರ್ವಹಣೆ, ಅಡ್ಮಿನಿಸ್ಟ್ರೇಶನ್ ನೋಡಿಕೊಳ್ಳುವುದು, ಸ್ಕಿಲ್ ಡೆವಲಪ್ಮೆಂಟ್ ಮುಂತಾದ ಕೆಲಸಗಳು ಇವೆ . ಪ್ರಜ್ವಲ್ ಗೆ ಜೈಲಿನಲ್ಲಿ ಮಾಡಿದ ಕೆಲಸಕ್ಕೆ ದಿನಕ್ಕೆ 540 ರೂಪಾಯಿ ಕೂಲಿ ಸಿಗಲಿದೆ. ಒಂದು ವರ್ಷ ಆದ ನಂತರ 615 ರೂಪಾಯಿ ಕೂಲಿ ನಿಗದಿಯಾಗಲಿದೆ.ಜೈಲಿನ ಹೊರಗೆ ಹತ್ತಾರು ಜನಕ್ಕೆ ತನ್ನ ತೋಟದಲ್ಲೇ ಪ್ರಜ್ವಲ್ ರೇವಣ್ಣ ಕೆಲಸ ಕೊಟ್ಟಿದ್ದ. ಇಡೀ ಲೋಕಸಭಾ ಕ್ಷೇತ್ರಕ್ಕೆ ಎಂಪಿಯಾಗಿದ್ದ. ಪ್ರಜ್ವಲ್ ಗೆ ಜೈಲು ಹೊರಗೆ ಎಲ್ಲದ್ದಕ್ಕೂ ಅಳುಗಳು ಇದ್ದರು. ಆದರೇ, ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣನೇ ಕೂಲಿ ಕೆಲಸ ಮಾಡಿ, ನಿತ್ಯದ ಕೂಲಿಯಾಗಿ 540 ರೂಪಾಯಿ ಹಣವನ್ನು ಪಡೆಯಬೇಕಾದ ಸ್ಥಿತಿ ಬಂದಿದೆ. ಜೈಲು ಕಾಯ್ದೆ ಪ್ರಕಾರ ಜೈಲು ಅಧಿಕಾರಿಗಳು ನೀಡುವ ಕೆಲಸವನ್ನು ಸಜಾ ಬಂಧಿಗಳು ಮಾಡಬೇಕು ಅಥವಾ ವ್ಯಾಸಂಗಕ್ಕೆ ಅನುಗುಣವಾಗಿ ಕೆಲಸ ಮಾಡ್ತೀನಿ ಅಂತ ಜೈಲು ಅಧಿಕಾರಿಗಳಿಗೆ ತಿಳಿಸಬೇಕು. ಸದ್ಯ ಸಜಾ ಖೈದಿಯಾಗಿರುವ ಪ್ರಜ್ವಲ್ ಯಾವ ಕೆಲಸ ಜೈಲಿನಲ್ಲಿ ಮಾಡ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ.

Related Posts

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ. “ಖರ್ಗೆಯವರೇ, ನಿಮ್ಮ ಆರು ದಶಕಗಳ ಸುದೀರ್ಘ ರಾಜಕೀಯ ಅನುಭವಕ್ಕೆ ಈ ರೀತಿಯ ಮಾತುಗಳು ಶೋಭೆ ತರುವುದಿಲ್ಲ. ನಿಮ್ಮ ಇತ್ತೀಚಿನ ವರ್ತನೆಗಳನ್ನು…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು