ಮಕ್ಕಳನ್ನ ಒಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗೊ ಪೋಷಕರೇ ಎಚ್ಚರ !…

ಇತ್ತೀಚಿನ ದಿನಗಳಲ್ಲಿ ಪೋಷಕರಿಗೆ ಕೆಲಸದ ಒತ್ತಡ ಮತ್ತು ಸಮಯದ ಕೊರತೆಯಿಂದಾಗಿ ಮಕ್ಕಳನ್ನು ಕೆಲವೊಮ್ಮೆ ಮನೆಯಲ್ಲಿ ಒಂಟಿಯಾಗಿ ಬಿಡುವುದು ಅನಿವಾರ್ಯವಾಗಿದೆ. ಆದರೆ, ಇಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ದಾಳಿಗಳು, ಲೈಂಗಿಕ ಕಿರುಕುಳಗಳು, ಅಪಘಾತಗಳು ಮತ್ತು ಬೆಂಕಿ ಅನಾಹುತಗಳು ಪೋಷಕರಲ್ಲಿ ಭಯ ಹುಟ್ಟಿಸುತ್ತಿವೆ.

ಅಪರಿಚಿತರ ಸುಲಭ ಪ್ರವೇಶ, ವಿದ್ಯುತ್ ಉಪಕರಣಗಳ ಅಜಾಗರೂಕ ಬಳಕೆ, ಮತ್ತು ಕೆಲವೊಮ್ಮೆ ಮಕ್ಕಳ ಅಜ್ಞಾನದಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಲು ಪೋಷಕರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯ.

ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿ ಬಿಡುವ ಮುನ್ನ ಪೋಷಕರು ಪಾಲಿಸಬೇಕಾದ 5 ಮುಖ್ಯ ಎಚ್ಚರಿಕೆಗಳು:

1. ಸುರಕ್ಷತಾ ನಿಯಮಗಳನ್ನು ಕಲಿಸಿ

ಮಕ್ಕಳಿಗೆ ದಿನನಿತ್ಯದ ಸುರಕ್ಷತಾ ನಿಯಮಗಳನ್ನು ತಿಳಿಸಿ. ಗ್ಯಾಸ್ ಸ್ಟೌವ್, ವಿದ್ಯುತ್ ಉಪಕರಣಗಳ ಬಳಕೆಯಿಂದ ದೂರ ಇರಲು ಹೇಳಿ. ಅಪರಿಚಿತರಿಗೆ ಬಾಗಿಲು ತೆಗೆಯಬಾರದೆಂದು ಖಚಿತಪಡಿಸಿ. ಫೋನ್, ಇಂಟರ್ನೆಟ್‌ ಬಳಸುವ ವೇಳೆ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿ.

2. ತುರ್ತು ಸಂಪರ್ಕ ಸಂಖ್ಯೆಗಳನ್ನು ಲಭ್ಯವಿಡಿ

ಪೊಲೀಸ್ (100), ಅಗ್ನಿಶಾಮಕ (101), ಆಂಬ್ಯುಲೆನ್ಸ್ (108) ಸೇರಿದಂತೆ ಸಂಬಂಧಿಕರ ಹಾಗೂ ನೆರೆಹೊರೆಯವರ ಸಂಖ್ಯೆಗಳನ್ನು ಮಕ್ಕಳಿಗೆ ತಿಳಿಸಿ. ಈ ಸಂಖ್ಯೆಗಳ ಪಟ್ಟಿಯನ್ನು ಮನೆಯಲ್ಲಿಯೇ ಸ್ಪಷ್ಟವಾಗಿ ಲಭ್ಯವಾಗುವ ಸ್ಥಳದಲ್ಲಿ ಅಂಟಿಸಿ.

3. ಮನೆಯನ್ನು ಸುರಕ್ಷಿತವಾಗಿಡಿ

ಹೊರ ಹೋಗುವ ಮೊದಲು ಮನೆಯೊಳಗಿನ ಅಪಾಯಕಾರಿ ವಸ್ತುಗಳನ್ನು ತೆರವುಗೊಳಿಸಿ. ಚೂರಿಗಳು, ಕತ್ತಿಗಳು, ಔಷಧಿಗಳು ಮುಂತಾದವುಗಳನ್ನು ಮಕ್ಕಳ ತಲುಪದ ಸ್ಥಳದಲ್ಲಿ ಇಡಬೇಕು.

4. ಹೆಚ್ಚಿನ ಹಸಿವಿಗೆ ಸಾದ್ಯವಾದ ಆಹಾರ

ಮಕ್ಕಳಿಗೆ ಹಸಿವಾದಾಗ ಅಡುಗೆ ಮಾಡಲು ಹೋಗದಂತೆ, ಫ್ರಿಡ್ಜ್‌ ಅಥವಾ ಟೇಬಲ್‌ ಮೇಲೆ ತಿನ್ನಲು ಸುಲಭವಾಗುವ ಆಹಾರವನ್ನು ತಯಾರಿಸಿ ಇಡಿ.

5. ನಿರಂತರ ಸಂಪರ್ಕದಲ್ಲಿ ಇರಲಿ

ಮಕ್ಕಳಿಗೆ ಕಾಲ್‌ ಮಾಡಿ, ವೀಡಿಯೋ ಕರೆ ಮೂಲಕ ಮಾತನಾಡಿ. ಇದು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸು್ತದೆ ಹಾಗೂ ಒಂಟಿತನದಿಂದ ದೂರ ಇರಿಸಲು ಸಹಕಾರಿಯಾಗುತ್ತದೆ.

ಕಳೆದ ಕಾಲದಲ್ಲಿ ಪೋಷಕರ ಹತ್ತಿರ ಸಮಯದ ಲಭ್ಯತೆ ಹೆಚ್ಚು ಇತ್ತು, ಆದರೆ ಇಂದಿನ ವ್ಯಸ್ತ ಜೀವನಶೈಲಿಯಲ್ಲಿ ಕೆಲವು ವೇಳೆ ಮಕ್ಕಳನ್ನು ಒಂಟಿಯಾಗಿ ಬಿಡಬೇಕಾಗಬಹುದು. ಆದರೂ, ಈ ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ ಅವರ ಸುರಕ್ಷತೆಗೆ ಪೋಷಕರು ಶ್ರೇಷ್ಠ ಗುರಕ್ಷೆ ನೀಡಬಹುದು

Related Posts

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸತತ 6 ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ನಾಡಹಬ್ಬಕ್ಕೆ ಸಾಕ್ಷಿಯಾಗಿದ್ದ ದಸರಾ ಗಜಪಡೆಯ ದಿಗ್ಗಜ ಅಭಿಮನ್ಯು, 2026ರ ಮೈಸೂರು ದಸರಾದಲ್ಲಿ ನಿಶಾನೆ ಆನೆಯಾಗಿ ಹೆಜ್ಜೆ ಹಾಕಲು ಸಜ್ಜಾಗಿದ್ದಾನೆ. 60 ವರ್ಷ ವಯೋಮಿತಿ ಪೂರೈಸಿದ ಹಿನ್ನೆಲೆಯಲ್ಲಿ ಈ ಹಿಂದೆ ಆನೆಗೆ ನಿವೃತ್ತಿ…

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

‘ಟಾಕ್ಸಿಕ್‌’ ಸಿನಿಮಾದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಅಭಿನಯ ಹಾಗೂ ವಿಭಿನ್ನ ಆವತಾರಕ್ಕೆ ಸ್ಯಾಂಡಲ್‌ವುಡ್‌ ಮಂದಿ ಫಿದಾ ಆಗಿದ್ದು, ಇದೀಗ ಕಿಚ್ಚ ಸುದೀಪ್‌ ಪುತ್ರಿ, ಗಾಯಕಿ ಸಾನ್ವಿ ಸುದೀಪ್‌ ಕೂಡ ಯಶ್ ಅವರ ಪರ್ಫಾರ್ಮೆನ್ಸ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಟಾಕ್ಸಿಕ್: ಎ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!