ಕೊಹ್ಲಿ ಲೈಕ್ ಕೊಟ್ಟಿದ್ದೆ ಈ ನಟಿಗೆ ಅದೃಷ್ಟವೋ ಅದೃಷ್ಟ…!

 ಕೊಹ್ಲಿಯ ಉಡುಗೆ ತೊಡುಗೆ, ಫಿಟ್​ನೆಸ್​​​ ರೂಟಿನ್​, ಸ್ಟೈಲ್​ ಎಲ್ಲವನ್ನೂ ಅನುಕರಿಸೋ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇನ್ಸ್​​ಸ್ಟಾಗ್ರಾಂನಲ್ಲೂ ಅಷ್ಟೇ.. ಕೊಹ್ಲಿ ಹಾಕೋ ಪೋಸ್ಟ್​ಗಳು, ಲೈಕ್ಸ್​, ಕಮೆಂಟ್ಸ್​ ಎಲ್ಲವನ್ನ ಫ್ಯಾನ್ಸ್​​ ಗಮನಿಸ್ತಾರೆ. ಸಾಮಾನ್ಯವಾಗಿ ಕೊಹ್ಲಿ ಯಾರ ಪೋಸ್ಟ್​ ಅನ್ನೋ ಲೈಕ್​ ಮಾಡಲ್ಲ. ಅವತ್ತು ಏನಾಗಿತ್ತೋ ಏನೋ, ಬಾಲಿವುಡ್​ ಬ್ಯೂಟಿಯ ಬೋಲ್ಡ್​ ಫೋಟೋಗೆ ಕೊಹ್ಲಿ ಲೈಕ್​​ ಮಾಡಿದ್ರು.

ಕೊಹ್ಲಿ ಬೈ ಮಿಸ್ಟೇಕ್​ನಿಂದ ಮಾಡಿದ ಆ ಒಂದು ಲೈಕ್​ ಬೆಲೆ ಎಷ್ಟಿರಬಹುದು ಅಂತಾ ನೀವು ನಿಜಕ್ಕೂ ಊಹಿಸೋಕೂ ಆಗಲ್ಲ. ಅಂತಾ ಅದೃಷ್ಟ ಅವನೀತ್​ ಕೌರ್​​ಗೆ ಖುಲಾಯಿಸಿದೆ. ಕೊಹ್ಲಿ ಲೈಕ್​ ಮಾಡಿದ ಬೆನ್ನಲ್ಲೇ ಈ ಬಾಲಿವುಡ್​ ನಟಿಯ ಫಾಲೋವರ್ಸ್​ ಸಂಖ್ಯೆ ಸರ್​ ಅಂತ ಏರಿದೆ. ನೀವು ನಂಬ್ತಿರೋ ಇಲ್ವೋ.. ತಮನ್ನಾ ಬಾಟಿಯಾ, ಜಾಹ್ನವಿ ಕಪೂರ್​, ಅನನ್ಯಾ ಪಾಂಡೆ, ಪೂಜಾ ಹೆಗ್ಡೆ.. ಸಿನಿ ಅಂಗಳದಲ್ಲಿ ಸೌಂಡ್​ ಮಾಡ್ತಿರೋ ಈ ಸ್ಟಾರ್​​ಗಳಿಗಿಂತ ಹೆಚ್ಚು ಫಾಲೋವರ್ಸ್​ ಈಗ ಅವನೀತ್​ ಕೌರ್​ಗಿದ್ದಾರೆ. ಇನ್ಸ್​​ಸ್ಟಾ ಫಾಲೋವರ್​ಗಳ ಸಂಖ್ಯೆ ಸದ್ಯ 31.6 ಮಿಲಿಯನ್​ಗೇರಿದೆ. 1 ಮಿಲಿಯನ್​​ಗೂ ಅಧಿಕ ಫಾಲೋವರ್ಸ್​ ಸಿಕ್ಕಿದ್ದಾರೆ.

12 ಬ್ರಾಂಡ್​​ಗಳ ಜೊತೆ ಅವನೀತ್​ ಕೌರ್​ ಡೀಲ್…!
ಕೊಹ್ಲಿಯ ಲೈಕ್​​-ಡಿಸ್​ಲೈಕ್​​ ಕಾರಣಕ್ಕೆ ಸುದ್ದಿಯಾದ ಬಳಿಕ ಅವನೀತ್ ಕೌರ್​ ಹಿಂದೆ ಜಾಹೀರಾತು ಕಂಪನಿಗಳು ಮುಗಿಬಿದ್ದಿವೆ. 12 ವಿವಿಧ ಜಾಹೀರಾತುಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಬ್ರ್ಯಾಂಡ್​​ವ್ಯಾಲ್ಯೂನಲ್ಲಿ ಗಣನೀಯ ಏರಿಕೆಯಾಗಿದೆ. ಶೇಖಡ 30ರಷ್ಟು ಬ್ರ್ಯಾಂಡ್​ ವಾಲ್ಯೂ ಹೆಚ್ಚಾಗಿದೆ. ಈ ಹೊಸ ಒಪ್ಪಂದ, ಜಾಹೀರಾತುಗಳಿಂದ ಆದಾಯವೂ ದುಪ್ಪಾಟ್ಟಾಗಿದೆ.

ಕೌರ್​ ಫುಲ್​ ಕಾಸ್ಟ್ಲಿ..!
ಕೊಹ್ಲಿಯ ಲೈಕ್​ ಕಾಂಟ್ರವರ್ಸಿಯಿಂದ ಅವನೀತ್ ಕೌರ್​​ಗೆ ಜನಪ್ರಿಯತೆ ಮಾತ್ರ ಸಿಕ್ಕಿಲ್ಲ. ಫಾಲೋವರ್​ಗಳ ಸಂಖ್ಯೆ ಮಾತ್ರವೇ ಹೆಚ್ಚಾಗಿಲ್ಲ. ಆದಾಯವೂ ಹೆಚ್ಚಾಗಿದೆ. ಡಿಜಿಟಲ್ ಫ್ಲಾಟ್​ಫಾರ್ಮ್​ನಲ್ಲಿ ಮಾಡೋ ಜಾಹೀರಾತಿಗಳ ಪೋಸ್ಟ್​ ಬೆಲೆಯೂ ಹೆಚ್ಚಾಗಿದೆ. ಒಂದು ಕಮರ್ಷಿಯಲ್​ ಪೋಸ್ಟ್​ಗೆ ಈಗ ಈಕೆ 2.6 ಲಕ್ಷ ಚಾರ್ಜ್​ ಮಾಡ್ತಿದ್ದಾರಂತೆ. ಸಿನಿಮಾ ಕ್ಷೇತ್ರದಲ್ಲಿ ಮತ್ತಷ್ಟು ಅವಕಾಶಗಳ ಬಾಗಿಲು ತೆರೆಯುವ ಮುನ್ಸೂಚನೆ ಸಿಕ್ಕಿದೆಯಂತೆ.

ಕೊಹ್ಲಿ ಹೆಸರಿನಿಂದ ಸಿನಿಮಾಗೆ ಬಿಟ್ಟಿ ಪ್ರಮೋಷನ್
ಅವನೀತ್ ಕೌರ್​ ನಟನೆಯ ಲವ್ ಇನ್ ವಿಯೆಟ್ನಾಂ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ಹೊತ್ತಿನಲ್ಲೇ ಟ್ರೈಲರ್ ಬಿಡುಗಡೆಯನ್ನು ಗೊಳಿಸಿದ್ದಾರೆ. ಟ್ರೈಲರ್ ಕಾರ್ಯಕ್ರಮದಲ್ಲಿ ವಿರಾಟ್​ ಕೊಹ್ಲಿಯ ಲೈಕ್​​ ಬಗ್ಗೆ ಅವನೀತ್​ ಕೌರ್​, ಮೊದಲ ಬಾರಿ ತುಟಿಬಿಚ್ಚಿದ್ದಾರೆ. ಇದು ಲವ್ ಇನ್ ವಿಯೆಟ್ನಾಂ ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್​ ಆಗುವಂತೆ ಮಾಡಿದೆ. ಕೊಹ್ಲಿ ಹೆಸರಲ್ಲಿ ಬಿಟ್ಟಿ ಪ್ರಮೋಷನ್ ಸಿಕ್ಕಂತಾಗಿರುವುದು ಸುಳ್ಳಲ್ಲ.

Related Posts

ಬಿಸಿಸಿಐಗೆ ಸ್ಪಾನ್ಸರ್ ಶಿಪ್ ಬಿಸಿ: ದುಬಾರಿ ಬೆಲೆಯಿಂದ ಹಿಂದೆ ಸರಿದ ಕಂಪನಿಗಳು!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತ ಕ್ರಿಕೆಟ್ ತಂಡದ ತವರಿನ ಪಂದ್ಯಗಳಿಗೆ ಹೊಸ ಟೈಟಲ್ ಸ್ಪಾನ್ಸರ್ ಹುಡುಕಲು ತೀವ್ರ ಹರಸಾಹಸ ಪಡುತ್ತಿದೆ. ಆಗಸ್ಟ್ 13ರ ಅಂತಿಮ ಗಡುವು ಮುಗಿದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಬಿಡ್‌ಗಳು ಬಾರದಿರುವುದು ಜಗತ್ತಿನ ಅತಿ ಶ್ರೀಮಂತ ಕ್ರಿಕೆಟ್…

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

  ಸೌತ್ ಆಫ್ರಿಕಾ, ನಮೀಬಿಯಾ ಮತ್ತು ಝಿಂಬಾಬ್ವೆ ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್​ಗೆ ಟೀಮ್ ಇಂಡಿಯಾದ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ನೀಡಿರುವ ಹೇಳಿಕೆಗಳು ಇದೀಗ ಭಾರೀ ವೈರಲ್ ಆಗಿದೆ. ಭಾರತೀಯ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!