ಅಪ್ಪುವಿನ ಅಪ್ಪುಗೆಯ ಫೋಟೋ ನೋಡಿ ಮದುವೆಯಲ್ಲಿ ಭಾವುಕರಾದ ಅನುಶ್ರೀ…!

ಸ್ಟಾರ್ ನಿರೂಪಕಿ ಅನುಶ್ರೀ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ರೋಷನ್​ ಅವರು ಅನುಶ್ರೀ ಕೊರಳಿಗೆ ತಾಳಿ ಕಟ್ಟಿದ್ದಾರೆ.

 

ನಿರೂಪಕಿ, ನಟಿ ಅನುಶ್ರೀ ಅವರ ಮದುವೆ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಅದರಲ್ಲೂ ಒಂದು ಫೋಟೋ ಮಾತ್ರ ಅನುಶ್ರೀ ಹಾಗೂ ಅಭಿಮಾನಿಗಳು ಭಾವುಕರಾಗುವಂತೆ ಮಾಡಿದೆ. ಅದುವೆ ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್ ಫೋಟೋ.

ಹೌದು, ನಿರೂಪಕಿ ಅನುಶ್ರೀ ಆರತಕ್ಷತೆ ಕಾರ್ಯಕ್ರಮದಲ್ಲಿ ಅವರ ಸ್ನೇಹಿತರ ಗುಂಪೊಂದು ಫೋಟೋ ಫ್ರೇಮ್​ ಅನ್ನು ಕೊಟ್ಟಿದ್ದಾರೆ. ಆ ಫ್ರೇಮ್​ನಲ್ಲಿ ಅಪ್ಪು ಅವರು ಅನುಶ್ರೀ ಹಾಗೂ ರೋಷನ್​ ಅವರ ಮದುವೆ ಮಧ್ಯೆ

ನಿಂತುಕೊಂಡು ಫೋಟೋಗೆ ಫೋಸ್​ ಕೊಡುತ್ತಿರೋ ಹಾಗೇ ಕ್ರಿಯೇಟ್ ಮಾಡಲಾಗಿದೆ.

ಇದೇ ಫೋಟೋವನ್ನು ನೋಡಿದ ಅನುಶ್ರೀ ಅವರು ಕಣ್ಣೀರು ಹಾಕಿದ್ದಾರೆ. ಈ ಫೋಟೋ ಫ್ರೇಮ್​ ಅನ್ನು ಉಡುಗೊರೆ ನೀಡಿದ ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಇದೇ ಫೋಟೋ ನೋಡಿದ ಅಭಿಮಾನಿಗಳು ಕೂಡ ಸೋಷಿಯಲ್​ ಮೀಡಿಯಾದಲ್ಲಿ ಅಪ್ಪು ಅಜರಾಮರ, ನಗುಮುಖದ ಒಡೆಯ, ಅಪ್ಪು ಸದಾ ಜೀವಂತ ಅಂತ ಭಾವುಕರಾಗಿ ಕಾಮೆಂಟ್ಸ್​ ಮಾಡಿದ್ದಾರೆ.

ಅನುಶ್ರೀ ಮದುವೆ ಮಂಟಪದಲ್ಲಿ ಅಪ್ಪು ಫೋಟೋ..
ಅನುಶ್ರೀ ಅವರು ನಟ ಪುನೀತ್ ರಾಜ್​​ಕುಮಾರ್ ಅವರ ದೊಡ್ಡ ಅಭಿಮಾನಿ ಅಂತ ಎಲ್ಲರಿಗೂ ಗೊತ್ತಿದೆ. ಅನುಶ್ರೀ ಅವರು ಏನೇ ಶುಭ ಕಾರ್ಯ ಮಾಡಿದರೂ ಅಪ್ಪು ಅವರನ್ನು ನೆನೆಯುತ್ತಾ ಇರುತ್ತಾರೆ. ಅದರಂತೆ ತಮ್ಮ ಮದುವೆ ಸಮಾರಂಭದಲ್ಲೂ ಪುನೀತ್ ರಾಜ್​ಕುಮಾರ್ ಅವರ ಫೋಟೋವನ್ನು ಮಂಟಪದಲ್ಲಿ ಹಾಕಿಸಿ ಮೊದಲು ಅವರ ಆರ್ಶೀವಾದ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ‘ಅಪ್ಪು ಸರ್​ ರೋಷನ್ ಮತ್ತು ನನ್ನ ಸೇರಿಸಿದ್ದರು ಅಂತ ಕೂಡ ಹೇಳಿಕೊಂಡಿದ್ದರು.

ಇನ್ನೂ, ಅನುಶ್ರೀ ಅವರಿಗೆ ಗಿಫ್ಟ್ ಆಗಿ ಬಂದ ಫೋಟೋ​ದಲ್ಲಿ ಅಪ್ಪು ಅವರು ನಿಜವಾಗಲೂ ಮದುವೆಗೆ ಬಂದ ಹಾಗೇ ನೈಜತೆಯಿಂದ ಕೂಡಿದೆ. ಮುಖದಲ್ಲಿ ಅದೇ ನಗು, ಪಂಚೆ ಶರ್ಟ್ ಧರಿಸಿಕೊಂಡು ಅಪ್ಪು ಅವರು ಮಂದಹಾಸ ಬೀರುತ್ತಾ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

  ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!