ಸ್ವಂತ ಮನೆಯನ್ನು ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಾಲೆಯಾಗಿ ಬದಲಾಯಿಸಿದ ನಟ ರಾಘವ ಲಾರೆನ್ಸ್

ರಾಘವ ಲಾರೆನ್ಸ್ ತಮಿಳಿನ ಸ್ಟಾರ್ ನಟರುಗಳಲ್ಲಿ ಒಬ್ಬರು. ಅದ್ಭತವಾದ ಡ್ಯಾನ್ಸರ್ ಸಹ. ಆದರೆ ರಾಘವ್ ಲಾರೆನ್ಸ್ ಅವರು ತಮ್ಮ ಸಿನಿಮಾಗಳಷ್ಟೆ ತಮ್ಮ ಅದ್ಭುತ ಸಮಾಜ ಮುಖಿ ಕಾರ್ಯದಿಂದ ಹೆಚ್ಚು ಪರಿಚಿತರು. ರಾಘವ್ ಲಾರೆನ್ಸ್ ಅವರು ಹಲವಾರು ಅನಾಥ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ನೀಡಿದ್ದಾರೆ. ಇದೀಗ ತಮ್ಮ ಸ್ವಂತ ಮನೆಯನ್ನೇ ಉಚಿತ ಶಾಲೆಯನ್ನಾಗಿ ಪರಿವರ್ತನೆ ಮಾಡಿದ್ದಾರೆ ನಟ.

ಭಾರತದಲ್ಲಿ ಹಲವು ಸ್ಟಾರ್ ನಟರುಗಳಿದ್ದಾರೆ. ತೆರೆಯ ಮೇಲೆ ದುಷ್ಟರನ್ನು ಶಿಕ್ಷಿಸುವ, ಶಿಷ್ಟರನ್ನು ರಕ್ಷಿಸುವ, ಬಡವರಿಗೆ ಸಹಾಯ ಮಾಡುವ, ವಿಶಾಲ ಗುಣ ಹೊಂದಿರುವ ‘ಹೀರೋ’ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇವರಲ್ಲಿ ಹಲವಾರು ಮಂದಿ ಕೇವಲ ತೆರೆಯ ಮೇಲಷ್ಟೆ ಹೀರೋಗಳು, ತೆರೆಯ ಹಿಂದೆ ಕಾಮ, ಕ್ರೋಧ, ಲೋಭ, ಮದ, ಮತ್ಸರ ತುಂಬಿರುವ ಸಾಮಾನ್ಯ ಮನುಷ್ಯರು. ತೆರೆಯ ಮೇಲೆ ಹಾಗೂ ತೆರೆಯ ಹೊರಗೆಯೂ ‘ಹೀರೋ’ ಆಗಿ ಬದುಕುತ್ತಿರುವವರು ಬೆರಳೆಣಿಕೆಯಷ್ಟು ನಟರು ಮಾತ್ರ. ಅವರಲ್ಲಿ ಒಬ್ಬರು ನಟ ರಾಘವ್ ಲಾರೆನ್ಸ್.
ಸಾಮಾನ್ಯ ಕಾರು ಕ್ಲೀನರ್ ಆಗಿದ್ದವರು ತಮ್ಮ ಸ್ವಂತ ಪ್ರತಿಭೆಯಿಂದಾಗಿ ಇಂದು ತಮಿಳಿನ ಸ್ಟಾರ್ ನಟರುಗಳ ಸಾಲಿನಲ್ಲಿ ನಿಂತಿದ್ದಾರೆ. ಅದ್ಭುತ ಡ್ಯಾನ್ಸರ್ ಅಗಿದ್ದ ರಾಘವ್ ಲಾರೆನ್ಸ್, ಸಿನಿಮಾ ಹಾಡುಗಳಲ್ಲಿ ಹಿಂದಿನ ಸಾಲಿನಲ್ಲಿ ಡ್ಯಾನ್ಸ್ ಮಾಡುವವರಾಗಿದ್ದವರು, ಬಳಿಕ ಸ್ವಂತ ಪರಿಶ್ರಮದಿಂದ ಲೀಡ್ ಡ್ಯಾನ್ಸರ್ ಆಗಿ ಬಳಿಕ ಕೊರಿಯಾಗ್ರಫರ್ ಆದರು. ಬಳಿಕ ನಟರಾಗಿಯೂ ಹೆಸರು ಮಾಡಿದರು. ಈಗ ತಮಿಳಿನ ಸ್ಟಾರ್ ನಟ ಮತ್ತು ನಿರ್ದೇಶಕರಾಗಿದ್ದಾರೆ. ಆದರೆ ರಾಘವ್ ಲಾರೆನ್ಸ್ ತಮ್ಮ ನಟನೆಯಷ್ಟೆ ತಾವು ಮಾಡುವ ಸಮಾಜ ಮುಖಿ ಕಾರ್ಯದಿಂದಲೂ ದೊಡ್ಡ ಮಟ್ಟದ ಹೆಸರು ಗಳಿಸಿದ್ದಾರೆ.

ಸ್ವತಃ ಕಿತ್ತು ತಿನ್ನುವ ಬಡತನ ಕಂಡು ಬಂದಿರುವ ರಾಘವ್ ಲಾರೆನ್ಸ್​ಗೆ ಬಡವರು, ಅಂಗವಿಕಲರು, ವೃದ್ಧರ ಮೇಲೆ ಅಪಾರ ಅಕ್ಕರೆ. ರಾಘವ್ ಲಾರೆನ್ಸ್ ಈಗಾಗಲೇ ನೂರಾರು ಮಂದಿ ಬಡ, ಅನಾಥ ಮಕ್ಕಳನ್ನು ದತ್ತು ಪಡೆದು ಅವರ ಜೀವನ ನಿರ್ವಹಣೆಗೆ ಸಹಾಯ ಮಾಡುತ್ತಿದ್ದಾರೆ. ಸಹಾಯ ಕೇಳಿ ಬರುವ ಹಲವರಿಗೆ ರಾಘವ್ ಸಹಾಯ ಮಾಡಿದ್ದಾರೆ. ಇದೀಗ ತಮ್ಮ ಸ್ವಂತ ಮನೆಯನ್ನೇ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯನ್ನಾಗಿ ಬದಲಾಯಿಸಿಬಿಟ್ಟಿದ್ದಾರೆ. ರಾಘವ್ ಅವರ ಈ ಕಾರ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಘವ್, ‘ನಾನು ಡ್ಯಾನ್ಸ್ ಮಾಸ್ಟರ್ ಆಗಿದ್ದಾಗ ದುಡಿದ ಹಣದಿಂದ ಖರೀದಿ ಮಾಡಿದ ಮೊದಲ ಮನೆಯನ್ನು ನಾನು ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಾಲೆಯನ್ನಾಗಿ ಪರಿವರ್ತನೆ ಮಾಡುತ್ತಿದ್ದೇನೆ. ಆ ಮನೆಯಲ್ಲಿ ಮೊದಲಿಗೆ ಅನಾಥ ಮಕ್ಕಳ ವಸತಿಗಾಗಿ ಮೀಸಲಿರಿಸಿದ್ದೆ. ಆದರೆ ಆ ಮಕ್ಕಳು ಬೆಳೆದು ದೊಡ್ಡವರಾಗಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಈಗ ಆ ಮನೆಯನ್ನು ಉಚಿತ ಶಾಲೆಯಾಗಿ ಬದಲಾಯಿಸುತ್ತಿದ್ದೇನೆ’ ಎಂದಿದ್ದಾರೆ.

ಈ ಘೋಷಣೆಗೆ ಒಂದು ದಿನ ಮುಂಚೆಯಷ್ಟೆ, ರೈಲಿನಲ್ಲಿ ಸಿಹಿ ಮಾರಾಟ ಮಾಡುತ್ತಿದ್ದ ವೃದ್ಧ ವ್ಯಕ್ತಿಯ ಚಿತ್ರವೊಂದನ್ನು ಟ್ವೀಟ್ ಮಾಡಿ ಈ ಶ್ರಮಜೀವಿ ದಂಪತಿಗೆ ಕೆಲ ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರು. ಅಲ್ಲದೆ ಇವರಿಂದ ಸಿಹಿ ಖರೀದಿ ಮಾಡಿ ಎಂದು ಮನವಿ ಸಹ ಮಾಡಿದ್ದರು. ಆ ಘಟನೆಯಾಗಿ 24 ಗಂಟೆಯೊಳಗೆ ಮತ್ತೊಂದು ಮಹತ್ ಕಾರ್ಯದ ಘೋಷಣೆಯನ್ನು ರಾಘವ್ ಮಾಡಿದ್ದಾರೆ. ಅಂದಹಾಗೆ ರಾಘವ್ ಲಾರೆನ್ಸ್ ತಮ್ಮ ‘ಕಾಂಚನಾ 4’ ಸಿನಿಮಾ ಘೋಷಣೆ ಮಾಡಿದ್ದಾರೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಮತ್ತು ನೋರಾ ಫತೇಹಿ ಸಹ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

  ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!