ರೇಣುಕಾಸ್ವಾಮಿ ಕೊ* ಪ್ರಕರಣದ ತನಿಖಾಧಿಕಾರಿಗಳಿಗೆ ಇದೀಗ ಸಂಕಷ್ಟ ಎದುರಾಗಿದೆ. ಈ ಕೇಸ್ನ ತನಿಖಾಧಿಕಾರಿಗಳಾದ PSI ವಿನಯ್ ಹಾಗೂ ACP ಚಂದನ್ ಇಬ್ಬರನ್ನೂ ಆರೋಪಿಗಳಾಗಿ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಹಿ ಕೃಷ್ಣ, ADGP ಹಿತೇಂದ್ರ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ರೇಣುಕಾಸ್ವಾಮಿ ಕೊ* ಪ್ರಕರಣದಲ್ಲಿ ಸರ್ವಾಧಿಕಾರಿಗಳಂತೆ PSI ವಿನಯ್ ಹಾಗೂ ACP ಚಂದನ್ ನಡೆದುಕೊಂಡಿದ್ದಾರೆ. ಅಲ್ಲದೇ ಹಲವಾರು ಅಫರಾಧ ಕೃತ್ಯಗಳಲ್ಲಿ ಭಾಗಿಯಾಗಿ, ಸುಳ್ಳು ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಇಬ್ಬರನ್ನೂ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಬೇಕು, ಅಲ್ಲದೇ CIDಗೆ ಈ ಕೇಸ್ನ್ನು ವರ್ಗಾಯಿಸುವಂತೆ ಸ್ನೇಹಮಹಿ ಕೃಷ್ಣ, ADGP ಹಿತೇಂದ್ರ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಕೆಲವು ಪೊಲೀಸ್ ಅಧಿಕಾರಿಗಳು ಕಾನೂನು ಮತ್ತು ತಮ್ಮ ಅಧಿಕಾರವನ್ನು ತಮ್ಮ ಆಟಿಕೆಯ ವಸ್ತುಗಳು ಎಂಬಂತೆ ಸರ್ವಾಧಿಕಾರಿಗಳ ರೀತಿಯಲ್ಲಿ ನಡೆದುಕೊಂಡು, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಕೊ* ಕೇಸ್ನ ತನಿಖೆ ನಡೆಸಿ, ವಿನಯ್‌ರವರನ್ನು ರಕ್ಷಣೆ ಮಾಡುವ ಸಲುವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ನೈಜ ಸಾಕ್ಷಾಧಾರಗಳನ್ನು ಮುಚ್ಚಿಟ್ಟು ತನಿಖಾಧಿಕಾರಿಗಳಾದ ಗಿರಿಶ್ ನಾಯಕ್ ಹಾಗೂ ಚಂದನ್‌ಕುಮಾರ್ ಸುಳ್ಳು ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಅವರ ವಿರುದ್ಧ ಪ್ರತ್ಯೇಕ ಮೊಕದ್ದಮೆ ದಾಖಲಿಸಿ, ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸ್ನೇಹಮಹಿ ಕೃಷ್ಣ ಪತ್ರ ಬರೆದಿದ್ದಾರೆ.





