IPL ಹರಾಜಿನ ಕಣದಲ್ಲಿ ಯಾರಿಗೆ ಕೈಹಿಡಿಯಲಿದೆ ಅದೃಷ್ಟ..?

ಐಪಿಎಲ್ ಆಟಗಾರರ ರಿಟೆನ್ಶನ್​​ ಭಾರೀ ಕುತೂಹಲ ಕೆರಳಿಸಿದೆ. ತೆರೆ ಹಿಂದೆ ಆಟಗಾರರ ರೀಟೇನ್ ಮತ್ತು ರಿಲೀಸ್ ಪ್ಲಾನ್ ಮಾಡಿಕೊಳ್ಳುತ್ತಿರುವ ಫ್ರಾಂಚೈಸಿಗಳು, ಸೀಕ್ರೆಟ್ ಆಗೇ ಕೆಲಸ ಮಾಡುತ್ತಿವೆ. ಐಪಿಎಲ್ ಆಟಗಾರರ ರಿಟೆನ್ಶನ್​​ ಭಾರೀ ಕುತೂಹಲ ಕೆರಳಿಸಿದೆ. ತೆರೆ ಹಿಂದೆ ಆಟಗಾರರ ರೀಟೇನ್ ಮತ್ತು ರಿಲೀಸ್ ಪ್ಲಾನ್ ಮಾಡಿಕೊಳ್ಳುತ್ತಿರುವ ಫ್ರಾಂಚೈಸಿಗಳು, ಸೀಕ್ರೆಟ್ ಆಗೇ ಕೆಲಸ ಮಾಡುತ್ತಿವೆ. ಡೆಡ್​​ಲೈನ್​​ಗೆ ಇನ್ನು ಕೇವಲ ನಾಲ್ಕೇ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದೆ. ಆದ್ರೂ ಫ್ರಾಂಚೈಸಿಗಳು ಕ್ಲೋಸ್ಡ್ ಡೋರ್ ಹಿಂದೆನೇ ಚಟುವಟಿಕೆಗಳಲ್ಲಿ ಬ್ಯೂಸಿಯಾಗಿವೆ.

ಐಪಿಎಲ್ ಸೀಸನ್-19 ಹರಾಜಿಗೂ ಮುನ್ನ ಪ್ಲೇಯರ್ಸ್ ರಿಟೆನ್ಶನ್,​​​​​​​​​​​​​​​ ಫ್ರಾಂಚೈಸಿಗಳಿಗೆ ಪ್ರತಿಷ್ಟೆಯ ಕಣವಾಗಿದೆ. ಆಟಗಾರರ ರಿಟೆನ್ಶನ್ ಅಥವಾ ರಿಲೀಸ್ ವಿಚಾರದಲ್ಲಿ ಫ್ರಾಂಚೈಸಿ ಒಂದೇ ಒಂದು ಯಡವಟ್ಟು ಮಾಡಿದ್ರೂ ಸೀಸನ್​​​ ಉದ್ದಕ್ಕೂ ಅದು ಇನ್ನಿಲ್ಲದಂತೆ ಕಾಡಲಿದೆ. ಹಾಗಾಗಿ ಹಗಲು ರಾತ್ರಿ ಎನ್ನದೇ ಫ್ರಾಂಚೈಸಿ ಮಾಲೀಕರು, ಆಟಗಾರರನ್ನ ಎಚ್ಚರಿಕೆಯಿಂದಲೇ ರೀಟೇನ್ ಮತ್ತು ರಿಲೀಸ್ ಮಾಡ್ತಿದ್ದಾರೆ. ಹಾಗೆ ಸಾರಥಿಯ ಆಯ್ಕೆಯಲ್ಲೂ, ಜಾಣ್ಮೆಯ ನಡೆ ಅನುಸರಿಸುತ್ತಿದ್ದಾರೆ.

ನಾಯಕ ಯಾರು..?
ರಾಜಸ್ಥಾನ್ ರಾಯಲ್ ತಂಡದ ನಾಯಕ ಸಂಜು ಸ್ಯಾಮ್ಸನ್, ತಂಡವನ್ನ ಬಿಡಲು ಧೃಡ ನಿರ್ಧಾರ ಮಾಡಿದ್ದಾರೆ. ಸದ್ಯ ಟ್ರೇಡ್ ಮೂಲಕ ವ್ಯವಹಾರ ನಡೆಸ್ತಿರುವ ಸಂಜು ಬದಲಿಗೆ ಆರ್​ಆರ್​, ನೂತನ ನಾಯಕನ ಆಯ್ಕೆಯಲ್ಲಿ ಬ್ಯೂಸಿಯಾಗಿದೆ. ರಾಜಸ್ಥಾನ್ ಮುಂದೆ 3 ಆಪ್ಶನ್​ಗಳಿವೆ. ರಿಯಾನ್ ಪರಾಗ್, ಯಶಸ್ವಿ ಜೈಸ್ವಾಲ್ ಮತ್ತು ಧೃವ್ ಜುರೆಲ್, ಈ ಮೂವರು ಯುವ ಕ್ರಿಕೆಟಿಗರಲ್ಲಿ ಒಬ್ಬನನ್ನ ಆರ್​ಆರ್​ ಸಾರಥಿಯಾಗಿ ನೇಮಕ ಮಾಡಬೇಕಿದೆ.

ಶಮಿಗೆ ಸಿಎಸ್​​ಕೆ ಗಾಳ?
ಚೆನ್ನೈ ಸೂಪರ್​ಕಿಂಗ್ಸ್​ ಇರೋ ಬರೋ ಆಟಗಾರರನ್ನೆಲ್ಲಾ ತಂಡಕ್ಕೆ ಸೆಳೆಯಲು ಮುಂದಾಗಿದೆ. ಒಂದೆಡೆ ಸಂಜು ಸ್ಯಾಮ್ಸನ್​​​​ಗೆ ಗಾಳ ಹಾಕಿರುವ ಸಿಎಸ್​ಕೆ, ಜೊತೆಯಲ್ಲೇ ಕೆ.ಎಲ್.ರಾಹುಲ್, ಇಶಾನ್ ಕಿಶನ್ ಮತ್ತಿತರೆ ಆಟಗಾರರ ಮೇಲೂ ಕಣ್ಣಿಟ್ಟಿದೆ. ಲೇಟೆಸ್ಟ್ ವಿಚಾರ ಏನಪ್ಪಾ ಅಂದ್ರೆ ಚೆನ್ನೈ, ಹಿರಿಯ ಮತ್ತು ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನ ತಂಡಕ್ಕೆ ಕರೆತರಲು ಪ್ಲಾನ್ ಮಾಡಿಕೊಂಡಿದಿಯಂತೆ. ಆದ್ರೆ ಇದು ಎಷ್ಟು ನಿಜ ಅನ್ನೋದೇ, ಸದ್ಯಕ್ಕೆ ಎಲ್ಲರಿಗೂ ಕಾಡ್ತಿರೋ ಪ್ರಶ್ನೆ.

ಸನ್​ರೈಸರ್ಸ್ ಹೈದ್ರಾಬಾದ್ ತಂಡ, ಬಿಗ್ ಸ್ಟಾರ್​ಗಳನ್ನ ರಿಲೀಸ್ ಮಾಡುವ ಸುದ್ದಿ ಬಿರುಗಾಳಿಯಂತೆ ಬೀಸಿತ್ತು. ಅದ್ರಲ್ಲೂ ಪ್ರಮುಖವಾಗಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಮತ್ತು ಬಿಗ್ ಹಿಟ್ಟರ್ ಹೆನ್ರಿಚ್ ಕ್ಲಾಸನ್​ರನ್ನ ಎಸ್​ಆರ್​ಹೆಚ್ ತಂಡದಿಂದ ರಿಲೀಸ್ ಮಾಡ್ತಾರೆ ಅನ್ನೋದು ಎಲ್ಲೆಡೆ ಹಬ್ಬಿತ್ತು. ಆದ್ರೀಗ ಹೈದ್ರಾಬಾದ್ ಫ್ರಾಂಚೈಸಿ, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸನ್​​ ತಂಡದಲ್ಲೇ ಉಳಿಯಲಿದ್ದಾರೆ ಅನ್ನೋದನ್ನ ಸ್ಪಷ್ಟಪಡಿಸಿದೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!