ಸುದೀಪ್ ವಿರುದ್ಧ ದೂರು ದಾಖಲು, ಪಿತ್ತ ನೆತ್ತಿಗೇರುತ್ತೆ ಎಂದು ರಕ್ಷಿತಾ ಶೆಟ್ಟಿಗೆ ಕಿಚ್ಚ ಬೈಯ್ದಿದ್ದಕ್ಕೆ..!

ಸುದೀಪ್ ವಿರುದ್ಧ ದೂರು ದಾಖಲು, ಪಿತ್ತ ನೆತ್ತಿಗೇರುತ್ತೆ ಎಂದು ರಕ್ಷಿತಾ ಶೆಟ್ಟಿಗೆ ಕಿಚ್ಚ ಬೈಯ್ದಿದ್ದಕ್ಕೆ..!

ನಟ ಕಿಚ್ಚ ಸುದೀಪ್ ವಿರುದ್ಧ ಬೆಂಗಳೂರು ದಕ್ಷಿಣ ಜಿಲ್ಲಾ ಎಸ್.ಪಿ. ಕಚೇರಿಯಲ್ಲಿ ದೂರು ದಾಖಲಾಗಿದೆ. ಬಿಗ್ ಬಾಸ್ ನಿರೂಪಣೆ ಮಾಡುವಾಗ ರಕ್ಷಿತಾ ಶೆಟ್ಟಿ ಮೇಲೆ ಸುದೀಪ್ ಗರಂ ಆಗಿದ್ದಕ್ಕೆ ದೂರು ನೀಡಲಾಗಿದೆ. ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಎಂಬುವವರು ದೂರು ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋನಲ್ಲಿ ಹತ್ತು ಹಲವು ಡ್ರಾಮಾಗಳು ನಡೆಯುತ್ತವೆ. ಆ ಶೋ ನೋಡಿದ ಬಳಿಕ ಬಿಗ್ ಬಾಸ್ ಮನೆಯ ಹೊರಗೂ ಒಂದಷ್ಟು ಡ್ರಾಮಾ ಹೆಚ್ಚಾಗಿವೆ. ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳ ನಡೆ-ನುಡಿ ಗಮನಿಸಿ ಟೀಕೆ ಮಾಡುವವರು ಹೆಚ್ಚಾಗಿದ್ದಾರೆ. ಅಲ್ಲದೇ ಪೊಲೀಸ್ ಠಾಣೆಯಲ್ಲಿ ದೂರುಗಳು ಕೂಡ ದಾಖಲಾಗುತ್ತಿವೆ. ಬಿಗ್ ಬಾಸ್ ಶೋ ನಿರೂಪಕ ಕಿಚ್ಚ ಸುದೀಪ್ (Kichcha Sudeep) ವಿರುದ್ಧವೂ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ! ಹೌದು, ರಕ್ಷಿತಾ ಶೆಟ್ಟಿ (Rakshitha Shetty) ಮೇಲೆ ಸುದೀಪ್ ಗರಂ ಆಗಿದ್ದಕ್ಕೆ ಬೆಂಗಳೂರು ದಕ್ಷಿಣ ಜಿಲ್ಲಾ ಎಸ್.ಪಿ. ಕಚೇರಿಯಲ್ಲಿ ದೂರು ದಾಖಲಿಸಲಾಗಿದೆ.

ಕಳೆದ 12 ಸೀಸನ್​​ಗಳಲ್ಲಿ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ಶೋ ನಿರೂಪಣೆ ಮಾಡಿದ್ದಾರೆ. ನೂರಾರು ಸ್ಪರ್ಧಿಗಳನ್ನು ಅವರು ನೋಡಿದ್ದಾರೆ. ಸ್ಪರ್ಧಿಗಳು ತಪ್ಪು ಮಾಡಿದಾಗ ಅವರು ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಈ ಬಾರಿ ಕೂಡ ಅದು ಮುಂದುವರಿದಿದೆ. ಇತ್ತೀಚೆಗೆ ಅವರು ರಕ್ಷಿತಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡರು. ಆಗ ‘ಪಿತ್ತ ನೆತ್ತಿಗೆ ಏರುತ್ತದೆ’ ಎಂದು ಹೇಳಿದ್ದರು. ಆ ಮಾತಿಗೆ ಸಂಧ್ಯಾ ಎಂಬುವರಿಂದ ಆಕ್ಷೇಪ ವ್ಯಕ್ತವಾಗಿದೆ.

ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಅವರು ದೂರು ನೀಡಿದ್ದಾರೆ. ಡಿವೈಎಸ್​ಪಿಗೆ ದೂರು ಸಲ್ಲಿಕೆ ಮಾಡಲಾಗಿದೆ. ‘ಸ್ಪರ್ಧಿ ರಕ್ಷಿತಾಗೆ ಸುದೀಪ್ ನಿಂದಿಸಿದ್ದಾರೆ. ಸುದೀಪ್ ಜೊತೆಗೆ ಅಶ್ವಿನಿ ಗೌಡ ವಿರುದ್ಧವೂ ದೂರು ನೀಡಿದ್ದೇನೆ. ಸುದೀಪ್ ಅವರು ಪಿತ್ತ ನೆತ್ತಿಗೇರಲಿದೆ ಎಂಬ ಪದ ಬಳಕೆ ಮಾಡಿದ್ದು ಎಷ್ಟು ಸರಿ? ಇಂತಹ ಪದವನ್ನು ಬಳಕೆ ಮಾಡಿದ್ದು ಸರಿನಾ? ಜೊತೆಗೆ ಅಶ್ವಿನಿ ಗೌಡ ಎಸ್ ಹಾಗೂ ಸ್ಲಂ ಎಂದು ಬಳಸುತ್ತಾರೆ. ಹಾಗಾಗಿ ನಾನು ಈ ಬಗ್ಗೆ ದೂರು ಕೊಟ್ಟಿದ್ದೇನೆ’ ಎಂದು ಸಂಧ್ಯಾ ಹೇಳಿದ್ದಾರೆ. ರಿಷಾ ವಿರುದ್ಧವೂ ದೂರು ನೀಡಲಾಗಿದೆ.

ಗಿಲ್ಲಿ ಮೇಲೂ ದೂರು:
ಇತ್ತೀಚೆಗೆ ಗಿಲ್ಲಿ ನಟ ವಿರುದ್ಧವೂ ಮಹಿಳಾ ಆಯೋಗಕ್ಕೆ ದೂರು ನೀಡಲಾಯಿತು. ಬಿಗ್ ಬಾಸ್ ಮನೆಯಲ್ಲಿ ಹೆಣ್ಮಕ್ಕಳಿಗೆ ಗಿಲ್ಲಿ ಟಾರ್ಚರ್ ನೀಡುತ್ತಿದ್ದಾರೆ ಎಂದು ಆರೋಪಿಸಿ ಕುಶಲಾ ಎಂಬುವವರು ದೂರು ನೀಡಿದರು. ಅದನ್ನು ಪರಿಶೀಲಿಸಿ ಕ್ರಮ ತೆಗೆದುಕೊಂಡು ವರದಿ ಸಲ್ಲಿಸುವಂತೆ ಮಹಿಳಾ ಆಯೋಗವು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ. ಈ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ 50 ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಈಗಾಗಲೇ ಮಲ್ಲಮ್ಮ, ಚಂದ್ರಪ್ರಭ, ಸತೀಶ್, ಮಂಜು ಭಾಷಿಣಿ, ಅಮಿತ್, ಕರಿಬಸಪ್ಪ, ಅಶ್ವಿನಿ ಎಸ್, ಕಾಕ್ರೋಚ್ ಸುಧಿ ಅವರು ಎಲಿಮಿನೇಟ್ ಆಗಿದ್ದಾರೆ. ಶೋ ಬಗ್ಗೆ ಹೊರಗಡೆ ಕೆಲವು ವಿವಾದಗಳು ಆಗುತ್ತಿವೆ. ಆ ಕುರಿತು ಕಿಚ್ಚ ಸುದೀಪ್ ಅವರು ವಾರಾಂತ್ಯದ ಸಂಚಿಕೆಯಲ್ಲಿ ಏನು ಮಾತನಾಡುತ್ತಾರೆ ಎಂಬ ಕುತೂಹಲ ವೀಕ್ಷಕರಿಗೆ ಇದೆ.

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!