Who is Mahal Roja Mallikarjuna Mutya?

ಅತಿಚಿಕ್ಕ ವಯಸ್ಸಿಗೆ ಮಠದ ಪೀಠಾಧಿಪತಿ ಆಗಿ ಅಪ್ಪಾಜಿ ಎನಿಸಿಕೊಂಡ 26ರ ಯುವಕ,ಬಾಲಕಿಯ ಜೊತೆಗಿನ ಅನುಚಿತ ವರ್ತನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಲ್ಲಿಕಾರ್ಜುನ ಮುತ್ಯಾ ನಾಪತ್ತೆಯಾಗಿದ್ದಾರೆ. ಉತ್ತರ ಕರ್ನಾಟಕ ಕೆಲ ಜಿಲ್ಲೆಗಳಲ್ಲಿ ದೇವಮಾನವನ ಎನ್ನಿಸಿಕೊಂಡಿರುವ 26 ವರ್ಷದ ಈ ಯುವಕನ ಹಿನ್ನೆಲೆ ಏನು? ಇಷ್ಟು ದೊಡ್ಡಮಟ್ಟಕ್ಕೆ ಬೆಳೆದು ಬಂದಿದ್ದೇಗೆ? ಮಠದಿಂದ ಏನೆಲ್ಲಾ ಚಟುವಟಿಕೆ ನಡೆಸಲಾಗುತ್ತೆ? ಈ ಬಗ್ಗೆ ವಿವರ ಇಲ್ಲಿದೆ.

ಬಾಲಕಿ ಜೊತೆ ಅನುಚಿತ ವರ್ತನೆ ವಿಡಿಯೋ ವೈರಲ್ ಬೆನ್ನಲ್ಲೆ ಮಲ್ಲಿಕಾರ್ಜುನ ಮುತ್ಯಾ ಬಗ್ಗೆ ಭಾರೀ ಟೀಕೆ.ಹನುಮಂತರಾಯ ಮುತ್ಯಾಮ ಕೊನೆಯ ಮಗ ಮಲ್ಲಿಕಾರ್ಜುನ ಮುತ್ಯಾಚಿಕ್ಕವಯಸ್ಸಿಗೆಪೀಠಾಧಿಪತಿಯಾದರು.ಉತ್ತರ ಕರ್ನಾಟಕದ ಭಾಗದ ಜನರು ಮುತ್ಯಾ ಬಗೆಗಿನ ಟೀಕೆಯನ್ನು ಖಂಡಿಸಿದ್ದು, ನಮ್ಮ ಅಪ್ಪಾಜಿ ಎಂದಿದ್ದಾರೆ.ಬಾಲಕಿ ಜೊತೆ ಅನುಚಿತ ವರ್ತನೆ ವಿಡಿಯೋ ವೈರಲ್ ಬೆನ್ನಲ್ಲೆ ಮಲ್ಲಿಕಾರ್ಜುನ ಮುತ್ಯಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅವರ ನಡೆ, ನುಡಿ, ವರ್ತನೆಗಳ ಬಗ್ಗೆ ವಿಡಿಯೋಗಳನ್ನು ಹರಿಬಿಟ್ಟು ಹಲವು ಟೀಕೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಉತ್ತರ ಕರ್ನಾಟಕದ ಭಾಗದ ಜನರು ಮುತ್ಯಾ ಬಗೆಗಿನ ಟೀಕೆಯನ್ನು ಖಂಡಿಸಿದ್ದು, ನಮ್ಮ ಅಪ್ಪಾಜಿ ಎಂದೆಲ್ಲಾ ಹೇಳುತ್ತಿದ್ದಾರೆ.

 

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾ ಎನ್ನುವ ಒಂದು ಚಿಕ್ಕ ಗ್ರಾಮ. ಅಲ್ಲೊಂದು ಚಿಕ್ಕ ಮಠ ಇದೆ. ಆ ಮಠದ ಸ್ವಾಮೀಜಿಯೇ ಮಲ್ಲಿಕಾರ್ಜುನ ಮುತ್ಯಾ. ಅವರ ತಂದೆಯ ಹೆಸರು ಹನುಮಂತರಾಯ ಮುತ್ಯಾ. ಉತ್ತರ ಕರ್ನಾಟಕದ ಭಾಗದಲ್ಲಿ ‘ದೇವರು ಹೇಳೋದು’ ಎನ್ನುವ ಒಂದು ಪದ್ಧತಿ ಇದೆ. ಅಂದರೆ ಕಷ್ಟ ಅಂತ ಬಂದವರಿಗೆ ಪರಿಹಾರ ಹೇಳುವುದು ಅಥವಾ ಸಣ್ಣ ಪುಟ್ಟ ಪವಾಡಗಳನ್ನು ಮಾಡುವುದು. ಈ ಮಲ್ಲಿಕಾರ್ಜುನ ಮುತ್ಯಾನ ತಂದೆ ಕೂಡ ಇದೇ ಕೆಲಸವನ್ನು ಮಾಡುತ್ತಿದ್ದರು. ಕಷ್ಟ ಎಂದು ಬಂದವರಿಗೆ ನಾಲ್ಕು ಸಾಂತ್ವನದ ಮಾತುಗಳನ್ನು ಹೇಳಿ ಕಳಿಸುವುದು, ನೆಮ್ಮದಿ ನೀಡುವುದು, ಚಿಕ್ಕ ಪುಟ್ಟ ಪವಾಡಗಳನ್ನು ಮಾಡುವುದರ ಮೂಲಕ ಆ ಭಾಗದಲ್ಲಿ ತಕ್ಕಮಟ್ಟಿಗೆ ಗೌರವ ಸಂಪಾದಿಸಿದ್ದರು. ಅವರನ್ನು ನಂಬುವ ಒಂದು ದೊಡ್ಡ ಭಕ್ತವೃಂದವೇ ಇತ್ತು.
ಕೊನೆಯ ಮಗನೇ ಮಲ್ಲಿಕಾರ್ಜುನ ಈ ಹನುಮಂತರಾಯ ಮುತ್ಯಾಗೆ ಒಟ್ಟು ನಾಲ್ಕು ಜನ ಮಕ್ಕಳು. ಅದರಲ್ಲಿ ಕೊನೆಯವನೇ ಈ ಮಲ್ಲಿಕಾರ್ಜುನ. ತಂದೆ ತೀರಿಕೊಂಡ ನಂತರ, ಆ ತಂದೆಯ ಪೀಠವನ್ನು, ಪವಾಡ ಮಾಡುವ ಕೆಲಸವನ್ನು, ದೇವರು ಹೇಳುವ ಪದ್ಧತಿಯನ್ನು ಈ ಮಲ್ಲಿಕಾರ್ಜುನ ಮುತ್ಯಾ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಮುಖ ನೋಡಿ ಸಮಸ್ಯೆ ಹೇಳಿ ಅದಕ್ಕೆ ಪರಿಹಾರ ಮಲ್ಲಿಕಾರ್ಜುನ ಮುತ್ಯಾನ ಬಳಿ ಯಾರಾದರೂ ಕಷ್ಟ ಅಂತ ಹೋದರೆ, ಈತ ಅವರ ಬಾಯಿಂದ ಸಮಸ್ಯೆ ಕೇಳುತ್ತಿರಲಿಲ್ಲ. ಬದಲಾಗಿ ಮುಖ ನೋಡಿ, ತಕ್ಷಣಕ್ಕೆ ನಿನಗೆ ಈ ಕಷ್ಟ ಇದೆ ಅಲ್ವಾ? ಅಂತ ಹೇಳಿ ಬಿಡುತ್ತಿದ್ದನಂತೆ, ಮದುವೆ ಆಗಿಲ್ಲ ಎನ್ನುವ ಸಂಕಟವೋ, ಆರ್ಥಿಕ ಸಮಸ್ಯೆಯೋ, ಕೌಟುಂಬಿಕ ಕಲಹವೋ ಮುಖ ನೋಡಿ ಸಮಸ್ಯೆ ಹೇಳಿ ಅದಕ್ಕೆ ಪರಿಹಾರವನ್ನೂ ಸೂಚಿಸುತ್ತಿದ್ದರಂತೆ. ಇದು ಜನರಲ್ಲಿ ಬಾರಿ ಅಚ್ಚರಿ ಮೂಡಿಸಿತು. ಅಲ್ಲಿ ಹೋದರೆ ನಮ್ಮ ಕಷ್ಟ ಏನೆಂದು ಅವರೇ ಹೇಳ್ತಾರೆ, ಪರಿಹಾರ ಸಿಗುತ್ತೆ ಎನ್ನುವ ಮಾತುಗಳು ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಕಾಡ್ಗಿಚ್ಚಿನಂತೆ ಹರಡಿತು. ನಿಧಾನವಾಗಿ ಮಲ್ಲಿಕಾರ್ಜುನ ಮುತ್ಯಾನನ್ನು ಹುಡುಕಿಕೊಂಡು ಬರುವವರ ಸಂಖ್ಯೆ ಹೆಚ್ಚಾಯಿತು. ನೋಡ ನೋಡುತ್ತಿದ್ದಂತೆಯೇ ಆ ಭಾಗದ ಜನ ಈತನಿಗೆ ‘ಉತ್ತರ ಕರ್ನಾಟಕ ಭಾಗದ ನಡೆದಾಡುವ ದೇವರು’ ಎನ್ನುವ ಪಟ್ಟವನ್ನು ಕಟ್ಟಿದರು.

ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮಠ ಕೂಡ ಅಭಿವೃದ್ಧಿ ಹೊಂದುತ್ತಾ ಹೋಯಿತು. ಮುಂಚೆ ಏನೇನೂ ಇರದಿದ್ದ ಆ ಮಹಲ್ ರೋಜಾ ಗ್ರಾಮದ ಮಠದ ಸುತ್ತಮುತ್ತ ಹೋಟೆಲ್, ಬೇಕರಿ, ಕಿರಾಣಿ ಅಂಗಡಿಗಳು ತಲೆ ಎತ್ತಿದವು. ಮಠ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ, ಈಗ ಅಲ್ಲಿ 24 ಗಂಟೆಗಳ ಕಾಲ ನಿರಂತರ ಅನ್ನ ದಾಸೋಹ ನಡೆಯುತ್ತದೆ. ಯಾವ ಸಮಯಕ್ಕೆ ಹೋದರೂ ಊಟ ಸಿಗುವಂತಹ ವ್ಯವಸ್ಥೆ ನಿರ್ಮಾಣವಾಗಿದೆ. ಪ್ರಸಿದ್ಧಿ ಹೆಚ್ಚಾದಂತೆ ಜನರು ತಮ್ಮ ನವಜಾತ ಶಿಶುಗಳನ್ನು ಮುತ್ಯಾನ ಬಳಿ ತರಲು ಶುರು ಮಾಡಿದರು. ಮುತ್ಯಾನ ಕೈಗೆ ಮಗು ಕೊಟ್ಟರೆ ಆ ಮಗುವಿಗೆ ಒಳ್ಳೆಯದಾಗುತ್ತದೆ, ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗುತ್ತಾನೆ ಎನ್ನುವ ನಂಬಿಕೆ ಜನರ ತಲೆಯಲ್ಲಿ ಬೇರೂರಿತು. ಮಕ್ಕಳಿಲ್ಲದವರಿಗೆ, ಮದುವೆಯಾಗದವರಿಗೆ ಇಂತಿಷ್ಟು ದಿನದಲ್ಲಿ ಒಳ್ಳೆಯದಾಗುತ್ತದೆ ಎಂದು ಹೇಳುತ್ತಿದ್ದರು. ಮಠದ ಬಳಿ ಬರುವ ಜನರ ಬಳಿ ಇಷ್ಟೇ ಹಣ ಕೊಡಬೇಕು, ಇಷ್ಟೇ ಕಾಣಿಕೆ ನೀಡಬೇಕು ಎಂದು ಡಿಮಾಂಡ್ ಮಾಡುತ್ತಿರಲಿಲ್ಲ. ಬಂದವರು ತಮ್ಮ ಕೈಲಾದಷ್ಟು ಕೊಟ್ಟು ಹೋದರೆ ಸಾಕು ಎನ್ನುವ ರಿವಾಜು ಅಲ್ಲಿತ್ತು. ಇದೂ ಕೂಡ ಜನ ಆತನನ್ನು ಹೆಚ್ಚು ನಂಬಲು ಕಾರಣವಾಯ್ತು.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!