ಬಜೆಟ್​​ ಅಧಿವೆಶನದ ನಡುವೆ ಮಹತ್ವದ ಬೆಳವಣಿಗೆ: ​​ ಸಿಎಂ ಭೇಟಿಯಾಗಿದ್ದೇಕೆ ಕಾಂಗ್ರೆಸ್​​ನ ಹಿರಿಯ ಶಾಸಕರ ತಂಡ?

ಬಜೆಟ್ ಅಧಿವೇಶನದ ನಡುವೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹಿರಿಯ ಕಾಂಗ್ರೆಸ್ ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸಚಿವ ಸಂಪುಟ ಪುನಾರಚನೆ ವೇಳೆ ಕನಿಷ್ಠ 20 ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂಬ ಆಗ್ರಹ ವ್ಯಕ್ತಪಡಿಸಿದ್ದಾರೆ. ಉಪಚುನಾವಣೆ ಬಳಿಕ ಹೈಕಮಾಂಡ್ ಜತೆ ಮಾತನಾಡುವುದಾಗಿ ಸಿಎಂ ಭರವಸೆ ನೀಡಿದ್ದು, ಇತ್ತ ಶಾಸಕರೂ ಏಪ್ರಿಲ್ 11 ರಂದು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಲು ಸಿದ್ಧತೆ ನಡೆಸಿರೋದಾಗಿ ತಿಳಿದುಬಂದಿದೆ.

ಬಜೆಟ್​​ ಅಧಿವೆಶನದ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಸಚಿವ ಸಂಪುಟ ಪುನಾರಚನೆ ವೇಳೆ ಕನಿಷ್ಠ 20 ಹಿರಿಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ವಿಧಾನಸೌಧ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಎಂಎಲ್​​ಎಗಳು ಮನವಿ ಮಾಡಿದ್ದಾರೆ. ಭೋಜನ ವಿರಾಮದ ಸಮಯದಲ್ಲಿ ಸಿಎಂ ಭೇಟಿಯಾಗಿರುವ ‘ಕೈ’ ಶಾಸಕರು 3ಕ್ಕೂ ಹೆಚ್ಚು ಬಾರಿ ನಾವು ಎಂಎಲ್​​ಎಗಳಾಗಿದ್ದೇವೆ. ಹೀಗಾಗಿ ನಮಗೂ ಅವಕಾಶ ನೀಡಿ ಎಂಬ ಆಗ್ರಹ ಮುಂದಿಟ್ಟಿದ್ದಾರೆ. ಶಾಸಕರಾದ ಎನ್​.ಎ.ಹ್ಯಾರಿಸ್​, ಹಂಪನಗೌಡ ಬಾದರ್ಲಿ, ಬಾಲಕೃಷ್ಣ, ನಾರಾಯಣಸ್ವಾಮಿ, ಅಶೋಕ ಪಟ್ಟಣ, ಯಶವಂತರಾಯಗೌಡ ಪಾಟೀಲ್, ತನ್ವೀರ್ ಸೇಠ್, ರಾಘವೇಂದ್ರ ಹಿಟ್ನಾಳ್ ಸೇರಿ 16 ಶಾಸಕರಿಂದ ಈ ಬಗ್ಗೆ ಮನವಿ ಮಾಡಲಾಗಿದೆ.

ಸಚಿವ ಸಂಪುಟ ವಿಚಾರವಾಗಿ ಸ್ವತಃ ನಾನೇ ದೆಹಲಿಗೆ ಹೋಗುತ್ತೇನೆ. ಉಪಚುನಾವಣೆ ಬಳಿಕ ಹೈಕಮಾಂಡ್​ ನಾಯಕರನ್ನು ಭೇಟಿ ಮಾಡಲಿದ್ದು, ಆ ವೇಳೆ ನಿಮ್ಮ ಆಗ್ರಹವನ್ನು ವರಿಷ್ಠರಿ ಗಮನಕ್ಕೆ ತರೋದಾಗಿ ಸಿಎಂ ಸಿದ್ದರಾಮಯ್ಯ ಈ ವೇಳೆ ಹಿರಿಯ ಶಾಸಕರಿಗೆ ತಿಳಿಸಿದ್ದಾರೆ. ಅಲ್ಲದೆ, ಉಪಚುನಾವಣೆ ಬಳಿಕ ಸಂಪುಟ ಪುನಾರಚನೆ ಮಾಡುವುದಾಗಿ ಭರವಸೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.

ಏಪ್ರಿಲ್ 11ರಂದು ದೆಹಲಿಗೆ ಹೋಗಲು ಪ್ಲ್ಯಾನ್,ಇನ್ನು ಸಿಎಂ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಾಸಕ ಹೆಚ್​.ಸಿ. ಬಾಲಕೃಷ್ಣ, ಮೂಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಶಾಸಕರೆಲ್ಲರೂ ಈ ವೇಳೆ ಉಪಸ್ಥಿತರಿದ್ದರು. ಮಂತ್ರಿ ಮಂಡಲ ಪುನಾರಚನೆ ವೇಳೆ ನಮ್ಮನ್ನು ಪರಿಗಣಿಸುವಂತೆ ಕೇಳಿದ್ದೇವೆ. ಕನಿಷ್ಠ 20 ಹಿರಿಯ ಶಾಸಕರಿಗೆ ಅವಕಾಶ ಕೊಡುವಂತೆ ಆಗ್ರಹಿಸಲಾಗಿದೆ. ಈ ವೇಳೆ ಹೈಕಮಾಂಡ್​ ಜೊತೆ ನಾನು ಮಾತನಾಡ್ತೇನೆ, ನೀವೂ ಮಾತನಾಡಿ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ ನಾವು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ. ಏಪ್ರಿಲ್ 11ರಂದು ದೆಹಲಿಗೆ ಹೋಗಲು ಪ್ಲ್ಯಾನ್ ಮಾಡಿದ್ದು, 40 ಶಾಸಕರು ಒಟ್ಟಾಗಿ ಹೈಕಮಾಂಡ್ ಗೆ ​ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Related Posts

ನೈಸ್ ಯೋಜನೆಯ ವಿರುದ್ಧ ಜೆಡಿಎಸ್ ಸಮರ: ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆಗಳು

ವಿಧಾನಮಂಡಲ ಅಧಿವೇಶನದಲ್ಲಿ ನೈಸ್ (NICE) ಯೋಜನೆಯ ಅಕ್ರಮಗಳ ಕುರಿತು ಚರ್ಚಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಜೆಡಿಎಸ್ ಮುಖಂಡರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರ ನೇತೃತ್ವದ ನಿಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ…

ಸನಾತನ ಧರ್ಮದ ಶ್ರೇಷ್ಠತೆ ಮತ್ತು ಪಾರದರ್ಶಕತೆಗೆ ಮಂತ್ರಾಲಯ ಶ್ರೀಗಳ ಕರೆ

ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಮಠ-ಮಾನ್ಯಗಳು ಮತ್ತು ಸಂಸ್ಥೆಗಳ ಆಡಳಿತದಲ್ಲಿ ಆರ್ಥಿಕ ಪಾರದರ್ಶಕತೆ ಅತ್ಯಗತ್ಯವೆಂದು ಪ್ರತಿಪಾದಿಸಿದ್ದಾರೆ. ಆಯೋಧ್ಯೆಯ ರಾಮಮಂದಿರದ ಹುಂಡಿ ಕಳ್ಳತನದ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ಈ ಪ್ರಕರಣದ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಹಾಗೂ ನ್ಯಾಯಾಲಯದಲ್ಲಿ ತನಿಖೆ…

You Missed

ನೈಸ್ ಯೋಜನೆಯ ವಿರುದ್ಧ ಜೆಡಿಎಸ್ ಸಮರ: ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆಗಳು

ನೈಸ್ ಯೋಜನೆಯ ವಿರುದ್ಧ ಜೆಡಿಎಸ್ ಸಮರ: ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆಗಳು

ಸನಾತನ ಧರ್ಮದ ಶ್ರೇಷ್ಠತೆ ಮತ್ತು ಪಾರದರ್ಶಕತೆಗೆ ಮಂತ್ರಾಲಯ ಶ್ರೀಗಳ ಕರೆ

ಸನಾತನ ಧರ್ಮದ ಶ್ರೇಷ್ಠತೆ ಮತ್ತು ಪಾರದರ್ಶಕತೆಗೆ ಮಂತ್ರಾಲಯ ಶ್ರೀಗಳ ಕರೆ

ಬಿಸಿಸಿಐಗೆ ಸ್ಪಾನ್ಸರ್ ಶಿಪ್ ಬಿಸಿ: ದುಬಾರಿ ಬೆಲೆಯಿಂದ ಹಿಂದೆ ಸರಿದ ಕಂಪನಿಗಳು!

ಬಿಸಿಸಿಐಗೆ ಸ್ಪಾನ್ಸರ್ ಶಿಪ್ ಬಿಸಿ: ದುಬಾರಿ ಬೆಲೆಯಿಂದ ಹಿಂದೆ ಸರಿದ ಕಂಪನಿಗಳು!

ಕರ್ನಾಟಕದಲ್ಲಿ ನಕಲಿ ‘ಪನೀರ್’ ಮಾರಾಟಕ್ಕೆ ಒಂದು ವರ್ಷ ಬ್ರೇಕ್: ಸರ್ಕಾರದ ದಿಟ್ಟ ಕ್ರಮ

ಕರ್ನಾಟಕದಲ್ಲಿ ನಕಲಿ ‘ಪನೀರ್’ ಮಾರಾಟಕ್ಕೆ ಒಂದು ವರ್ಷ ಬ್ರೇಕ್: ಸರ್ಕಾರದ ದಿಟ್ಟ ಕ್ರಮ

ಚಾಮರಾಜನಗರ ಎನ್‌*ಕೌಂಟರ್ ಪ್ರಕರಣ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ .

ಚಾಮರಾಜನಗರ ಎನ್‌*ಕೌಂಟರ್ ಪ್ರಕರಣ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ .

ವಾಹನ ಸವಾರರಿಗೆ ಬಿತ್ತು ಬೆಲೆ ಏರಿಕೆ ಬಿಸಿ: ಕರ್ನಾಟಕದಲ್ಲಿ PUC ಮಾಲಿನ್ಯ ತಪಾಸಣೆ ದರ ಹೆಚ್ಚಳ!

ವಾಹನ ಸವಾರರಿಗೆ ಬಿತ್ತು ಬೆಲೆ ಏರಿಕೆ ಬಿಸಿ: ಕರ್ನಾಟಕದಲ್ಲಿ PUC ಮಾಲಿನ್ಯ ತಪಾಸಣೆ ದರ ಹೆಚ್ಚಳ!