ಕರ್ನಾಟಕದಲ್ಲಿ ನಕಲಿ ‘ಪನೀರ್’ ಮಾರಾಟಕ್ಕೆ ಒಂದು ವರ್ಷ ಬ್ರೇಕ್: ಸರ್ಕಾರದ ದಿಟ್ಟ ಕ್ರಮ

ಸಾರ್ವಜನಿಕರ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ‘ಪನೀರ್’ ಹೆಸರಿನಲ್ಲಿ ಮಾರಾಟವಾಗುತ್ತಿರುವ ನಕಲಿ ಹಾಗೂ ನಾನ್-ಡೈರಿ ಅನಲಾಗ್ (Analogue) ಪನೀರ್ ಉತ್ಪನ್ನಗಳ ಮೇಲಿನ ನಿಷೇಧವನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿದೆ. ಈ ಕುರಿತು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಏನಿದು ನಕಲಿ ಅಥವಾ ಅನಲಾಗ್ ಪನೀರ್?
ಹಾಲಿನ ಕೊಬ್ಬು ಮತ್ತು ಹಾಲಿನ ಘನವಸ್ತುಗಳ ಬದಲಿಗೆ ಸಸ್ಯಜನ್ಯ ಎಣ್ಣೆ, ಕೃತಕ കൊಬ್ಬು ಅಥವಾ ಇತರ ಹಾಲೇತರ ಪದಾರ್ಥಗಳನ್ನು ಬಳಸಿ ತಯಾರಿಸುವ ಉತ್ಪನ್ನಗಳನ್ನು ‘ಅನಲಾಗ್ ಪನೀರ್’ ಎನ್ನಲಾಗುತ್ತದೆ. FSSAI ನಿಯಮಾವಳಿಗಳ ಪ್ರಕಾರ, ಪನೀರ್ ಎಂಬುದು ಸಂಪೂರ್ಣವಾಗಿ ಹಾಲಿನಿಂದ ಮಾತ್ರ ತಯಾರಾಗಬೇಕಾದ ಉತ್ಪನ್ನ. ಹೀಗಾಗಿ, ಹಾಲೇತರ ಪದಾರ್ಥಗಳಿಂದ ತಯಾರಿಸಿದ ಉತ್ಪನ್ನಗಳನ್ನು ‘ಪನೀರ್’ ಹೆಸರಿನಲ್ಲಿ ಮಾರಾಟ ಮಾಡುವುದು, ಸಂಗ್ರಹಿಸುವುದು, ಪ್ಯಾಕ್ ಮಾಡುವುದು ಅಥವಾ ಉಪಾಹಾರ ಗೃಹಗಳಲ್ಲಿ ಬಳಸುವುದು ಸಂಪೂರ್ಣ ಕಾನೂನುಬಾಹಿರ.

ಸರ್ಕಾರದ ಮುಖ್ಯ ಮಾರ್ಗದರ್ಶಿ ಸೂತ್ರಗಳು:

ಬ್ಯಾನ್ ವ್ಯಾಪ್ತಿ: ಅನಲಾಗ್ ಪನೀರ್‌ನ ತಯಾರಿಕೆ, ಸಾಗಣೆ, ವಿತರಣೆ, ಸಗಟು-ಚಿಲ್ಲರೆ ಮಾರಾಟ ಮತ್ತು ಪ್ರದರ್ಶನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಹೋಟಲ್ & ರೆಸ್ಟೋರೆಂಟ್‌ಗಳಿಗೆ ಎಚ್ಚರಿಕೆ: ಯಾವುದೇ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ನಕಲಿ ಪನೀರ್ ಬಳಸುವುದು ಅಥವಾ ಸಂಗ್ರಹಿಸುವುದು ಶಿಕ್ಷಾರ್ಹ ಅಪರಾಧ.

ಮಿನಾಯಿತಿ: ಈಗಾಗಲೇ FSSAI ನಿಂದ ಪ್ರತ್ಯೇಕ ಮಾನದಂಡ ಹೊಂದಿರುವ ಫ್ರೋಜನ್ ಡೆಸರ್ಟ್, ಪ್ರೊಸೆಸ್ಡ್ ಚೀಸ್ ಹಾಗೂ ಮಿಕ್ಸ್ಡ್ ಫ್ಯಾಟ್ ಸ್ಪ್ರೆಡ್‌ಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.

ಆಹಾರ ಸುರಕ್ಷತೆಗೆ ತಾಲೂಕು ಮಟ್ಟದಲ್ಲಿ ‘ವಾಚ್‌ಟೀಮ್’
ಆಹಾರ ಸುರಕ್ಷತೆ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಸಚಿವ ಯು.ಟಿ. ಖಾದರ್, “ಆಹಾರದಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ಈಗಾಗಲೇ ನಿಷೇಧಿಸಲಾಗಿದ್ದು, ಅಜಿನಮೊಟೊ ದುರ್ಬಳಕೆ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಪ್ರತಿಯೊಂದು ಕಡೆ ದಾಳಿ ನಡೆಸುವುದು ಪ್ರಾಯೋಗಿಕವಾಗಿ ಸವಾಲಾಗಿರುವುದರಿಂದ, ನೈರ್ಮಲ್ಯ ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ತಾಲೂಕು ಮಟ್ಟದಲ್ಲಿ ಹಿರಿಯ ನಾಗರಿಕರು ಮತ್ತು ಸಾಮಾಜಿಕ ಕಾರ್ಯಕರ್ತರನ್ನೊಳಗೊಂಡ ‘ವಾಚ್‌ಟೀಮ್’ ರಚಿಸಲು ಸರ್ಕಾರ ಚಿಂತನೆ ನಡೆಸಿದೆ” ಎಂದು ತಿಳಿಸಿದರು.

Related Posts

ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್!

ಮೈಸೂರು  :- ದಸರಾ 2026ರ ಆಹ್ವಾನ ಪತ್ರಿಕೆ ಪ್ರಕಟವಾಗಿದ್ದು, ಅಕ್ಟೋಬರ್ 11ರಿಂದ 21ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕಂಬಳ ಮತ್ತು ಡ್ರೋನ್ ಶೋ ಪ್ರಮುಖ ಆಕರ್ಷಣೆಯಾಗಲಿವೆ. ಅಕ್ಟೋಬರ್ 21ರಂದು ವಿಜಯ ದಶಮಿಯ ಜಂಬೂ ಸವಾರಿಯೊಂದಿಗೆ…

MRPLನಲ್ಲಿ ಸ್ಫೋಟ: 9 ಕಾರ್ಮಿಕರಿಗೆ ಗಾಯ; ಓರ್ವ ವ್ಯಕ್ತಿ ಸಾ*

ಮಂಗಳೂರು: ಮಂಗಳೂರಿನ ಜೋಕಟ್ಟೆ ಬಳಿಯಿರುವ ಮಂಗಳೂರು ರಿಫೈನರಿ ಆ್ಯಂಡ್​ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (MRPL)ನ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಟೆಸ್ಟಿಂಗ್​​ ಮಾಡುವ ಸಂದರ್ಭದಲ್ಲಿ ಭಾರೀ ಸ್ಫೋಟ ಸಂಭವಿಸಿರುವ ಘಟನೆ ನಡೆದಿದೆ. ‘ಅವಘಡದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 9 ಕಾರ್ಮಿಕರಿಗೆ  ಗಾಯಗಳಾಗಿವೆ. ಪ್ರಸ್ತುತ ಬೆಂಕಿ…

You Missed

ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್!

ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್!

MRPLನಲ್ಲಿ ಸ್ಫೋಟ: 9 ಕಾರ್ಮಿಕರಿಗೆ ಗಾಯ; ಓರ್ವ ವ್ಯಕ್ತಿ ಸಾ*

MRPLನಲ್ಲಿ ಸ್ಫೋಟ: 9 ಕಾರ್ಮಿಕರಿಗೆ ಗಾಯ; ಓರ್ವ ವ್ಯಕ್ತಿ ಸಾ*

ಚಿಕ್ಕಮಗಳೂರಿನಲ್ಲಿ ನಕಲಿ ಲೇಡಿ PSI ಬಂಧನ !

ಚಿಕ್ಕಮಗಳೂರಿನಲ್ಲಿ ನಕಲಿ ಲೇಡಿ PSI ಬಂಧನ !

ಕರ್ನಾಟಕ ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿ-ಸಿಎಂ ಡಿಕೆಶಿಗೆ ಬಿವೈ ವಿಜಯೇಂದ್ರ ಆಗ್ರಹ.

ಕರ್ನಾಟಕ ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿ-ಸಿಎಂ ಡಿಕೆಶಿಗೆ ಬಿವೈ ವಿಜಯೇಂದ್ರ ಆಗ್ರಹ.

ಯುವ ಸಂಭ್ರಮ’ಕ್ಕೆ ಇಂದು ಭರ್ಜರಿ ಚಾಲನೆ

ಯುವ ಸಂಭ್ರಮ’ಕ್ಕೆ ಇಂದು ಭರ್ಜರಿ ಚಾಲನೆ

ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ!

ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ!