ಕರ್ನಾಟಕ ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿ-ಸಿಎಂ ಡಿಕೆಶಿಗೆ ಬಿವೈ ವಿಜಯೇಂದ್ರ ಆಗ್ರಹ.

ಆರ್ಥಿಕ ಇಲಾಖೆ ನೀಡಿರುವ ಪತ್ರ ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಆದ್ದರಿಂದ ಹಣಕಾಸು ಸಚಿವರೂ ಆಗಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೈಜ ಹಣಕಾಸು ಪರಿಸ್ಥಿತಿ ಕುರಿತು ತಕ್ಷಣ ಶ್ವೇತಪತ್ರ ಹೊರಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ನಾಯಕರು ಗ್ಯಾರಂಟಿಗಳ ಮೂಲಕ ಜನರಿಗೆ ಹಲವು ಭರವಸೆಗಳನ್ನು ನೀಡಿದ್ದರು. ಆದರೆ ಈಗ ಅದೇ ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಸರ್ಕಾರಕ್ಕೆ ಕಷ್ಟವಾಗುತ್ತಿದೆ. ವಿಕಲಚೇತನರ ಪಿಂಚಣಿ, ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಹಣ ತಲುಪುತ್ತಿಲ್ಲ.

ಬಡವರಿಗೆ ಮನೆ ನಿರ್ಮಾಣದಂತಹ ಮೂಲಭೂತ ಕಾರ್ಯಕ್ರಮಗಳಿಗೂ ತೊಂದರೆಯಾಗಿದೆ. ಆದರೆ ಸರ್ಕಾರ ಗ್ಯಾರಂಟಿ ಅನುಷ್ಠಾನ ಸಮಿತಿಗಳ ಹೆಸರಿನಲ್ಲಿ ರಾಜಕೀಯ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ಕೆಲಸ ಮಾಡುತ್ತಿದೆ. ಜನರ ತೆರಿಗೆ ಹಣವನ್ನು ರಾಜಕೀಯ ಕಾರ್ಯಕರ್ತರಿಗಾಗಿ ಬಳಸುವುದನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಬರದ ಪರಿಸ್ಥಿತಿ ತೀವ್ರವಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ರೈತರ ನೆರವಿಗೆ ಧಾವಿಸುವ ಬದಲು ಉಡಾಫೆಯಾಗಿ ವರ್ತಿಸುತ್ತಿದೆ. ಸಿಎಂ ಡಿಕೆ ಶಿವಕುಮಾರ್ ವಿಶೇಷ ಅಧಿವೇಶನ ಕರೆದು ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ರೈತರಿಗೆ ನೇರ ಪರಿಹಾರ ನೀಡುವ

ವಿಶೇಷ ಅಧಿವೇಶನದ ವೇಳೆ  ಸರ್ಕಾರ ರೈತರಿಗೆ ಎಕರೆಗೆ ಕನಿಷ್ಠ 50 ಸಾವಿರ ರೂ.  ಪರಿಹಾರ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಆದರೆ ರಾಜ್ಯ ಸರ್ಕಾರ ರೈತರಿಗೆ ಕೇವಲ ₹2,500 ಪರಿಹಾರ ನೀಡಿ ಕೈತೊಳೆದುಕೊಂಡಿದೆ. ಇದು ರೈತರ ಸಂಕಷ್ಟಕ್ಕೆ ತಕ್ಕ ಪರಿಹಾರವಲ್ಲ. ಬರಗಾಲದಲ್ಲಿ ರೈತರ ಬೆನ್ನಿಗೆ ನಿಲ್ಲಬೇಕಿದ್ದ ಸರ್ಕಾರ ಅವರ ನೋವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ವಿಜಯೇಂದ್ರ  ಕಿಡಿಕಾರಿದರು.

Related Posts

ಯುವ ಸಂಭ್ರಮ’ಕ್ಕೆ ಇಂದು ಭರ್ಜರಿ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮುನ್ನುಡಿಯಾದ ‘ಯುವ ಸಂಭ್ರಮ-2026’ ಸಾಂಸ್ಕೃತಿಕ ಹಬ್ಬಕ್ಕೆ ಇಂದು ಸಂಜೆ ಭರ್ಜರಿ ಚಾಲನೆ ದೊರೆಯಲಿದೆ. ಮೈಸೂರಿನ ಮಾನಸಗಂಗೋತ್ರಿಯ ಕುವೆಂಪು ಮುಕ್ತ ಬಯಲು ರಂಗಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಂಜೆ 4:30ಕ್ಕೆ ಕಾರ್ಯಕ್ರಮವನ್ನು…

ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ!

ಇತ್ತೀಚೆಗೆ ರಾಜ್ಯದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಮಾಡಿಕೊಂಡು, ಹೂಡಿಕೆ ಮಾಡಿಸಿ ಮೋಸ ಮಾಡುವ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ. ಇಂತಹುದೇ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಫೇಸ್​ಬುಕ್ ಜಾಹೀರಾತು ನಂಬಿ ಟೆಕ್ಕಿಯೊಬ್ಬರು 1.9 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.…

You Missed

ಕರ್ನಾಟಕ ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿ-ಸಿಎಂ ಡಿಕೆಶಿಗೆ ಬಿವೈ ವಿಜಯೇಂದ್ರ ಆಗ್ರಹ.

ಕರ್ನಾಟಕ ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿ-ಸಿಎಂ ಡಿಕೆಶಿಗೆ ಬಿವೈ ವಿಜಯೇಂದ್ರ ಆಗ್ರಹ.

ಯುವ ಸಂಭ್ರಮ’ಕ್ಕೆ ಇಂದು ಭರ್ಜರಿ ಚಾಲನೆ

ಯುವ ಸಂಭ್ರಮ’ಕ್ಕೆ ಇಂದು ಭರ್ಜರಿ ಚಾಲನೆ

ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ!

ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ!

ಅಪಾರ್ಟ್‌ಮೆಂಟ್‌ನಲ್ಲಿ RSS ಸಮಾವೇಶಕ್ಕೆ ಖರ್ಗೆ ಆಕ್ಷೇಪ!

ಅಪಾರ್ಟ್‌ಮೆಂಟ್‌ನಲ್ಲಿ RSS ಸಮಾವೇಶಕ್ಕೆ ಖರ್ಗೆ ಆಕ್ಷೇಪ!

ದಸರಾ ಮಾದರಿ ಅದ್ದೂರಿ ಹಾಸನಾಂಬೆ ಉತ್ಸವ ,ಅ 29ರಿಂದ ನ 11ರವರೆಗೆ ವೈಭವದ ದರ್ಶನೋತ್ಸವ!

ದಸರಾ ಮಾದರಿ ಅದ್ದೂರಿ ಹಾಸನಾಂಬೆ ಉತ್ಸವ ,ಅ 29ರಿಂದ ನ 11ರವರೆಗೆ ವೈಭವದ ದರ್ಶನೋತ್ಸವ!

ಹಿರಿಯರ ಸ್ಮರಣೆಗೆಂದೇ ಮೀಸಲು ಪಿತೃಪಕ್ಷ! ಇಂದಿನಿಂದ(ಸೆ.27) ಆರಂಭ, ಇಲ್ಲಿದೆ ಆಚರಣೆ ಮಹತ್ವ

ಹಿರಿಯರ ಸ್ಮರಣೆಗೆಂದೇ ಮೀಸಲು ಪಿತೃಪಕ್ಷ! ಇಂದಿನಿಂದ(ಸೆ.27) ಆರಂಭ, ಇಲ್ಲಿದೆ ಆಚರಣೆ ಮಹತ್ವ