ಅಪಾರ್ಟ್‌ಮೆಂಟ್‌ನಲ್ಲಿ RSS ಸಮಾವೇಶಕ್ಕೆ ಖರ್ಗೆ ಆಕ್ಷೇಪ!

ಬೆಂಗಳೂರು : ಖಾಸಗಿ ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವತಿಯಿಂದ ನಡೆಯುತ್ತಿರುವ ಪ್ರಚಾರ ಹಾಗೂ ಸಭೆ-ಸಮಾರಂಭಗಳ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜಧಾನಿ ಬೆಂಗಳೂರಿನ ಪ್ರಸಿದ್ಧ ಅಪಾರ್ಟ್‌ಮೆಂಟ್ ಒಂದರಲ್ಲಿ ಯುವಜನತೆ ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ಹಮ್ಮಿಕೊಳ್ಳಲಾಗಿದ್ದ ‘ಇಂಟ್ರೊಡಕ್ಷನ್ ಟು ಆರ್‌ಎಸ್‌ಎಸ್ (ಆರ್‌ಎಸ್‌ಎಸ್ ಪರಿಚಯ)’ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಎಕ್ಸ್​ ಪೋಸ್ಟ್​​ನಲ್ಲಿ ಹಂಚಿಕೊಂಡಿರುವ ಅವರು, ವಸತಿ ಸಮುಚ್ಚಯಗಳ ಬಳಕೆಯ ಕುರಿತು ಪ್ರಶ್ನೆ ಎತ್ತಿದ್ದಾರೆ.

ಯಾವುದೇ ಸಂಸ್ಥೆಯು ಸಾರ್ವಜನಿಕರ ಅಥವಾ ನಿವಾಸಿಗಳ ಸಮ್ಮುಖಕ್ಕೆ ಬರುವ ಮುನ್ನ ಅದರ ಶಾಸನಬದ್ಧ ಹಾಗೂ ಕಾನೂನಾತ್ಮಕ ಸ್ಥಿತಿಗತಿ, ಹಣಕಾಸಿನ ಮೂಲ ಮತ್ತು ಹೊಣೆಗಾರಿಕೆಗಳು ಸ್ಪಷ್ಟವಾಗಿರಬೇಕು ಎಂದು ಒತ್ತಾಯಿಸಿರುವ ಖರ್ಗೆ, ವಸತಿ ಪ್ರದೇಶಗಳು ರಾಜಕೀಯ ಅಥವಾ ಸೈದ್ಧಾಂತಿಕ ಪ್ರಚಾರದ ಕೇಂದ್ರಗಳಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಎಕ್ಸ್ ಸಂದೇಶ


ವಸತಿ ಸಮುಚ್ಚಯಗಳು ಎನ್ನುವುದು ಪ್ರಜೆಗಳ ನೆಮ್ಮದಿಯ ವಾಸಕ್ಕಾಗಿಯೋ ಅಥವಾ ನಿರ್ದಿಷ್ಟ ರಾಜಕೀಯ-ಸಾಮಾಜಿಕ ಸಿದ್ಧಾಂತಗಳನ್ನು ತುರುಕುವ ಕೇಂದ್ರಗಳಾಗಬೇಕೇ ಎಂದು ಅಪಾರ್ಟ್‌ಮೆಂಟ್ ಸಂಘಗಳನ್ನು ಪ್ರಿಯಾಂಕ್ ಖರ್ಗೆ ನೇರವಾಗಿ ಪ್ರಶ್ನಿಸಿದ್ದಾರೆ. ಯಾವುದೇ ಸಂಘಟನೆಯು ನಾಗರಿಕರನ್ನು ಅಥವಾ ಅವರ ಮಕ್ಕಳನ್ನು ತಲುಪುವ ಮುನ್ನ ಆ ಸಂಸ್ಥೆಯ ಹಣಕಾಸಿನ ಸ್ವರೂಪ, ಒಟ್ಟು ರಚನೆ ಹಾಗೂ ಜವಾಬ್ದಾರಿಯ ಬಗ್ಗೆ ಕನಿಷ್ಠ ಪಾರದರ್ಶಕತೆ ಇರಲೇಬೇಕು ಎಂದು ಖರ್ಗೆ ಪ್ರತಿಪಾದಿಸಿದ್ದಾರೆ.

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಆರ್‌ಎಸ್‌ಎಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮವೇನು?


ಬೆಂಗಳೂರಿನ ಫೀನಿಕ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಆರ್‌ಎಸ್‌ಎಸ್ ವತಿಯಿಂದ ಸೆಪ್ಟೆಂಬರ್ 26 ರ ಸಂಜೆ ‘ಇಂಟ್ರೊಡಕ್ಷನ್ ಟು ಆರ್​ಸ್​ಎಸ್’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆರ್‌ಎಸ್‌ಎಸ್‌ನ ಗುರಿಗಳು, ಚಟುವಟಿಕೆಗಳು ಹಾಗೂ ಕಾರ್ಯನಿರ್ವಹಣೆ ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ‘ಬಲವಾದ, ಒಗ್ಗಟ್ಟಿನ ಹಾಗೂ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಆರ್‌ಎಸ್‌ಎಸ್ ನೀಡುತ್ತಿರುವ ಕೊಡುಗೆ ಹಾಗೂ ಅದರ ದೂರದೃಷ್ಟಿಯನ್ನು ತಿಳಿದುಕೊಳ್ಳಿ’ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಆಹ್ವಾನ ನೀಡಲಾಗಿತ್ತು.. ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಸಹ ಸಂಪರ್ಕ ಪ್ರಮುಖ್ ಹಾಗೂ ರಾಷ್ಟ್ರೋತ್ಥಾನ ಆಸ್ಪತ್ರೆಯ ಧರ್ಮದರ್ಶಿ ಹರೀಶ್ ರಾವ್ ಉಪನ್ಯಾಸ ನೀಡಿದ್ದರು.

ಪ್ರಿಯಾಂಕ್ ಖರ್ಗೆ ಆರ್​ಎಸ್​ಎಸ್ ಉಪನ್ಯಾಸ ಕಾರ್ಯಕ್ರಮಕ್ಕೆ ಆಕ್ಷೇಪವೇನು?
ಖಾಸಗಿ ವಸತಿ ಪ್ರದೇಶಗಳು ಪ್ರಮುಖವಾಗಿ ಎಳೆಯ ಮನಸ್ಸುಗಳನ್ನು ಗುರಿಯಾಗಿಸಿಕೊಂಡು ಸೈದ್ಧಾಂತಿಕ ಬೋಧನೆ ನಡೆಸಲು ವೇದಿಕೆಯಾಗುತ್ತಿರುವುದು ಕಳವಳಕಾರಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆರ್‌ಎಸ್‌ಎಸ್ ಸಂಸ್ಥೆಯ ಶಾಸನಬದ್ಧ ಹಾಗೂ ಕಾನೂನಾತ್ಮಕ ಸ್ಥಿತಿಗತಿಯೇ ಇಂದಿಗೂ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಂತಹ ಸಂಸ್ಥೆಗಳಿಗೆ ಅಪಾರ್ಟ್‌ಮೆಂಟ್ ಬಾಗಿಲು ತೆರೆಯುತ್ತಿರುವುದು ಆಶ್ಚರ್ಯಕರ ಸಂಗತಿ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

 

Related Posts

ಯುವ ಸಂಭ್ರಮ’ಕ್ಕೆ ಇಂದು ಭರ್ಜರಿ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮುನ್ನುಡಿಯಾದ ‘ಯುವ ಸಂಭ್ರಮ-2026’ ಸಾಂಸ್ಕೃತಿಕ ಹಬ್ಬಕ್ಕೆ ಇಂದು ಸಂಜೆ ಭರ್ಜರಿ ಚಾಲನೆ ದೊರೆಯಲಿದೆ. ಮೈಸೂರಿನ ಮಾನಸಗಂಗೋತ್ರಿಯ ಕುವೆಂಪು ಮುಕ್ತ ಬಯಲು ರಂಗಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಂಜೆ 4:30ಕ್ಕೆ ಕಾರ್ಯಕ್ರಮವನ್ನು…

ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ!

ಇತ್ತೀಚೆಗೆ ರಾಜ್ಯದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಮಾಡಿಕೊಂಡು, ಹೂಡಿಕೆ ಮಾಡಿಸಿ ಮೋಸ ಮಾಡುವ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ. ಇಂತಹುದೇ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಫೇಸ್​ಬುಕ್ ಜಾಹೀರಾತು ನಂಬಿ ಟೆಕ್ಕಿಯೊಬ್ಬರು 1.9 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.…

You Missed

ಯುವ ಸಂಭ್ರಮ’ಕ್ಕೆ ಇಂದು ಭರ್ಜರಿ ಚಾಲನೆ

ಯುವ ಸಂಭ್ರಮ’ಕ್ಕೆ ಇಂದು ಭರ್ಜರಿ ಚಾಲನೆ

ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ!

ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ!

ಅಪಾರ್ಟ್‌ಮೆಂಟ್‌ನಲ್ಲಿ RSS ಸಮಾವೇಶಕ್ಕೆ ಖರ್ಗೆ ಆಕ್ಷೇಪ!

ಅಪಾರ್ಟ್‌ಮೆಂಟ್‌ನಲ್ಲಿ RSS ಸಮಾವೇಶಕ್ಕೆ ಖರ್ಗೆ ಆಕ್ಷೇಪ!

ದಸರಾ ಮಾದರಿ ಅದ್ದೂರಿ ಹಾಸನಾಂಬೆ ಉತ್ಸವ ,ಅ 29ರಿಂದ ನ 11ರವರೆಗೆ ವೈಭವದ ದರ್ಶನೋತ್ಸವ!

ದಸರಾ ಮಾದರಿ ಅದ್ದೂರಿ ಹಾಸನಾಂಬೆ ಉತ್ಸವ ,ಅ 29ರಿಂದ ನ 11ರವರೆಗೆ ವೈಭವದ ದರ್ಶನೋತ್ಸವ!

ಹಿರಿಯರ ಸ್ಮರಣೆಗೆಂದೇ ಮೀಸಲು ಪಿತೃಪಕ್ಷ! ಇಂದಿನಿಂದ(ಸೆ.27) ಆರಂಭ, ಇಲ್ಲಿದೆ ಆಚರಣೆ ಮಹತ್ವ

ಹಿರಿಯರ ಸ್ಮರಣೆಗೆಂದೇ ಮೀಸಲು ಪಿತೃಪಕ್ಷ! ಇಂದಿನಿಂದ(ಸೆ.27) ಆರಂಭ, ಇಲ್ಲಿದೆ ಆಚರಣೆ ಮಹತ್ವ

ಮೈಸೂರು ದಸರಾ 2026: ಆಹಾರ ಮೇಳದಲ್ಲಿ ಪಾರಂಪರಿಕ ರುಚಿಯ ಜೊತೆಗೆ ರಷ್ಯಾ, ಟಿಬೆಟಿಯನ್ ಖಾದ್ಯಗಳ ವೈಭವ!

ಮೈಸೂರು ದಸರಾ 2026: ಆಹಾರ ಮೇಳದಲ್ಲಿ ಪಾರಂಪರಿಕ ರುಚಿಯ ಜೊತೆಗೆ ರಷ್ಯಾ, ಟಿಬೆಟಿಯನ್ ಖಾದ್ಯಗಳ ವೈಭವ!