ಕರ್ನಾಟಕದ ತಮ್ಮ ಹುಟ್ಟೂರಿನಲ್ಲಿ ಇಂದಿಗೂ ಜಾತಿ ಪದ್ಧತಿ ಜೀವಂತವಾಗಿದ್ದು, ಊರಿನ ದೇವಸ್ಥಾನಕ್ಕೆ ತಮಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, 12 ವರ್ಷದವರಿದ್ದಾಗ ಹೋಟೆಲೊಂದರಲ್ಲಿ ಊಟ ಮಾಡಿದ ನಂತರ ಹಣ ನೀಡಿದರೂ ಸಹ, ಕೆಳಜಾತಿಯವರೆಂಬ ಕಾರಣಕ್ಕೆ ತಟ್ಟೆಯನ್ನು ತಾವೇ ತೊಳೆಯಬೇಕಾದ ಅನಿವಾರ್ಯತೆ ಇತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೇಲೆಯೂ ವಿನೋದ್ ಅವರ ಸಂಕಷ್ಟಗಳು ಮುಗಿಯಲಿಲ್ಲ. ಅವರ ಮೈಬಣ್ಣ ಕಪ್ಪಗಿದೆ ಎಂಬ ಕಾರಣಕ್ಕೆ ಹಲವು ಬಾರಿ ಅವಕಾಶಗಳನ್ನು ನಿರಾಕರಿಸಲಾಗಿತ್ತು. ಒಮ್ಮೆ ಮನೆಗೆಲಸದವನ ಪಾತ್ರಕ್ಕೆ ಆಯ್ಕೆಯಾಗಿದ್ದರೂ, ಕ್ರಿಯೇಟಿವ್ ಡೈರೆಕ್ಟರ್ ಅವರ ಕಪ್ಪು ಮೈಬಣ್ಣವನ್ನು ನೋಡಿ ಸೆಟ್ನಿಂದಲೇ ವಾಪಸ್ ಕಳುಹಿಸಿದ್ದ ಘಟನೆಯನ್ನು ಅವರು ಸ್ಮರಿಸಿದ್ದಾರೆ. ಬಡತನದ ಬಾಲ್ಯ, ಅಪ್ಪನ ಕುಡಿತ ಮತ್ತು ತಾಯಿಯ ಕಷ್ಟಗಳ ನಡುವೆ ಬೆಳೆದ ಅವರಿಗೆ ಹಬ್ಬಗಳೆಂದರೆ ಎಂದೂ ಸಡಗರವಿರಲಿಲ್ಲ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಆರಂಭಿಸಿ ಇಂದು ಪಂಚಾಯತ್ನಂತಹ ದೊಡ್ಡ ಸರಣಿಯಲ್ಲಿ ನಟಿಸುವವರೆಗಿನ ಅವರ ಈ ಪಯಣ ಅಪಾರ ನೋವು ಮತ್ತು ಅವಮಾನಗಳನ್ನು ದಾಟಿ ಬಂದಿದ್ದಾಗಿದೆ.




