ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸತತ 12 ಸೀಸನ್ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಮೊದಲ ಸೀಸನ್ ನೆನಪುಗಳು ಯಾವಾಗಲೂ ಅತ್ಯಂತ ಪ್ರಿಯವಾದವು. ಈ ಬಾರಿಯೂ ಅವರೇ ಕಾರ್ಯಕ್ರಮದ ಸಾರಥ್ಯ ವಹಿಸಿದ್ದು, ಶೋಗೆ ಹೊಸ ಮೆರುಗು ನೀಡಲಿದ್ದಾರೆ.
ಈ ಬಾರಿಯ ಸೀಸನ್ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ‘ಅಗ್ನಿಪರೀಕ್ಷೆ’ ಸುತ್ತಿನಲ್ಲಿ ಗೆದ್ದು ಬಂದ ಮೂವರು ಜನಸಾಮಾನ್ಯರು, ವಿವಿಧ ರಂಗಗಳ ಸೆಲೆಬ್ರಿಟಿಗಳ ಜೊತೆಗೆ ಬಿಗ್ ಬಾಸ್ ಮನೆ ಪ್ರವೇಶಿಸುತ್ತಿದ್ದಾರೆ. ಸಂಪೂರ್ಣವಾಗಿ ‘ಏವಿಯೇಷನ್’ (ವಿಮಾನಯಾನ) ಥೀಮ್ ಹೊಂದಿರುವ ಈ ಸೀಸನ್ಗೆ “Flight No. ಬಿಗ್ ಬಾಸ್ 13 Grand Take Offಗೆ Runway Ready!” ಎಂಬ ರೋಚಕ ಶೀರ್ಷಿಕೆ ನೀಡಲಾಗಿದೆ.
ಈ ಭಾನುವಾರ ಸಂಜೆ 7 ಗಂಟೆಯಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಾಗೂ ಜಿಯೋ ಹಾಟ್ಸ್ಟಾರ್ (JioHotstar) ಒಟಿಟಿ ವೇದಿಕೆಯಲ್ಲಿ ಪ್ರಸಾರ ಆರಂಭವಾಗಲಿದೆ.




