ಪ್ರಶೋತ್ತರ ವೇಳೆಯಲ್ಲಿ ಸಿ.ಬಿ . ಸುರೇಶ್ ಬಾಬು ಪ್ರಸ್ತಾವಕ್ಕೆ ಉತ್ತರಿಸಿದ ಅವರು, ಆಗಸ್ಟ್ 15ರಂದು ಮೈಸೂರು. ಬೆಳಗಾವಿ, ಮಂಗಳೂರಿನಲ್ಲಿ ‘ಅಕ್ಕ ಪಡೆ’ ಕಾರ್ಯ ಆರಂಭವಾಗಲಿದೆ. ಪಡೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ, ಎನ್ ಸಿಸಿ ಹಿರಿಯ ಕೇಡರ್ ಇರಲಿದ್ದು, ಇಲಾಖೆ ವಾಹನ ನೀಡಲಾಗುವುದು, ತಂಡ ಮೊದಲ ಹಂತದಲ್ಲಿ ಕಾಲೇಜು ಬಿಟ್ಟವರ ಮಾಹಿತಿ ಪಡೆಯಲಿದೆ ಎಂದರು.

ಸಾಮಾಜಿಕ ಪಿಡುಗಾಗಿರುವ ಬಾಲ್ಯ ವಿವಾಹವನ್ನು ಪರಿಣಾಮಕಾರಿಯಾಗಿ ತಡೆಯಲು ಹತ್ತು ಇಲಾಖೆಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಇದನ್ನು ಬೇರು ಕಿತ್ತೊಗೆಯಬೇಕಿದೆ. ಬಾಲ್ಯ ವಿವಾಹ ತಡೆ ತಿದ್ದುಪಡಿ ವಿಧೇಯಕ ತರುತ್ತಿದ್ದೇವೆ ಎಂದರು. ರಾಜ್ಯದಲ್ಲಿ ಬಾಲಗರ್ಭಿಣಿ ಪ್ರಕರಣಗಳು 2022-23ರಲ್ಲಿ 405, 2023-24ರಲ್ಲಿ 709, 2024-25ರಲ್ಲಿ 685 ಸರ್ಕಾರದ ಗಮನಕ್ಕೆ ಬಂದಿದೆ. ಜಿಲ್ಲೆಗೊಂದು ಮಕ್ಕಳ ರಕ್ಷಣಾ ಸಮಿತಿ ಇರಲಿದೆ, ಸಾಮಾಜಿಕ ಮಾಧ್ಯಮಕ್ಕೂ ಕಡಿವಾಣ ಹಾಕಬೇಕಿದೆ, ಕೆಲವು ಸಮುದಾಯಗಳಲ್ಲಿ ಬಾಲ್ಯ ವಿವಾಹ ಆಚರಣೆಯಲ್ಲಿದ್ದು, ಕಡಿವಾಣ ಹಾಕಲಾಗುತ್ತಿದೆ.
66% ಮಕ್ಕಳ ಸಹಾಯವಾಣಿ 1098, 24 ಗಂಟೆ ಕಾರ್ಯನಿರ್ವಹಿಸಲ್ಲಿದೆ . ಸಂಕಷ್ಟದಲ್ಲಿರುವ ಮಕ್ಕಳು ಹಾಗೂ ಸಂತ್ರಸ್ತರು ಯಾವುದೇ ಸಮಯದಲ್ಲಿ ಕರೆ ಮಾಡಿದರೂ ಮಕ್ಕಳ ರಕ್ಷಣೆಗೆ ಇಲಾಖೆ ಮುಂದಾಗಲಿದೆ . ರಾಜ್ಯದಲ್ಲಿ 26 ಸಾವಿರ ಬಾಲ ಗರ್ಭಿಣಿಯರು ಇರುವ ಮಾಹಿತಿ ಇದೆ . 4 ತಿಂಗಳಲ್ಲಿ 900ಕ್ಕೂ ಹೆಚ್ಚು ಬಾಲಕಿಯರ ಮೇಲೆ ಅತ್ಯಾಚಾರವಾಗಿದೆ. ಆರೋಗ್ಯ, ಪೊಲೀಸ್, ಶಿಕ್ಷಣ, ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಸಮನ್ವಯತೆಯಿಂದ ಈ ಪಿಡುಗನ್ನು ನಿಯಂತ್ರಿಸಬೇಕಿದೆ. ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು .





