85 ಮೆಟ್ರೋ ಸ್ಟೇಷನ್​ಗಳಲ್ಲೂ ಅಪರ್ಣಾದ್ದೇ ಧ್ವನಿ! ಯೆಲ್ಲೋ ಲೈನ್ ಗೂ ಬಂತು ಖ್ಯಾತ ನಿರೂಪಕಿ ಕಂಠ..

ಅಪರ್ಣಾ, ಯಾರಿಗೆತಾನೇ ಗೊತ್ತಿಲ್ಲ ಹೇಳಿ , ನಟಿ ಹಾಗೂ ನಿರೂಪಕಿಯಾಗಿ ಜಯಪ್ರಿಯತೆ ಪಡೆದವರು , ಅವರ ಸುಮಧುರ ಧ್ವನಿಯು ಬೆಂಗಳೂರಿನ ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗಗಳಲ್ಲಿ ಜನಪ್ರಿಯವಾಗಿತ್ತು. ಇದೀಗ ಹೊಸದಾಗಿ ಉದ್ಘಾಟನೆಯಾದ ಹಳದಿ ಮೆಟ್ರೋ ಮಾರ್ಗದಲ್ಲಿ ಸಹ ಇವರ ಧ್ವನಿಯನ್ನು ಬಳಸಲಾಗಿದೆ. ಅಪರ್ಣಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ತಮ್ಮ ಕೊನೆಯ ದಿನಗಳಲ್ಲಿ ಯೆಲ್ಲೋ ಲೈನ್ ನ ಮೆಟ್ರೋ ಅನ್ನೊನ್ಸಮೆಂಟ್ ರೆಕಾರ್ಡಿಂಗ್‌ ಮಾಡಿದ್ದರು. 2024ರ ಏಪ್ರಿಲ್-ಮೇ ನಲ್ಲಿ ಮೆಟ್ರೋದ ತಾಂತ್ರಿಕ ತಂಡ ಅಪರ್ಣಾ ಬಳಿ ತೆರೆಳಿ ಅವರ ಧ್ವನಿಯನ್ನು ರೆಕಾರ್ಡಿಂಗ್ ಮಾಡಿಕೊಂಡಿತ್ತು.

ಕಳೆದ ವರ್ಷ ಜುಲೈನಲ್ಲಿ ನಿಧನ ಹೊಂದಿದ್ದ ನಿರೂಪಕಿ ಅಪರ್ಣಾ ಅನಾರೋಗ್ಯ ದಿಂದ ಬಳಲುತ್ತಿದ್ದರು . ಕ್ಯಾನ್ಸರ್ ಮಧ್ಯೆಯೂ ಅಪರ್ಣಾ ತಮ್ಮ ಧ್ವನಿ ನೀಡಿ ಕರ್ತವ್ಯ ಮೆರೆದಿದ್ದಾರೆ.

ಹಳದಿ ಬಣ್ಣದ ಮಾರ್ಗ ಭಾನುವಾರ (ಆಗಸ್ಟ್ 10) ಉದ್ಘಾಟನೆಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಲೋಕಾರ್ಪಣೆ ಮಾಡಿದರು. ಆರ್​ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಈ ರೈಲು ಸಂಪರ್ಕ ಕಲ್ಪಿಸುತ್ತದೆ. ಒಟ್ಟೂ 16 ನಿಲ್ದಾಣಗಳನ್ನು ಈ ಮೆಟ್ರೋ ರೈಲು ಹಾದು ಹೋಗುತ್ತದೆ. ಈ ಮಾರ್ಗದಲ್ಲಿ ಅಪರ್ಣಾ ಧ್ವನಿ ಪ್ರತಿಧ್ವನಿಸಲಿದೆ.

ಅಪರ್ಣಾ ಧ್ವನಿ ತುಂಬಾನೇ ಸುಮಧುರವಾಗಿತ್ತು. ಅವರು ಆ್ಯಂಕರಿಂಗ್​ಗೆ ನಿಂತರೆ ಬಾಯಿಯಿಂದ ಮುತ್ತುಗಳು ಉದುರುತ್ತಿವೆ ಎಂದನಿಸುತ್ತಿತ್ತು. ಹಸಿರು ಹಾಗೂ ಪರ್ಪಲ್ ಲೈನ್ ಮೆಟ್ರೋಗೆ ಅಪರ್ಣಾ ಅವರೇ ಧ್ವನಿ ನೀಡಿದ್ದರು. ಇದು ಮೆಟ್ರೋದ ಹೈಲೈಟ್ ಕೂಡ ಆಗಿತ್ತು. ಹಳದಿ ಬಣ್ಣದ ಮೆಟ್ರೋಗೂ ಅವರದ್ದೇ ಧ್ವನಿ ಇರಬೇಕು ಎಂಬುದು ಕನ್ನಡಿಗರ ಆಸೆ ಆಗಿತ್ತು. ‘ಹಳೆಯ ಮಾರ್ಗದಲ್ಲಿ ಅಪರ್ಣಾ ಧ್ವನಿ ಮುಂದುವರಿಸುತ್ತೇವೆ. ಹಳದಿ ಬಣ್ಣಕ್ಕೆ ಕಷ್ಟ’ ಎಂದು ಮೆಟ್ರೋ ಅಧಿಕಾರಿಗಳು ಈ ಮೊದಲು ಹೇಳಿದ್ದರು. ಆದರೆ , ಇದೀಗ ಹಳದಿ ಲೈನ್ ಮೆಟ್ರೋಗೂ ಅಪರ್ಣಾ ಅವರ ಧ್ವನಿ ಮುಂದುವರೆದಿರುವುದು ಕನ್ನಡಿಗರಲ್ಲಿ ಸಂತಸ ತಂದಿದೆ .

ಸದ್ಯ ಹಸಿರು ಬಣ್ಣದ ಲೈನ್​ ನಾಗಸಂದ್ರದಿಂದ ಸಿಲ್ಕ್ ಇನ್ಸ್​ಟಿಟ್ಯೂಟ್​ವರೆಗೆ ಕಾರ್ಯ ನಿರ್ವಹಿಸುತ್ತಿದ್ದು, 32 ಮೆಟ್ರೋ ಸ್ಟೇಷನ್​ಗಳು ಇವೆ. ಪರ್ಪಲ್ ಲೈನ್​ ವೈಟ್ ಫೀಲ್ಡ್​​ನಿಂದ ಚೆಲ್ಲಘಟ್ಟದವರೆಗೆ ಕಾರ್ಯ ನಿರ್ವಹಿಸುತ್ತಿದ್ದು 37 ಮೆಟ್ರೋ ಸ್ಟೇಷನ್​ಗಳು ಇವೆ. ಈಗ ಹಳದಿ ಮೆಟ್ರೋ ಸೇರಿದರೆ 85 ಸ್ಟೇಷನ್​ಗಳಿದ್ದು , ಎಲ್ಲಾ ಸ್ಟೇಷನ್ ಗಳಲ್ಲೂ ಅಪರ್ಣಾ ಅವರದ್ದೇ ಧ್ವನಿ ಇರಲಿದೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!