ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್ ನಿರ್ಲಕ್ಷ್ಯ! ಲಾರಿ ಮಾಲೀಕನಿಗೆ 27 ಲಕ್ಷ ರೂ. ನಷ್ಟ, ಪರಿಹಾರಕ್ಕೆ ಒತ್ತಾಯ!

ಮೈಸೂರು : ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್‌ನಲ್ಲಿ ಒಂದು ಸಣ್ಣ ರಿಪೇರಿಗೆ ನಿಲ್ಲಿಸಿದ್ದ ಲಾರಿಯನ್ನು 9 ತಿಂಗಳಾದರೂ ರಿಪೇರಿ ಮಾಡಿ ನೀಡದ ಕಾರಣ ಲಾರಿ ಮಾಲೀಕನಿಗೆ 27 ಲಕ್ಷ ರೂ. ನಷ್ಟ ಉಂಟಾಗಿರುವ ಘಟನೆ ನಡೆದಿದ್ದು, ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್‌ನವರು ಪರಿಹಾರ ನೀಡಬೇಕು ಎಂದು ಲಾರಿ ಮಾಲಿಕ ನಂದೀಶ್ ಒತ್ತಾಯಿಸಿದರು.

ನಗರದ ವಿದ್ಯಾರಣ್ಯಪುರಂನಲ್ಲಿರುವ ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದ್ದು, ಲಾರಿ ಮಾಲೀಕ ನಂದೀಶ್ ಅವರು ಕಳೆದ 9 ತಿಂಗಳ ಹಿಂದೆ ತಮ್ಮ 12ಚಕ್ರದ ಅಶೋಕ್ ಲೇಲ್ಯಾಂಡ್ ಟಿಪ್ಪರ್ ಲಾರಿಯನ್ನು ಸಣ್ಣ ರಿಪೇರಿಗಾಗಿ ಸರ್ವಿಸ್ ಸೆಂಟರ್‌ಗೆ ಬಿಟ್ಟಿದ್ದು, ಅಲ್ಲಿನ ಸರ್ವಿಸ್ ಸೆಂಟರ್‌ನವರು ವಿವಿಧ ಕಾರಣಗಳನ್ನು ನೀಡಿ ೯ ತಿಂಗಳಾದರೂ ತಮ್ಮ ಲಾರಿಯನ್ನು ರಿಪೇರಿ ಮಾಡಿ ಕೊಟ್ಟಿಲ್ಲ, ನಾನು ಹಲವು ಬಾರಿ ಸರ್ವಿಸ್ ಸೆಂಟರ್‌ಗೆ ಬಂದು ವಿಚಾರಣೆ ನಡೆಸಿ ಲಾರಿಯನ್ನು ಕೊಡುವಂತೆ ಕೇಳಿದರೂ ವಿವಿಧ ಸಬೂಬುಗಳನ್ನು ಕೊಟ್ಟು ಇವತ್ತು, ನಾಳೆ ಎಂದು ನನಗೆ ಸಾಗ ಹಾಕಿದರು.

ಇತ್ತೀಚೆಗೆ ನಿಮ್ಮ ಲಾರಿ ರಿಪೇರಿ ಆಗಿದೆ 34 ಸಾವಿರ ಬಿಲ್ ಕಟ್ಟಿ ಲಾರಿಯನ್ನು ತೆಗೆದುಕೊಂಡು ಹೋಗಿ ಎಂದು ಬಿಲ್ ಕಳಿಸಿದ್ದಾರೆ. ಆದರೇ ನಾನು ಇದೇ ಅಶೋಕ್ ಲೇಲ್ಯಾಂಡ್ ಶೋರೂಂನಿಂದ ಲಾರಿಯನ್ನು ಸಾಲ ಮಾಡಿ ತೆಗೆದುಕೊಂಡಿದ್ದೇನೆ. ತಿಂಗಳಿಗೆ 1.10 ಲಕ್ಷ ರೂ EMI ಕಟ್ಟುತ್ತಿದ್ದೇನೆ. 9 ತಿಂಗಳ ಕಂತು ಪಾವತಿಸಿದೆ. ಲಾರಿಯ ಇನ್ಸುರೆನ್ಸ್, ಟ್ಯಾಕ್ಸ್ ಮುಂತಾದವೂ ಸಹ ಕಟ್ಟಿದ್ದೇನೆ. ನನ್ನ ಲಾರಿಯಿಂದ ದಿನಕ್ಕೆ ಕನಿಷ್ಠ 10 ಸಾವಿರ ರೂ. ಆದಾಯ ಲೆಕ್ಕ ಹಾಕಿದರೂ ನನಗೆ 9 ತಿಂಗಳು, 5 ದಿನಕ್ಕೆ ಬರೋಬ್ಬರಿ 27 ಲಕ್ಷ ರೂ. ಹಣ ಸಂಪಾದನೆ ಆಗುತ್ತಿತ್ತು, ಒಂದು ಸಣ್ಣ ರಿಪೇರಿಗಾಗಿ ನಾನು ಅಶೋಕ್ ಲೇಲ್ಯಾಂಡ್ ಸರ್ವಿಸ್ ಸೆಂಟರ್‌ಗೆ ಲಾರಿ ಬಿಟ್ಟರೆ, 9 ತಿಂಗಳಾದರೂ ನನಗೆ ನನ್ನ ಲಾರಿ ರಿಪೇರಿ ಮಾಡಿ ಕೊಡದ ಕಾರಣ ನನಗಾಗಿರುವ ನಷ್ಟಕ್ಕೆ ಅಶೋಕ್ ಲೇಲ್ಯಾಂಡ್ ಸರ್ವಿಸ್ ಸೆಂಟರ್ ಅವರೇ ಜವಾಬ್ದಾರರು, ಈ ಬಗ್ಗೆ ನಾನು ಪೊಲೀಸರಿಗೂ ಮತ್ತು ಗ್ರಾಹಕರ ನ್ಯಾಯಾಲಯಕ್ಕೂ ದೂರು ನೀಡುತ್ತಿದ್ದೇನೆ. ನನಗೆ ಪರಿಹಾರ ಕೊಡುವ ತನಕ ನನ್ನ ಲಾರಿಯನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ನಂದೀಶ್ ದೂರಿದರು.

ಸರ್ವಿಸ್ ಸೆಂಟರ್ ಎದುರು ಪ್ರತಿಭಟನೆ ಎಚ್ಚರಿಕೆ!


ಲಾರಿ ಮತ್ತು ಟಿಪ್ಪರ್ ಮಾಲೀಕರ ಕಷ್ಟ ಹೇಳತೀರದು, ಚಕ್ರ ಉರುಳಿದರೆ ಮಾತ್ರ ನಮಗೆ ಬದುಕು, ಇಲ್ಲವಾದರೆ ಇಲ್ಲ, ನಂದೀಶ್ ಅವರು ಸಾಲ ಮಾಡಿ ಟಿಪ್ಪರ್ ಖರೀದಿ ಮಾಡಿದ್ದಾರೆ. ಇದು ಶೋಂರೂಂ ವಾಹನ, ಗ್ಯಾರಂಟಿ ಇದೆ, ಅಂತಹದರಲ್ಲಿ ಇಂತಹ ಪ್ರತಿಷ್ಠಿತ ಅಶೋಕ್ ಲೇಲ್ಯಾಂಡ್ ಸರ್ವಿಸ್ ಸೆಂಟರ್‌ನವರೇ ಒಂದು ಸಣ್ಣ ರಿಪೇರಿಗೆ ೯ ತಿಂಗಳು ಮಾಡಿದರೆ ಹೇಗೆ, ಅವರು ಲಾರಿಯ ಸಂಪೂರ್ಣ ನಷ್ಟವನ್ನು ಭರಿಸಬೇಕು. ಇಲ್ಲವಾದಲ್ಲಿ ಸರ್ವಿಸ್ ಸೆಂಟರ್ ಎದುರು ಲಾರಿ ಮಾಲೀಕರ ಸಂಘದವತಿಯಿಂದ ಪ್ರತಿಭಟನೆ ನಡೆಸುತ್ತೇವೆ.

Related Posts

ಅ*ತ್ಯಾಚಾ*ರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ರೇಖಾ ಶ್ರೀನಿವಾಸ್

ಮೈಸೂರು: ಅ*ತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್. ಪಶ್ಚಿಮ ಬಂಗಾಳದ ಬಾರುಪುರ್ ಮತ್ತುರಾಜಸ್ಥಾನದ ಶ್ರೀ ಗಂಗಾ ನಗರದಲ್ಲಿ ಅ*ಪ್ರಾಪ್ತ ಮೇಲೆ ನಡೆದ ಅ*ತ್ಯಾಚಾ*ರ ಘಟನೆಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ. ಪ್ರಪಂಚವನ್ನೇ ಅರಿಯದ…

ದೇಶದ 400ಕ್ಕೂ ಹೆಚ್ಚು ಶಾಲೆಗಳಲ್ಲಿ ‘ರಾಮಾಯಣ’ ಸಿನಿಮಾದ ಭರ್ಜರಿ ಪ್ರಚಾರ

ಒಟ್ಟು ಎರಡು ಭಾಗಗಳಲ್ಲಿ ‘ರಾಮಾಯಣ’ ಸಿನಿಮಾ ಮೂಡಿಬರುತ್ತಿದೆ. ಈ ವರ್ಷದ ದೀಪಾವಳಿಗೆ ಮೊದಲ ಪಾರ್ಟ್ ಬಿಡುಗಡೆ ಆಗಲಿದೆ. ರಿಲೀಸ್​ಗೂ ಮುನ್ನ ದೇಶಾದ್ಯಂತ ವಿವಿಧ ರೀತಿಯ ಪ್ರಚಾರಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಗಳಲ್ಲಿ ಕೂಡ ‘ರಾಮಾಯಣ’ ಚಿತ್ರವನ್ನು ಪ್ರಚಾರ ಮಾಡಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿಭಾರತೀಯ…

You Missed

ಅ*ತ್ಯಾಚಾ*ರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ರೇಖಾ ಶ್ರೀನಿವಾಸ್

ಅ*ತ್ಯಾಚಾ*ರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ರೇಖಾ ಶ್ರೀನಿವಾಸ್

ಚಿತ್ರರಂಗಕ್ಕೆ ಕಾಲಿಟ್ಟ ಲಂಕೇಶ್ ಮೊಮ್ಮಗಳು ಇಶಾ ಲಂಕೇಶ್

ಚಿತ್ರರಂಗಕ್ಕೆ ಕಾಲಿಟ್ಟ ಲಂಕೇಶ್ ಮೊಮ್ಮಗಳು ಇಶಾ ಲಂಕೇಶ್

ದೇಶದ 400ಕ್ಕೂ ಹೆಚ್ಚು ಶಾಲೆಗಳಲ್ಲಿ ‘ರಾಮಾಯಣ’ ಸಿನಿಮಾದ ಭರ್ಜರಿ ಪ್ರಚಾರ

ದೇಶದ 400ಕ್ಕೂ ಹೆಚ್ಚು ಶಾಲೆಗಳಲ್ಲಿ ‘ರಾಮಾಯಣ’ ಸಿನಿಮಾದ ಭರ್ಜರಿ ಪ್ರಚಾರ

ಮೈಸೂರು ಮಹಾನಗರ ಪಾಲಿಕೆಗೆ ಹೊಸ ಆಯುಕ್ತರ ನೇಮಕ

ಮೈಸೂರು ಮಹಾನಗರ ಪಾಲಿಕೆಗೆ ಹೊಸ ಆಯುಕ್ತರ ನೇಮಕ

ಡೀಲ್​ ಕೊಟ್ಟವರಿಗಾಗಿ ಪೊಲೀಸರ ಹುಡುಕಾಟ

ಡೀಲ್​ ಕೊಟ್ಟವರಿಗಾಗಿ ಪೊಲೀಸರ ಹುಡುಕಾಟ

ಸಖತ್ ಬೋಲ್ಡ್ ಅವತಾರದಲ್ಲಿ ಯಶ್​-ಕಿಯಾರಾ ‘ತಬಾಹಿ’

ಸಖತ್ ಬೋಲ್ಡ್ ಅವತಾರದಲ್ಲಿ ಯಶ್​-ಕಿಯಾರಾ ‘ತಬಾಹಿ’