ದೇಶದ 400ಕ್ಕೂ ಹೆಚ್ಚು ಶಾಲೆಗಳಲ್ಲಿ ‘ರಾಮಾಯಣ’ ಸಿನಿಮಾದ ಭರ್ಜರಿ ಪ್ರಚಾರ

ಒಟ್ಟು ಎರಡು ಭಾಗಗಳಲ್ಲಿ ‘ರಾಮಾಯಣ’ ಸಿನಿಮಾ ಮೂಡಿಬರುತ್ತಿದೆ. ಈ ವರ್ಷದ ದೀಪಾವಳಿಗೆ ಮೊದಲ ಪಾರ್ಟ್ ಬಿಡುಗಡೆ ಆಗಲಿದೆ. ರಿಲೀಸ್​ಗೂ ಮುನ್ನ ದೇಶಾದ್ಯಂತ ವಿವಿಧ ರೀತಿಯ ಪ್ರಚಾರಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಗಳಲ್ಲಿ ಕೂಡ ‘ರಾಮಾಯಣ’ ಚಿತ್ರವನ್ನು ಪ್ರಚಾರ ಮಾಡಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಹಾಗೂ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ ‘ರಾಮಾಯಣ’ ಬಿಡುಗಡೆಗೆ ಸಿದ್ಥತೆ ನಡೆಯುತ್ತಿದೆ. ಇದೀಗ ಪ್ರೇಕ್ಷಕರನ್ನು ತಲುಪಲು ಚಿತ್ರತಂಡ ಅದ್ದೂರಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ದೇಶಾದ್ಯಂತ ಬೃಹತ್ ಶಾಲಾ ಅಭಿಯಾನವನ್ನು ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಜುಲೈ 9ರಿಂದಲೇ ಈ ಮಹತ್ವದ ಶಾಲಾ ಅಭಿಯಾನ ಆರಂಭವಾಗಿದೆ. ದೇಶದ 18 ಪ್ರಮುಖ ನಗರಗಳ 400ಕ್ಕೂ ಹೆಚ್ಚು ಶಾಲೆಗಳನ್ನು ತಲುಪುವ ಗುರಿ ಹೊಂದಲಾಗಿದೆ.

ಈ ಕಾರ್ಯಕ್ರಮದ ಮೂಲಕ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳಿಗೆ ರಾಮಾಯಣದ ಕಥೆ ಹಾಗೂ ಅದರಲ್ಲಿರುವ ಉದಾತ್ತ ಮೌಲ್ಯಗಳನ್ನು ಅತ್ಯಂತ ಆಕರ್ಷಕವಾಗಿ ಪರಿಚಯಿಸಲಾಗುತ್ತದೆ. ಈ ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.ಚಿತ್ರತಂಡವು ಕೇವಲ ಸಾಂಪ್ರದಾಯಿಕ ಪ್ರಚಾರಕ್ಕೆ ಸೀಮಿತವಾಗದೆ, ಮಕ್ಕಳಲ್ಲಿ ರಾಮಾಯಣದ ನೈಜ ಸಾರವನ್ನು ಮೂಡಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ ಶಾಲೆಗಳಲ್ಲಿ ರೇಖಾಚಿತ್ರ ಸ್ಪರ್ಧೆಗಳು, ರಸಪ್ರಶ್ನೆಗಳು ಹಾಗೂ ಸಂವಾದದ ರೀತಿಯ ವಿವಿಧ ಸೃಜನಶೀಲ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದು ಮಕ್ಕಳ ಜೊತೆಗೆ ಅವರ ಕುಟುಂಬದಲ್ಲೂ ರಾಮಾಯಣದ ಸಾಂಸ್ಕೃತಿಕ ಮಹತ್ವದ ಬಗ್ಗೆ ಚರ್ಚೆಗಳು ನಡೆಯಲು ಪ್ರೇರೇಪಿಸಲಿದೆ.

‘ನಮ್ಮ ಸತ್ಯ. ನಮ್ಮ ಇತಿಹಾಸ’ ಎಂಬ ಶೀರ್ಷಿಕೆಯಡಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಯುವ ಪೀಳಿಗೆಯು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಚಿತ್ರತಂಡ ಹೇಳಿದೆ. ಚಿತ್ರದ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯ ಇದೆ. ಆದರೆ ಮುಂಚಿತವಾಗಿಯೇ ಇಂಥ ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.‘ರಾಮಾಯಣವು ತಲೆಮಾರುಗಳಿಂದ ಕಥೆಗಳು ಹಾಗೂ ನೈತಿಕ ಮೌಲ್ಯಗಳ ಮೂಲಕ ಜೀವಂತವಾಗಿದೆ. ಈ ಶಾಲಾ ಪ್ರಚಾರದ ಅಭಿಯಾನದಲ್ಲಿ ಮೂಲಕ ಆ ಭವ್ಯ ಪರಂಪರೆಯನ್ನು ಇಂದಿನ ಯುವ ಮನಸ್ಸುಗಳಿಗೆ ಅರ್ಥಪೂರ್ಣವಾಗಿ ತಲುಪಿಸುವುದು ನಮ್ಮ ಪ್ರಯತ್ನ. ಕೇವಲ ಪುರಾಣದ ಕಥೆಯಾಗಿ ಮಾತ್ರವಲ್ಲದೆ ಧೈರ್ಯ, ಕರ್ತವ್ಯ, ಪ್ರೀತಿ ಮತ್ತು ಧರ್ಮದ ಸಂದೇಶವಾಗಿ ಮಕ್ಕಳು ಇದನ್ನು ಗ್ರಹಿಸಬೇಕು’ ಎಂದು ಚಿತ್ರತಂಡ ಹೇಳಿದೆ

‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ಅವರು ‘ರಾಮಾಯಣ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’, ‘DNEG’ ಮತ್ತು ಯಶ್ ಅವರ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ಈ ಸಿನಿಮಾವನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಿಸುತ್ತಿವೆ.

Related Posts

ನೈಸ್ ಯೋಜನೆಯ ವಿರುದ್ಧ ಜೆಡಿಎಸ್ ಸಮರ: ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆಗಳು

ವಿಧಾನಮಂಡಲ ಅಧಿವೇಶನದಲ್ಲಿ ನೈಸ್ (NICE) ಯೋಜನೆಯ ಅಕ್ರಮಗಳ ಕುರಿತು ಚರ್ಚಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಜೆಡಿಎಸ್ ಮುಖಂಡರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರ ನೇತೃತ್ವದ ನಿಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ…

ಸನಾತನ ಧರ್ಮದ ಶ್ರೇಷ್ಠತೆ ಮತ್ತು ಪಾರದರ್ಶಕತೆಗೆ ಮಂತ್ರಾಲಯ ಶ್ರೀಗಳ ಕರೆ

ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಮಠ-ಮಾನ್ಯಗಳು ಮತ್ತು ಸಂಸ್ಥೆಗಳ ಆಡಳಿತದಲ್ಲಿ ಆರ್ಥಿಕ ಪಾರದರ್ಶಕತೆ ಅತ್ಯಗತ್ಯವೆಂದು ಪ್ರತಿಪಾದಿಸಿದ್ದಾರೆ. ಆಯೋಧ್ಯೆಯ ರಾಮಮಂದಿರದ ಹುಂಡಿ ಕಳ್ಳತನದ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ಈ ಪ್ರಕರಣದ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಹಾಗೂ ನ್ಯಾಯಾಲಯದಲ್ಲಿ ತನಿಖೆ…

You Missed

ನೈಸ್ ಯೋಜನೆಯ ವಿರುದ್ಧ ಜೆಡಿಎಸ್ ಸಮರ: ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆಗಳು

ನೈಸ್ ಯೋಜನೆಯ ವಿರುದ್ಧ ಜೆಡಿಎಸ್ ಸಮರ: ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆಗಳು

ಸನಾತನ ಧರ್ಮದ ಶ್ರೇಷ್ಠತೆ ಮತ್ತು ಪಾರದರ್ಶಕತೆಗೆ ಮಂತ್ರಾಲಯ ಶ್ರೀಗಳ ಕರೆ

ಸನಾತನ ಧರ್ಮದ ಶ್ರೇಷ್ಠತೆ ಮತ್ತು ಪಾರದರ್ಶಕತೆಗೆ ಮಂತ್ರಾಲಯ ಶ್ರೀಗಳ ಕರೆ

ಬಿಸಿಸಿಐಗೆ ಸ್ಪಾನ್ಸರ್ ಶಿಪ್ ಬಿಸಿ: ದುಬಾರಿ ಬೆಲೆಯಿಂದ ಹಿಂದೆ ಸರಿದ ಕಂಪನಿಗಳು!

ಬಿಸಿಸಿಐಗೆ ಸ್ಪಾನ್ಸರ್ ಶಿಪ್ ಬಿಸಿ: ದುಬಾರಿ ಬೆಲೆಯಿಂದ ಹಿಂದೆ ಸರಿದ ಕಂಪನಿಗಳು!

ಕರ್ನಾಟಕದಲ್ಲಿ ನಕಲಿ ‘ಪನೀರ್’ ಮಾರಾಟಕ್ಕೆ ಒಂದು ವರ್ಷ ಬ್ರೇಕ್: ಸರ್ಕಾರದ ದಿಟ್ಟ ಕ್ರಮ

ಕರ್ನಾಟಕದಲ್ಲಿ ನಕಲಿ ‘ಪನೀರ್’ ಮಾರಾಟಕ್ಕೆ ಒಂದು ವರ್ಷ ಬ್ರೇಕ್: ಸರ್ಕಾರದ ದಿಟ್ಟ ಕ್ರಮ

ಚಾಮರಾಜನಗರ ಎನ್‌*ಕೌಂಟರ್ ಪ್ರಕರಣ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ .

ಚಾಮರಾಜನಗರ ಎನ್‌*ಕೌಂಟರ್ ಪ್ರಕರಣ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ .

ವಾಹನ ಸವಾರರಿಗೆ ಬಿತ್ತು ಬೆಲೆ ಏರಿಕೆ ಬಿಸಿ: ಕರ್ನಾಟಕದಲ್ಲಿ PUC ಮಾಲಿನ್ಯ ತಪಾಸಣೆ ದರ ಹೆಚ್ಚಳ!

ವಾಹನ ಸವಾರರಿಗೆ ಬಿತ್ತು ಬೆಲೆ ಏರಿಕೆ ಬಿಸಿ: ಕರ್ನಾಟಕದಲ್ಲಿ PUC ಮಾಲಿನ್ಯ ತಪಾಸಣೆ ದರ ಹೆಚ್ಚಳ!