ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಇಲ್ಲ ಎಂದ ಬಿಗ್ ಬಾಸ್ ಅತಿಥಿಗಳು

ಬಿಗ್ ಬಾಸ್ ಮನೆಗೆ ಆಗಮಿಸಿದ ಅತಿಥಿಗಳು ಗಿಲ್ಲಿಯ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹನುಮಂತನ ಶಾಂತ ಸ್ವಭಾವಕ್ಕೆ ಗಿಲ್ಲಿಯನ್ನು ಹೋಲಿಸಿದ ಅತಿಥಿಗಳು, ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಕೂಡ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ಗಿಲ್ಲಿ ಅತಿಥಿಗಳೊಂದಿಗೆ ಹಾಸ್ಯ ಮಾಡಿದರು, ಆದರೆ ಅತಿಥಿಗಳು ಅದನ್ನು ಗಂಭೀರವಾಗಿ ತೆಗೆದುಕೊಂಡರು.

 

ಕಳೆದ ಸೀಸನ್​ನಲ್ಲಿ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಇಡೀ ಶೋ ದಿಕ್ಕನ್ನು ಬದಲಿಸಿದ್ದರು. ಹಲವು ತಿಂಗಳ ಕಾಲ ಅವರು ಭರ್ಜರಿ ಮನರಂಜನೆ ನೀಡಿದ್ದರು. ಯಾರೇ ನಾಮಿನೇಷನ್ ಮಾಡಿದರೂ ಅವರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆ ಬಳಿಕ ಕೋಟಿ ಮತಗಳ ಅಂತರದಲ್ಲಿ ಅವರು ಗೆಲುವು ಕಂಡರು. ಈ ಸೀಸನ್​ ಅಲ್ಲಿ ಗಿಲ್ಲಿ ಕೂಡ ರೇಸ್​ನಲ್ಲಿ ಮುಂದಿದ್ದಾರೆ. ಆದರೆ, ಹನುಮಂತನ 10 ಪರ್ಸೆಂಟ್ ಕೂಡ ಗಿಲ್ಲಿ ಇಲ್ಲ ಎಂದು ಬಿಗ್ ಬಾಸ್ (Bigg Boss)​ ಮನೆಗೆ ಬಂದ ಅತಿಥಿಗಳು ಹೇಳಿಕೆ ನೀಡಿದ್ದಾರೆ. ಬಿಗ್ ಬಾಸ್​ ಈಗ ಬಿಬಿ ಪ್ಯಾಲೇಸ್ ಆಗಿ ಬದಲಾಗಿದೆ. ಉಗ್ರಂ ಮಂಜು ಅವರು ಬ್ಯಾಚುಲರ್ ಪಾರ್ಟಿ ಮಾಡೋದಕ್ಕೆ ಆಗಮಿಸಿದ್ದಾರೆ. ಅವರ ಜೊತೆ ಮೋಕ್ಷಿತಾ ಪೈ, ರಜತ್, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಕೂಡ ಜೊತೆಗಿದ್ದಾರೆ. ಅವರು ಸಖತ್ ಮನರಂಜನೆ ನೀಡುತ್ತಿದ್ದಾರೆ. ಈ ವೇಳೆ ಗಿಲ್ಲಿಯನ್ನು ಅವರು ಹನುಮಂತನ ಜೊತೆ ಹೋಲಿಕೆ ಮಾಡಿ ನೋಡಿದ್ದಾರೆ.

ಅತಿಥಿಗಳ ಆತಿಥ್ಯವನ್ನು ಒಳ್ಳೆಯ ರೀತಿಯಲ್ಲಿ ಮಾಡಬೇಕು ಎಂಬುದು ಬಿಗ್ ಬಾಸ್ ಆದೇಶ ಆಗಿತ್ತು. ಆದರೆ, ಇದನ್ನು ಗಿಲ್ಲಿ ಅವರು ಗಂಭೀರವಾಗಿ ಸ್ವೀಕರಿಸಿಲ್ಲ. ಅತಿಥಿಗಳ ಕಾಲೆಳೆಯುವ ಪ್ರಯತ್ನವನ್ನು ಗಿಲ್ಲಿ ಮಾಡಿದ್ದಾರೆ. ಇದು ಅತಿಥಿಗಳ ಕೋಪಕ್ಕೆ ಕಾರಣ ಆಗಿದೆ. ರಜತ್ ಹಾಗೂ ಮಂಜು ಕರೆದು ಅನೇಕ ಬಾರಿ ವಾರ್ನ್ ಮಾಡಿದ್ದಾರೆ. ಆದರೆ, ಈ ವಾರ್ನಿಂಗ್​​ಗೆ ಎಲ್ಲ ಗಿಲ್ಲಿ ಜಗ್ಗುವವರೇ ಅಲ್ಲ. ಅವರು ತಮ್ಮ ಕೀಟಲೆ ಮುಂದುವರಿಸಿದ್ದಾರೆ. ಎಲ್ಲ ಸಂದರ್ಭದಲ್ಲೂ ಹಾಸ್ಯ ಮನಸ್ಥಿತಿಯಲ್ಲೇ ನಡೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ರಜತ್, ತ್ರಿವಿಕ್ರಂ ಮಂಜು ಮೊದಲಾದವರು ಚರ್ಚೆ ಮಾಡಿದ್ದಾರೆ. ‘ಇವನು ನಮ್ಮವನ (ಹನುಮಂತ) ರೀತಿಯೇ. ನಮ್ಮವನು ಶಾಂತವಾಗಿ ಇರ್ತಿದ್ದ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತ್ರ ಮಾತನಾಡುತ್ತಿದ್ದ. ಇವನು ಬಾಯಿಗೆ ಬಂದಂತೆಲ್ಲ ಮಾತನಾಡುತ್ತಿದ್ದಾನೆ’ ಎಂದು ರಜತ್ ಹೇಳಿದರು. ‘ಅವನ 10 ಪರ್ಸೆಂಟ್ ಕೂಡ ಇವನಿಲ್ಲ ಬಿಡಿ’ ಎಂದು ತ್ರಿವಿಕ್ರಂ ಅವರು ಹೇಳಿದರು.

Related Posts

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಉಡುಗೊರೆ ಕೊಟ್ಟಿದ್ದಾರೆ ಅಂತ ನೋಡೋದಾದ್ರೆ, ರಾಜ್ಯದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ 7 ಸಾವಿರ ಕೋಟಿ ಸರ್ಕಾರದ ಅನುದಾನವನ್ನು ಜಿಬಿಎ ಮೂಲಕ ಹಂಚಿಕೆ ಮಾಡಲು ಸೂಚನೆ, ಒಟ್ಟು 8 ಸಾವಿರ ಕೋಟಿ ಆಯವ್ಯಯಕ್ಕೆ ಜಿಬಿಎ ಅನುಮೋದನೆ…

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

ಖ್ಯಾತ ದಳಪತಿ ವಿಜಯ್ ಮುಚ್ಚುಮರೆ ಇಲ್ಲದೇ ನಟಿ ತ್ರಿಷಾ ಕೃಷ್ಣನ್ ಜೊತೆ ತಿರುಗಾಡುತ್ತಿದ್ದಾರೆ. ಅವರ ಈ ವರ್ತನೆಯಿಂದ ಅಭಿಮಾನಿಗಳಿಗೆ ಮುಜುಗರ ಆಗಿದೆ. ಆದರೆ ಕೆಲವು ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ವಿಜಯ್ ಅವರ ರಾಜಕೀಯ ಭವಿಷ್ಯಕ್ಕೆ ತ್ರಿಷಾ ಜೊತೆಗಿನ ಒಟನಾಟದಿಂದ ತೊಂದರೆ ಆಗುವ…

You Missed

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

2026 ರ ಬಜೆಟ್​​ನಲ್ಲಿ ರಾಜ್ಯದ ಜನರಿಗೆ ಏನೆಲ್ಲಾ ಸಿಕ್ತು?

ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್!

ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್!

ಯುವಹೃದಯಕ್ಕೆ ಎದುರಾಗಿದೆ ಕುತ್ತು: 40ರ ಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಭೀತಿ!

ಯುವಹೃದಯಕ್ಕೆ ಎದುರಾಗಿದೆ ಕುತ್ತು: 40ರ ಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಭೀತಿ!