ಸ್ಮೃತಿ ಮಂದಾನಗೆ ಮೋಸ ಮಾಡಿಬಿಟ್ರಾ ಪಾಲಶ್ ಮುಚ್ಚಲ್ ? ಮದುವೆ ನಿಂತ ಹಿಂದಿನ ಅಸಲಿ ರಹಸ್ಯ ಏನು ..!

ಟೀಂ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂದಾನರ ಮದುವೆ ತಾತ್ಕಾಲಿಕವಾಗಿ ಮುಂದೂಡಿಕೆ ಆಗಿದೆ. ಸ್ಮೃತಿ ತಂದೆ ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದೇ ಮದುವೆ ಮುಂದೂಡಿಕೆಗೆ ಕಾರಣ ಎನ್ನಲಾಗ್ತಿತ್ತು. ಆದ್ರೀಗ ಇದರ ಹಿಂದೆ ಬೇರೆಯದ್ದೇ ಕಾರಣ ಇದೆ ಅನ್ನೋ ಚರ್ಚೆ ಶುರುವಾಗಿದೆ.

ಸ್ಮೃತಿ ಮಂದಾನ.. ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್​​ ಬ್ಯಾಟರ್​​.. ಬ್ಯೂಟಿ ಕ್ವೀನ್​​.. ಅಷ್ಟೇ ಅಲ್ಲ ಲಾಯಲ್​​ ಆರ್​​ಸಿಬಿ ವುಮೆನ್ಸ್​​ ತಂಡದ ಕ್ಯಾಪ್ಟನ್​​.. ಎಲ್ಲವೂ ಸರಿಯಾಗಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಸ್ಮೃತಿ ಮಂದಾನ.. ತಮ್ಮ ಬಹುವರ್ಷಗಳ ಪ್ರಿಯಕರನ ಕೈ ಹಿಡಿದು.. ಜೀವನದ ಹೊಸ ಇನ್ನಿಂಗ್ಸ್​​ ಅನ್ನು ಆರಂಭಿಸಬೇಕಿತ್ತು.. ಆದ್ರೆ ಹಸೆಮಣೆ ಏರಬೇಕಿದ್ದ ದಿನ ಸ್ಮೃತಿ ತಂದೆ ಹೃದಾಯಾಘಾತದಿಂದ ಆಸ್ಪತ್ರೆ ಸೇರಿದ ಕಾರಣ, ಮದುವೆ ಮುಂದೂಡಿಕೆ ಆಗಿತ್ತು.. ಆದ್ರೆ ಮದುವೆ ಏಕಾಏಕಿ ಮುಂದೂಡಿಕೆ ಆಗಿದ್ದಕ್ಕೆ ಬೇರೆಯದ್ದೇ ಕಾರಣ ಹರಿದಾಡತೊಡಗಿದೆ.

ಸ್ಮೃತಿ ಮಂದಾನ ಹಳದಿ ಶಾಸ್ತ್ರ.. ಸಂಗೀತ ಕಾರ್ಯಕ್ರಮದಲ್ಲಿ ಭಾವಿ ಪತಿ ಮುಚ್ಚಲ್​​ ಜೊತೆ ಬಿಂದಾಸ್​ ಆಗಿ ಪೋಸ್​​ ಕೊಟ್ಟಿದ್ರು. ನಾಚಿಕೆ ಸ್ವಭಾವದ ಸ್ಮೃತಿ.. ಸಂಗೀತಾ ಕಾರ್ಯಕ್ರಮದಲ್ಲಂತೂ.. ಸಂಕೋಚ ಎಲ್ಲವನ್ನು ಬದಿಗಿಟ್ಟು, ವೇದಿಕೆ ಮೇಲೆ ಮುಚ್ಚಿಲ್​​ ಜೊತೆ ಕುಣಿದು ಕುಪ್ಪಳಿಸಿದ್ರು. ನವೆಂಬರ್​ 23 ಭಾನುವಾರಂದು ಹಸೆಮಣೆ ಏರಲು ಸಜ್ಜಾಗಿದ್ದ ಸ್ಮೃತಿಗೆ ಶಾಕ್​ ಆಗಿತ್ತು. ಮದುವೆ ದಿನವೇ ಸ್ಮೃತಿ ಮಂದಾನ ತಂದೆಗೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ ಕಾರಣ, ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಕುಟುಂಬಗಳು ಹೇಳಿಕೊಂಡಿದ್ವು.

ಆದ್ರೆ ಮಂಗಳವಾರ ಸ್ಮೃತಿ ಮಂದಾನ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಮುಚ್ಚಲ್​ ಜೊತೆಗಿನ ಎಂಗೇಜ್​​​ಮೆಂಟ್​ ಸೇರಿದಂತೆ ಮದುವೆ ಶಾಸ್ತ್ರದ ವಿಡಿಯೋ ಫೋಟೋಗಳನ್ನು ಡಿಲೀಟ್​ ಮಾಡಿದ್ದು. ಸಮ್​ಥಿಂಗ್​​ ಫಿಶಿಂಗ್​​ ಅನ್ಸಿತ್ತು. ಆದ್ರೀಗ ಸ್ಮೃತಿ ಮಂದಾನರ ಭಾವಿ ಪತಿಯ ಅಕ್ರಮ ಸಂಬಂಧವೇ ಮದುವೆ ಪೋಸ್ಟ್​ಪೋನ್​​ಗೆ ಕಾರಣ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಪಲಾಶ್‌ಗೆ ಬೇರೆ ಸಂಬಂಧವಿದೆ ಎಂದು ಹೇಳಲಾಗುವ ಯುವತಿಯೊಂದಿಗಿನ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಭಾರೀ ಸದ್ದು ಮಾಡ್ತಿದೆ. ಇದರಲ್ಲಿ ಯುವತಿಯನ್ನು ಮ್ಯಾರಿಯಟ್ ಹೋಟೆಲ್‌ನ ಪೂಲ್‌ನಲ್ಲಿ ಒಟ್ಟಿಗೆ ಈಜಲು ಆಹ್ವಾನಿಸುವುದು. ಸ್ಮೃತಿ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆಗಳು ಮತ್ತು ಪಲಾಶ್ ಅವರ ಉತ್ತರಗಳು ವಾಟ್ಸಾಪ್ ಚಾಟ್‌ನಲ್ಲಿವೆ. ಆದರೆ, ಇದು ನಿಜವಾಗಿಯೂ ಪಲಾಶ್ ಜೊತೆಗಿನ ಸಂಭಾಷಣೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಎರಡೂ ಕುಟುಂಬಗಳು ಯಾವುದೇ ಸ್ಪಷ್ಟನೆ ನೀಡಿಲಿಲ್ಲ.

ಶೀಘ್ರವೇ ಮದುವೆ ನಡೆಯಲಿದೆ ಎಂದ ಮುಚ್ಚಲ್​ ತಾಯಿ
ಸ್ಮೃತಿ ಮತ್ತು ಮುಚ್ಚಲ್​ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇದೀಗ ಮುಂದೂಡಲ್ಪಟ್ಟ ಮದುವೆ ಯಾವಾಗ ನಡೆಯಲಿದೆ ಎಂಬುದರ ಕುರಿತು ಪಲಾಶ್ ಮುಚ್ಚಲ್ ಅವರ ತಾಯಿ ಅಮಿತಾ ಬಹುದೊಡ್ಡ ಅಪ್ಡೇಟ್ ನೀಡಿದ್ದಾರೆ. ಜೊತೆಗೆ ಮುಚ್ಚಲ್​ನನ್ನು ಆಸ್ಪತ್ರೆಗೆ ದಾಖಲಿಸಿದ ಕಾರಣವನ್ನು ಬಹಿರಂಗಪಡಿಸಿದ್ದಾರೆ.

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!