
ಆರೋಗ್ಯ ಹಾಗೂ ಆಹಾರ ಪದ್ಧತಿಗೆ ಅನುಗುಣವಾಗಿ ಈ ಬಣ್ಣದ ಚಿಹ್ನೆಗಳು ಸಲಹೆ, ಸೂಚನೆಗಳನ್ನು ನೀಡುತ್ತವೆ. ಅಂದರೆ ಆರೋಗ್ಯದ ಸಮಸ್ಯೆ ಇರುವವರು ಇದನ್ನು ತಿನ್ನಬಾರದು ಎಂದು. ಇದರಿಂದ ನೀವು ಸರಿಯಾದ ಆಹಾರ ತಿನಿಸನ್ನು ಆಯ್ಕೆ ಮಾಡಲು ಅನುಕೂಲವಾಗುತ್ತದೆ. ಅಲ್ಲದೇ ಸಸ್ಯಾಹಾರಿ ಹಾಗೂ ಮಾಂಸಹಾರಿ ಸೇವಿಸುವವರು ಇದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಂಪು, ಹಸಿರು ಡಾಟ್ಸ್ ಸೂಚಿಸುತ್ತವೆ. ಉಳಿದ ಡಾಟ್ಸ್ ಅಥವಾ ಚಿಹ್ನೆಗಳು ಏನೇನು ಸೂಚಿಸುತ್ತವೆ?.
ಕೆಂಪು ಡಾಟ್: ತಿನಿಸಿನ ಪ್ಯಾಕೆಟ್ ಮೇಲೆ ಕೆಂಪು ಬಣ್ಣದ ವೃತ್ತಾಕಾರದ ಚಿಹ್ನೆ ಇದ್ದರೆ ಅದು ಮಾಂಸಾಹಾರಿ ಎಂದು ಅರ್ಥ. ಇದರಲ್ಲಿ ಚಿಕನ್, ಮಟನ್, ಮೀನು ಸೇರಿದಂತೆ ಮಾಂಸಹಾರಿ ವಸ್ತುವನ್ನು ಉಪಯೋಗ ಮಾಡಿರುತ್ತಾರೆ.
ಹಸಿರು ಚಿಹ್ನೆ:ಪ್ಯಾಕೆಟ್ ಮೇಲೆ ಹಸಿರು ಬಣ್ಣದ ಚಿಹ್ನೆ ಇದ್ದರೇ ಅದು ಸಂಪೂರ್ಣವಾಗಿ ಸಸ್ಯಾಹಾರಿ ಎಂದರ್ಥ. ಇದರಲ್ಲಿ ಯಾವುದೇ ಮಾಂಸ ಅಥವಾ ಮೊಟ್ಟೆಗಳನ್ನು ಬಳಕೆ ಮಾಡಿರಲ್ಲ.
ನೀಲಿ ಚಿಹ್ನೆ: ಪಾಕೆಟ್ ಮೇಲೆ ನೀಲಿ ಬಣ್ಣದ ಚಿಹ್ನೆ ಕಂಡುಬಂದರೆ ಅದನ್ನು ನಾವು ವೈದ್ಯಕೀಯ ಪ್ರಾಡಕ್ಟ್ ಎಂದು ತಿಳಿದುಕೊಳ್ಳಬೇಕು. ಇಂಥವುಗಳನ್ನು ಯಾರಾದರೂ ತೆಗೆದುಕೊಳ್ಳಬೇಕು ಎಂದರೆ ಮೊದಲು ವೈದ್ಯರಿಂದ ಸಲಹೆ, ಸೂಚನೆ ತೆಗೆದುಕೊಂಡಿರಬೇಕು.
https://www.goodnews24x7.com/dharmasthala-burude-mystery-will-6-locals-come-forward-on-behalf-of-the-witness/ಧರ್ಮಸ್ಥಳ ಬುರುಡೆ ರಹಸ್ಯ- ಸಾಕ್ಷಿದಾರನ ಪರವಾಗಿ ಬರ್ತಾರಾ 6 ಮಂದಿ ಸ್ಥಳೀಯರು?
ಹಳದಿ ಡಾಟ್: ಈ ಆಹಾರದಲ್ಲಿ ಮೊಟ್ಟೆ ಉಪಯೋಗ ಮಾಡಲಾಗಿದೆ ಎಂದು ತಿಳಿಸುತ್ತದೆ. ಕೆಲವು ಜನರು ಮೊಟ್ಟೆಗಳನ್ನು ತಿನ್ನುವುದಿಲ್ಲ. ಅಂಥವರು ಪಾಕೆಟ್ ಮೇಲೆ ಹಳದಿ ಬಣ್ಣದ ಚಿಹ್ನೆ ಇದ್ದರೇ ಅದನ್ನು ಖರೀದಿ ಮಾಡದೇ ಇರಬಹುದು. ಏಕೆಂದರೆ ಮೊಟ್ಟೆ ಬಳಸಿ ತಿನಿಸು ಮಾಡಲಾಗಿದೆ ಎಂದುಬು ಇದು ಹೇಳುತ್ತದೆ.
ಕಪ್ಪು ಚಿಹ್ನೆ: ಈ ಪ್ಯಾಕೆಟ್ನಲ್ಲಿ ಕೆಮಿಕಲ್ಸ್ (Chemicals) ಬಳಕೆ ಮಾಡಲಾಗಿದೆ ಎಂದು ಹೇಳುತ್ತದೆ. ಪ್ರಾಡಕ್ಟ್ನಲ್ಲಿ ರಾಸಾಯನಿಕ ಪ್ರಮಾಣವನ್ನು ಅಧಿಕವಾಗಿ ಬಳಕೆ ಮಾಡಲಾಗಿರುತ್ತದೆ. ಏಕೆಂದರೆ ದೀರ್ಘಕಾಲ ಉಳಿಯುವಿಕೆಗಾಗಿ ಆಹಾರವನ್ನ ಸಂಸ್ಕರಣೆ ಮಾಡಲಾಗಿರುತ್ತದೆ. ಇದನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಆಹಾರ ಪದಾರ್ಥಗಳ ಪ್ಯಾಕೆಟ್‌ಗಳ ಮೇಲಿನ ಈ ಬಣ್ಣದ ಚಿಹ್ನೆಗಳು ನಾವು ಏನು ತಿನ್ನುತ್ತಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡುತ್ತವೆ. ಮುಂದಿನ ಬಾರಿ ನೀವು ಯಾವುದೇ ಪ್ಯಾಕೆಟ್ ಆಹಾರವನ್ನು ಖರೀದಿಸುವಾಗ, ಈ ಚಿಹ್ನೆಗಳನ್ನು ಗಮನಿಸುವುದನ್ನು ಮರೆಯದಿರಿ.




