ಭಾರತೀಯ ಕ್ರಿಕೆಟ್​ನಲ್ಲೀಗ ಗಂಭೀರ್​ ‘ಪವರ್​ಫುಲ್​’.ಕನ್ನಡಿಗ ಪ್ರಸಿದ್ಧ್​ ಕೃಷ್ಣಗೆ ಆಯ್ಕೆ ಸಮಿತಿ ಅನ್ಯಾಯ.!

 

ಟೀಮ್​ ಸೆಲೆಕ್ಷನ್​ ವಿಚಾರದಲ್ಲಂತೂ ಕೋಚ್ ಗಂಭೀರ್​​ ಹೇಳಿದ್ದ ಮಾತೇ ಫೈನಲ್​​. ಏಷ್ಯಾಕಪ್​ಗೆ ಟೀಮ್​ ಅನೌನ್ಸ್​ಮೆಂಟ್​ನೊಂದಿಗೆ ಗಂಭೀರ್​ ರಾಜಕೀಯ ಯಾವ ಮಟ್ಟಕ್ಕಿದೆ ಅನ್ನೋದು ಮತ್ತೊಮ್ಮೆ ಜಗತ್ತಿಗೆ ಗೊತ್ತಾಗಿದೆ.

ಗೌತಮ್​ ಗಂಭೀರ್​ ಟೀಮ್​ ಇಂಡಿಯಾದ ಹೆಡ್​ ಕೋಚ್​ ಆದಾಗಿನಿಂದ ರಾಜಕೀಯದ ಚರ್ಚೆ ಜೋರಾಗಿ ನಡೆದಿದೆ. ಗಂಭೀರ್​ಗೆ ಬಾಸ್​​ಗಳು ಫುಲ್​​ ಪವರ್​ ನೀಡಿರೋದು ಓಪನ್​ ಸೀಕ್ರೆಟ್​. ಸದ್ಯ ಟೀಮ್​ ಇಂಡಿಯಾದಲ್ಲಿ ಪವರ್​​ ಫುಲ್ ಪರ್ಸನ್​ ಗಂಭೀರ್ ಆಡಿದ್ದೇ ಆಟ. ಟೀಮ್​ ಸೆಲೆಕ್ಷನ್​ ವಿಚಾರದಲ್ಲಂತೂ ಗಂಭೀರ್​​ ಹೇಳಿದೆ ಮಾತೇ ಫೈನಲ್​​. ಏಷ್ಯಾಕಪ್​ಗೆ ಟೀಮ್​ ಅನೌನ್ಸ್​ಮೆಂಟ್​ನೊಂದಿಗೆ ಗಂಭೀರ್​ ರಾಜಕೀಯ ಯಾವ ಮಟ್ಟಕ್ಕಿದೆ ಅನ್ನೋದು ಮತ್ತೊಮ್ಮೆ ಜಗತ್ತಿಗೆ ಗೊತ್ತಾಗಿದೆ.

 

ಏಷ್ಯಾಕಪ್​ ಟೀಮ್​ನಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣಗೆ ಸ್ಥಾನ ಸಿಗುತ್ತೆ ಅನ್ನೋದು ಟಾಕ್​ ಜೋರಾಗಿತ್ತು. ಕಳೆದ ಐಪಿಎಲ್​ನ ಪರ್ಪಲ್​ ಕ್ಯಾಪ್​ ಹೋಲ್ಡರ್​ ಆಗಿ ಪ್ರಸಿದ್ಧ್​ ಕೃಷ್ಣ ಹೊರಹೊಮ್ಮಿದ್ರು. 15 ಪಂದ್ಯಗಳಲ್ಲಿ 25 ವಿಕೆಟ್​ ಬೇಟೆಯಾಡಿದ್ರು. ಹೀಗಾಗಿ ಪ್ರಸಿದ್ಧ್​​ಗೆ ಏಷ್ಯಾಕಪ್​​ ಟಿಕೆಟ್​ ಫಿಕ್ಸ್​ ಎನ್ನಲಾಗಿತ್ತು. ಸೆಲೆಕ್ಷನ್​​ ಮೀಟಿಂಗ್​​ ಪ್ರಸಿದ್ಧ ಆಯ್ಕೆ ಜೋರು ಚರ್ಚೆಯೂ ನಡೆದಿತ್ತು. ಆದ್ರೆ, ಫೈನಲ್​ ಟೀಮ್​ ಅನೌನ್ಸ್​ ಆದಾಗ ಆಗಿದ್ದು ನಿರಾಸೆ.

ಐಪಿಎಲ್​ನ ಪರ್ಪಲ್​ ಕ್ಯಾಪ್​ ಹೋಲ್ಡರ್​​ಗೆ ಕೊಕ್​ ಕೊಟ್ಟ ಸೆಲೆಕ್ಷನ್​ ಕಮಿಟಿ 3ನೇ ವೇಗಿಯಾಗಿ ಮಣೆ ಹಾಕಿರೋದು ಗಂಭೀರ್​​ ಶಿಷ್ಯ ಹರ್ಷಿತ್​ ರಾಣಾಗೆ. ಐಪಿಎಲ್​​ 2025ನಲ್ಲಿ 14 ಪಂದ್ಯಗಳನ್ನಾಡಿದ ಈತ ಕೇವಲ 15 ವಿಕೆಟ್​ ಕಬಳಿಸಿದ್ದ. ಇಷ್ಟೆ ಅಲ್ಲ, 10.18ರ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟು ದುಬಾರಿಯಾಗಿದ್ದ. ಇನ್ನು, ಟೀಮ್​ ಇಂಡಿಯಾ ಪರ ಆಡಿರೋ ಏಕೈಕ ಟಿ20ಯಲ್ಲೂ 9ರ ಎಕಾನಮಿಯಲ್ಲಿ ರನ್​ಬಿಟ್ಟು ಕೊಟ್ಟಿದ್ದಾನೆ. ಇಂತಾ ವೇಗಿಗೆ ಸೆಲೆಕ್ಷನ್​ ಕಮಿಟಿ ಮಣೆ ಹಾಕಿದೆ. ರಾಣಾ ಸ್ಥಾನ ನೀಡೋ ಭರದಲ್ಲಿ 2024 ಟಿ20 ವಿಶ್ವಕಪ್​ ಗೆದ್ದ ತಂಡದ ಸದಸ್ಯ ಅನುಭವಿ ಮೊಹಮ್ಮದ್​ ಸಿರಾಜ್​ಗೂ ಕೊಕ್​ ನೀಡಲಾಗಿದೆ.

ಗಂಭೀರ್​ ಕೋಚ್​ ಆದಾಗಿನಿಂದಲೂ ಹರ್ಷಿತ್​ ರಾಣಾ ಪರ ಜೋರಾಗೆ ಬ್ಯಾಟಿಂಗ್​ ನಡೆಸಿದ್ದಾರೆ. ಕಳೆದ ವರ್ಷದ ಅಂತ್ಯದಲ್ಲಿ ನಡೆದ ಬಾರ್ಡರ್​​-ಗವಾಸ್ಕರ್​ ಟೆಸ್ಟ್​ ಸರಣಿಯ ತಂಡದಲ್ಲಿ ಕೇವಲ 13 ಫಸ್ಟ್​ ಕ್ಲಾಸ್​ ಪಂದ್ಯಗಳನ್ನಾಡಿದ್ದ ಅನಾನುಭವಿ ರಾಣಾಗೆ ಸ್ಥಾನ ನೀಡಲಾಗಿತ್ತು. ಇಷ್ಟೇ ಅಲ್ಲ, ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್​ ನೀಡಿ ಆಡಿಸಲಾಯ್ತು. ರೆಡ್​ಬಾಲ್​ ಕ್ರಿಕೆಟ್​​ನಲ್ಲಿ ಅತಿ ಕಡಿಮೆ ಅನುಭವ ಹೊಂದಿದ್ರೂ ರಾಣಾನ ಸೆಲೆಕ್ಟ್​​ ಮಾಡಿದ್ದು, ಡೆಬ್ಯೂ ಮಾಡಿಸಿದ್ದು ಇದೆರಡರ ಹಿಂದಿದ್ದಿದ್ದು ಗಂಭೀರ್​.

ಆರ್ಷ್​​ದೀಪ್​ ಸಿಂಗ್​ ಕಳೆದ 2 ವರ್ಷದಿಂದ ಟೀಮ್​ ಇಂಡಿಯಾದ ಭಾಗವಾಗಿದ್ದಾರೆ. ಆದ್ರೆ, ಈ ಆರ್ಷ್​​​ದೀಪ್​ಗೂ ಮುನ್ನ ಏಕದಿನ ಫಾರ್ಮೆಟ್​​ಗೆ ಡೆಬ್ಯೂ ಮಾಡಿದ್ದು ಹರ್ಷಿತ್​ ರಾಣಾ. ಅದೂ ಮಹತ್ವದ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ. ಕಳೆದ ತಿಂಗಳು ನಡೆದ ಇಂಗ್ಲೆಂಡ್​ ಪ್ರವಾಸದ ವೇಳೆ ಹರ್ಷಿತ್​​ ರಾಣಾನ ತಂಡದಲ್ಲಿ ಉಳಿಸಿಕೊಳ್ಳೋಕೆ ಗೌತಮ್​ ಗಂಭೀರ್​​ ಶತ ಪ್ರಯತ್ನ ಪಟ್ಟಿದ್ರು. ಅಂದುಕೊಂಡಂತೆ ಒಂದು ಪಂದ್ಯದ ವೇಳೆ ತಂಡದಲ್ಲಿ ಉಳಿಸಿಕೊಂಡಿದ್ರು ಕೂಡ. ಆದ್ರೆ, ತೀವ್ರ ಟೀಕೆ ಎದುರಾದ ಬಳಿಕ ತಂಡದಿಂದ ರಿಲೀಸ್​ ಮಾಡಲಾಗಿತ್ತು.

ಗೌತಮ್​ ಗಂಭೀರ್​ ಭಾರತೀಯ ಕ್ರಿಕೆಟ್​​ನಲ್ಲಿ ಎಷ್ಟು ಪವರ್​ಫುಲ್​ ಆಗಿದ್ದಾರೆ ಅನ್ನೋದಕ್ಕೆ ಹರ್ಷಿತ್​ ರಾಣಾ ಕಥೆ ಬೆಸ್ಟ್​ ಎಕ್ಸಾಂಪಲ್​ ಆಗಿದೆ. 6 ತಿಂಗಳ ಅವಧಿಯಲ್ಲಿ ಶಿಷ್ಯನನ್ನ ಆಲ್​​ಫಾರ್ಮೆಟ್​ ಪ್ಲೇಯರ್​ ಮಾಡಿದ್ದಾರೆ. ಆದ್ರೆ, ಗುರು ಗಂಭೀರ್​ ಬ್ಯಾಟಿಂಗ್​ ಮಾಡಿದ್ದಕ್ಕೆ ತಕ್ಕಂತೆ ಹರ್ಷಿತ್​ ರಾಣಾ ಪರ್ಫಾಮ್​ ಮಾಡಿಲ್ಲ. ಏಷ್ಯಾಕಪ್​ನಲ್ಲಾದ್ರೂ ನ್ಯಾಯ ಒದಗಿಸ್ತಾರಾ?.

 

Related Posts

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

  ಸೌತ್ ಆಫ್ರಿಕಾ, ನಮೀಬಿಯಾ ಮತ್ತು ಝಿಂಬಾಬ್ವೆ ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್​ಗೆ ಟೀಮ್ ಇಂಡಿಯಾದ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ನೀಡಿರುವ ಹೇಳಿಕೆಗಳು ಇದೀಗ ಭಾರೀ ವೈರಲ್ ಆಗಿದೆ. ಭಾರತೀಯ…

ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..!

ಐಪಿಎಲ್ 2026 ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದಲ್ಲಿ ಸೆಣಸಾಡಲಿವೆ. ಈ ಪಂದ್ಯ ಮಳೆಯಿಂದ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೋತ ತಂಡಕ್ಕೆ ಕ್ವಾಲಿಫೈಯರ್ 2 ಆಡಲು ಮತ್ತೊಂದು ಅವಕಾಶವಿದ್ದರೂ,…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!