ಶಾಸಕರ ರಾಜೀನಾಮೆ ಎಚ್ಚರಿಕೆಗೆ ಮಣಿದ ಸರ್ಕಾರ: ಬರದ ‘ಗ್ರೌಂಡ್ ಟ್ರೂಥಿಂಗ್’ ಪಟ್ಟಿಗೆ ಇಂಡಿ, ಸೇರಿ 29 ತಾಲೂಕುಗಳ ಸೇರ್ಪಡೆ!

ಬೆಂಗಳೂರು: ಇಂಡಿ ಕ್ಷೇತ್ರದ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರ ರಾಜೀನಾಮೆ ಬೆದರಿಕೆಗೆ ಕೊನೆಗೂ ಸರ್ಕಾರ ಮಣಿದಿದೆ. ತಮ್ಮ ಕ್ಷೇತ್ರವನ್ನು ಬರಪೀಡಿತ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅಸಮಾಧಾನಗೊಂಡು, ಸ್ಪೀಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದ ಶಾಸಕರ ಮನವೊಲಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಇಂಡಿ ಹಾಗೂ ಚಡಚಣ ಸೇರಿದಂತೆ ಒಟ್ಟು 29 ಹೆಚ್ಚುವರಿ ತಾಲೂಕುಗಳನ್ನು ‘ಬರ ಗ್ರೌಂಡ್ ಟ್ರೂಥಿಂಗ್’ (ವಾಸ್ತವಾಂಶ ಪರಿಶೀಲನೆ) ಪಟ್ಟಿಗೆ ಸೇರಿಸಿ ರಾಜ್ಯ ಸರ್ಕಾರ ಅಧಿಕೃತ ಸೂಚನೆ ಹೊರಡಿಸಿದೆ.

ಶಾಸಕರ ರಾಜೀನಾಮೆ ವಿಚಾರ ಸದನದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿ, ವಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ತಾಂತ್ರಿಕ ಕಾರಣಗಳಿಂದ ರಾಜೀನಾಮೆ ಪತ್ರವನ್ನು ಸ್ಪೀಕರ್ ತಿರಸ್ಕರಿಸಿದ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಾಸಕರೊಂದಿಗೆ ಸಂಧಾನ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸರ್ಕಾರ, ಬರದ ಸ್ಥಿತಿಗತಿ ಪರಿಶೀಲನೆಗಾಗಿ ಹೆಚ್ಚುವರಿ 29 ತಾಲೂಕುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಗ್ರೌಂಡ್ ಟ್ರೂಥಿಂಗ್ ಪಟ್ಟಿಗೆ ಸೇರ್ಪಡೆಯಾದ 29 ತಾಲೂಕುಗಳು:

ಔರಾದ್

ಗೋಕಾಕ್

ರಾಮದುರ್ಗ

ಸೌಂದತ್ತಿ

ಕಾಗವಾಡ

ಇಂಡಿ

ಚಡಚಣ

ಧಾರವಾಡ

ಕಲಘಟಗಿ

ಕುಂದಗೋಳ

ಅಳ್ನಾವರ

ಶಿಕಾರಿಪುರ

ಶಿವಮೊಗ್ಗ

ಭದ್ರಾವತಿ

ಸೊರಬ

ತೀರ್ಥಹಳ್ಳಿ

ಚಿಕ್ಕಮಗಳೂರು

ಕಳಸ

ಮಡಿಕೇರಿ

ಕುಶಾಲನಗರ

ಬೆಳ್ತಂಗಡಿ

ಬಂಟ್ವಾಳ

ಉಳ್ಳಾಲ

ಉಡುಪಿ

ಬೈಂದೂರು

ಅಂಕೋಲಾ

ಭಟ್ಕಳ

ಹಳಿಯಾಳ

ಶಿರಸಿ

Related Posts

ರೇಣುಕಾಸ್ವಾಮಿ ಕೊ* ಪ್ರಕರಣ: ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ,

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪ್ರದೋಷ್‌ ಅವರ ಮಾಫಿ ಸಾಕ್ಷಿ (ಅಪ್ರೂವರ್) ಹೇಳಿಕೆಯನ್ನು ದಾಖಲಿಸಿಕೊಳ್ಳಲು 59ನೇ ಸೆಷನ್ಸ್ ಕೋರ್ಟ್‌ ಸೆಪ್ಟೆಂಬರ್ 28ಕ್ಕೆ ದಿನಾಂಕ ನಿಗದಿಪಡಿಸಿದೆ. ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು…

ಬರದ ಬಿಸಿಯ ನಡುವೆ ತಂಪೆರೆದ ವರುಣ: ಮುಂದಿನ 3 ದಿನ ಕರ್ನಾಟಕದಾದ್ಯಂತ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ!

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆಯ ಅಭಾವದಿಂದಾಗಿ ತೀವ್ರ ಬರಗಾಲದ ಛಾಯೆ ಆವರಿಸಿದೆ. ಸರಿಯಾದ ಸಮಯಕ್ಕೆ ಮಳೆ ಬಾರದೆ ಹೊಲದಲ್ಲಿದ್ದ ಬೆಳೆಗಳು ಒಣಗಿ ಹೋಗಿದ್ದು, ಅನ್ನದಾತ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜೊತೆಗೆ ರಾಜ್ಯದ ಹಲವೆಡೆ ಜಲಾಶಯಗಳು ಹಾಗೂ ಕೆರೆ-ಕಟ್ಟೆಗಳು…

You Missed

ರೇಣುಕಾಸ್ವಾಮಿ ಕೊ* ಪ್ರಕರಣ: ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ,

ರೇಣುಕಾಸ್ವಾಮಿ ಕೊ* ಪ್ರಕರಣ: ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ,

ಬರದ ಬಿಸಿಯ ನಡುವೆ ತಂಪೆರೆದ ವರುಣ: ಮುಂದಿನ 3 ದಿನ ಕರ್ನಾಟಕದಾದ್ಯಂತ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ!

ಬರದ ಬಿಸಿಯ ನಡುವೆ ತಂಪೆರೆದ ವರುಣ: ಮುಂದಿನ 3 ದಿನ ಕರ್ನಾಟಕದಾದ್ಯಂತ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ!

ಶಾಸಕರ ರಾಜೀನಾಮೆ ಎಚ್ಚರಿಕೆಗೆ ಮಣಿದ ಸರ್ಕಾರ: ಬರದ ‘ಗ್ರೌಂಡ್ ಟ್ರೂಥಿಂಗ್’ ಪಟ್ಟಿಗೆ ಇಂಡಿ, ಸೇರಿ 29 ತಾಲೂಕುಗಳ ಸೇರ್ಪಡೆ!

ಶಾಸಕರ ರಾಜೀನಾಮೆ ಎಚ್ಚರಿಕೆಗೆ ಮಣಿದ ಸರ್ಕಾರ: ಬರದ ‘ಗ್ರೌಂಡ್ ಟ್ರೂಥಿಂಗ್’ ಪಟ್ಟಿಗೆ ಇಂಡಿ, ಸೇರಿ 29 ತಾಲೂಕುಗಳ ಸೇರ್ಪಡೆ!

ಮೈಸೂರು ದಸರಾ ಕುಸ್ತಿಗೂ ‘ಥರ್ಡ್‌ ಅಂಪೈರ್‌’ ಸ್ಪರ್ಶ: ಜಟ್ಟಿಗಳ ತೀರ್ಪಿನ ಗೊಂದಲಕ್ಕೆ ವಿಡಿಯೋ ತಂತ್ರಜ್ಞಾನದ ಬ್ರೇಕ್‌!

ಮೈಸೂರು ದಸರಾ ಕುಸ್ತಿಗೂ ‘ಥರ್ಡ್‌ ಅಂಪೈರ್‌’ ಸ್ಪರ್ಶ: ಜಟ್ಟಿಗಳ ತೀರ್ಪಿನ ಗೊಂದಲಕ್ಕೆ ವಿಡಿಯೋ ತಂತ್ರಜ್ಞಾನದ ಬ್ರೇಕ್‌!

ಗುಜರಾತ್‌ನಲ್ಲಿದೆ ಗಣೇಶನ ಆಕಾರದಲ್ಲೇ ನಿರ್ಮಾಣಗೊಂಡ ವಿಶಿಷ್ಟ ದೇವಾಲಯ!

ಗುಜರಾತ್‌ನಲ್ಲಿದೆ  ಗಣೇಶನ ಆಕಾರದಲ್ಲೇ ನಿರ್ಮಾಣಗೊಂಡ  ವಿಶಿಷ್ಟ ದೇವಾಲಯ!

ಬರೋಬ್ಬರಿ 1.01 ಕೋಟಿ ರೂ.ಗೆ ಹರಾಜಾಯ್ತು ಗಣೇಶನ ಲಡ್ಡು ಪ್ರಸಾದ!

ಬರೋಬ್ಬರಿ 1.01 ಕೋಟಿ ರೂ.ಗೆ ಹರಾಜಾಯ್ತು ಗಣೇಶನ ಲಡ್ಡು ಪ್ರಸಾದ!