ಹಾರ್ದಿಕ್ ಪಾಂಡ್ಯ ನಡೆ ವಿರಾಟ್ ಕೋಹ್ಲಿಯ ರೀತಿಯಲ್ಲಿಯೇ …!

ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ ಲೋಕದ ಕ್ರಿಕೆಟರ್​. ಆತನ ಬ್ಯಾಟಿಂಗ್, ಅಗ್ರೆಷನ್​.. ಅಟಿಟ್ಯೂಡ್​ ಎಲ್ಲಕ್ಕೂ ಫ್ಯಾನ್ಸ್​ ಇದ್ದಾರೆ. ಇದೇ ಕಾರಣಕ್ಕೆ ವಿರಾಟ್ ಆಫ್​ ದಿ ಫೀಲ್ಡ್​ನಲ್ಲೂ ನಂ.1 ಕ್ರಿಕೆಟರ್ ಆಗಿ ಮಿಂಚುತ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಇದೇ ಸಾಲಿನಲ್ಲೇ ಹಾರ್ದಿಕ್ ಪಾಂಡ್ಯ ಸಾಗ್ತಿದ್ದಾರೆ.

 

ಇನ್​​ಸ್ಟಾದಲ್ಲಿ ಪಾಂಡ್ಯಗೆ 42.5 ಮಿಲಿಯನ್ ಫಾಲೋವರ್ಸ್​!
ಟೀಮ್ ಇಂಡಿಯಾ ಕ್ರಿಕೆಟರ್​ಗಳ ಪೈಕಿ ವಿರಾಟ್, ಇನ್​ಸ್ಟಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ರೆ, ರೋಹಿತ್ ಶರ್ಮಾ 44.1 ಮಿಲಿಯನ್ ಫಾಲೋವರ್​​ಗಳನ್ನ ಹೊಂದಿದ್ದಾರೆ. ರೋಹಿತ್​ ಶರ್ಮಾಗಿಂತ ಹಾರ್ದಿಕ್, 2.4 ಮಿಲಿಯನ್ ಫಾಲೋವರ್​​ಗಳನ್ನು ಕಡಿಮೆ ಹೊಂದಿದ್ದಾರೆ. ಹೀಗಾದ್ರೂ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್​ನಲ್ಲಿ ಒನ್ ಆಫ್ ದಿ ಟಾಪ್ INFLUENCER ಪಾಂಡ್ಯ.. ಇಂಟ್ರೆಸ್ಟಿಂಗ್ ಅಂದ್ರೆ, ಸೋಶಿಯಲ್ ಮೀಡಿಯಾ ಮಾರ್ಕೆಂಟಿಂಗ್​ನಲ್ಲಿ ರೋಹಿತ್ ಶರ್ಮಾರನ್ನೇ ಮೀರಿಸಿರುವ ಪಾಂಡ್ಯ, ವಿರಾಟ್ ಕೊಹ್ಲಿ ನಂತರದ ಸ್ಥಾನ ಕಬ್ಜಾ ಮಾಡಿದ್ದಾರೆ.

ಯುವಕರಿಗೆ ಹಾರ್ದಿಕ್ ಪಾಂಡ್ಯನೇ ರೋಲ್ ಮಾಡೆಲ್
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ. ಗ್ರೇಟೆಸ್ಟ್ ಕ್ರಿಕೆಟರ್ಸ್​. ಅತಿ ಹೆಚ್ಚು ಫಾಲೋವರ್​​ಗಳನ್ನು ಹೊಂದಿದ್ದಾರೆ. ರೋಹಿತ್​ ಶರ್ಮಾಗೆ ಹೋಲಿಕೆ ಮಾಡಿದ್ರೆ ಹಾರ್ದಿಕ್​ ಪಾಂಡ್ಯರ ಲೈಫ್ ಸ್ಟ್ರೈಲ್​, ಫಿಟ್ನೆಸ್, ಫ್ಯಾಷನ್​​​​​​​​ ಯುವಕರಿಗೆ ಅಚ್ಚುಮೆಚ್ಚು. ಪ್ರತಿಷ್ಠಿತ ಕಂಪನಿಗಳ ಬಹುತೇಕ ಟಾರ್ಗೆಟ್​ ಯುವಕರು. ಹೀಗಾಗಿ ಯುವಕರನ್ನೇ ಟಾರ್ಗೆಟ್ ಮಾಡುವ ಕಂಪನಿಗಳಿಗೆ ಹಾರ್ದಿಕ್ ಪಾಂಡ್ಯನೇ ಬೆಸ್ಟ್ ಚಾಯ್ಸ್​. ಹಾರ್ದಿಕ್ ಪಾಂಡ್ಯ ರಾಯಭಾರಿ ಕಂಪನಿಗಳು ವೃದ್ಧಿ ಶೇಖಡ 25ರಷ್ಟಿದೆ.

 

ಪಾಂಡ್ಯ ಇನ್​ಸ್ಟಾ ಪೋಸ್ಟ್​ ಬೆಲೆ 80 ಲಕ್ಷಕ್ಕೂ ಅಧಿಕ
ಹಲವು ಬ್ರಾಂಡ್​ಗಳ ರಾಯಭಾರಿಯಾಗಿರುವ ಹಾರ್ದಿಕ್ ಪಾಂಡ್ಯ, ಇನ್​ಸ್ಟಾದಲ್ಲಿ ಬ್ರ್ಯಾಂಡ್ ಪ್ರಮೋಷನ್ ಪೋಸ್ಟ್​ಗೆ 80 ಲಕ್ಷಕ್ಕೂ ಅಧಿಕ ಚಾರ್ಜ್ ಮಾಡ್ತಾರೆ. ಪ್ರಮುಖವಾಗಿ ಆಟೋ ಮೊಬೈಲ್ಸ್​, ಕಾರು, ಮೊಬೈಲ್ಸ್​, ಹೆಲ್ತ್​, ಫಿಟ್ನೆಸ್, ಇ-ಕಾಮರ್ಸ್​, ವಿಡಿಯೋ ಗೇಮ್ಸ್​​ಗಳನ್ನ ಪ್ರಮೋಟ್ ಮಾಡುವ ಹಾರ್ದಿಕ್, ಇನ್​​ಸ್ಟಾ ಡಿಜಿಟಲ್ ಮಾರ್ಕೆಟಿಂಗ್​ನಿಂದಲೇ 15 ಕೋಟಿಗೂ ಅಧಿಕ ಆದಾಯ ಗಳಿಸ್ತಾರೆ.

 

ಒಂದು ಶೂಟ್​ಗೆ 2.5 ಕೋಟಿ
ಪ್ರತಿಷ್ಠಿತ ಕಂಪನಿಗಳ ರಾಯಭಾರಿಯಾಗಿರುವ ಹಾರ್ದಿಕ್​, ಸದ್ಯ 20 ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬ್ರ್ಯಾಂಡ್​ಗಳ ಒಂದೊಂದು ಶೂಟ್​ಗೆ ಬರೋಬ್ಬರಿ 2.5 ಕೋಟಿ ಚಾರ್ಜ್​ ಮಾಡ್ತಾರಂತೆ. ವರ್ಷದಿಂದ ವರ್ಷಕ್ಕೆ ಖ್ಯಾತಿಯ ಜೊತೆಗೆ ಹಾರ್ದಿಕ್ ಆದಾಯವೂ ದುಪ್ಪಟ್ಟಾಗ್ತಿದೆ. 2022ರಲ್ಲಿ 34.8 ಮಿಲಿಯನ್​ ಇದ್ದ ಬ್ರ್ಯಾಂಡ್​ ವ್ಯಾಲ್ಯೂ, 2023ರಲ್ಲಿ 38.4 ಮಿಲಿಯನ್​ಗೆ ಏರಿಕೆಯಾಗಿತ್ತು. 2024ರ ಅಂತ್ಯಕ್ಕೆ 40 ಮಿಲಿಯನ್​ ಬ್ರ್ಯಾಂಡ್ ವಾಲ್ಯೂ ಹೊಂದಿದ್ದ ಹಾರ್ದಿಕ್, ಈ ವರ್ಷ ಮತ್ತಷ್ಟು ಗಳಿಸೋದು ಗ್ಯಾರಂಟಿ.

 

ಆನ್​ಫೀಲ್ಡ್​ನಲ್ಲಿ ಬ್ಯಾಟಿಂಗ್, ಬೌಲಿಂಗ್​ನಿಂದ ಗಮನ ಸೆಳೆಯುವ ಹಾರ್ದಿಕ್ ಪಾಂಡ್ಯ, ಈಗ ವಿರಾಟ್ ಕೊಹ್ಲಿ ನಂತರದ ಟಾಪ್ ಮೋಸ್ಟ್​ ಆಗಿರುವುದು ಹಾರ್ದಿಕ್ ಕ್ರೇಜ್​​ಗೆ ಬೆಸ್ಟ್ ಎಕ್ಸಾಂಪಲ್​ ಅನ್ನೋದ್ರಲ್ಲಿ ಡೌಟಿಲ್ಲ.

Related Posts

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

  ಸೌತ್ ಆಫ್ರಿಕಾ, ನಮೀಬಿಯಾ ಮತ್ತು ಝಿಂಬಾಬ್ವೆ ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್​ಗೆ ಟೀಮ್ ಇಂಡಿಯಾದ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ನೀಡಿರುವ ಹೇಳಿಕೆಗಳು ಇದೀಗ ಭಾರೀ ವೈರಲ್ ಆಗಿದೆ. ಭಾರತೀಯ…

ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..!

ಐಪಿಎಲ್ 2026 ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದಲ್ಲಿ ಸೆಣಸಾಡಲಿವೆ. ಈ ಪಂದ್ಯ ಮಳೆಯಿಂದ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೋತ ತಂಡಕ್ಕೆ ಕ್ವಾಲಿಫೈಯರ್ 2 ಆಡಲು ಮತ್ತೊಂದು ಅವಕಾಶವಿದ್ದರೂ,…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!