ಮೂರು ಕೇಸ್ ಗಳ ವಿಚಾರಣೆ ಎದುರಿಸಬೇಕಾಗಿರುವ ಪ್ರಜ್ವಲ್ ರೇವಣ್ಣ!.. ಹಾಗಾದ್ರೆ ಆ ಕೇಸ್ ಗಳು ಯಾವು ಅಂತ ಗೊತ್ತ

ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಪ್ರಜ್ವಲ್ ರೇವಣ್ಣ ವಿರುದ್ಧದ ಒಂದು ರೇಪ್ ಕೇಸ್ ನಲ್ಲಿ ಕೋರ್ಟ್ ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದೆ. ಆದರೇ, ಪ್ರಜ್ವಲ್ ರೇವಣ್ಣ ವಿರುದ್ಧ ಇನ್ನೂ ಮೂರು ಕ್ರಿಮಿನಲ್ ಕೇಸ್ ಗಳಿವೆ. ಆ ಕೇಸ್ ಗಳು ಯಾವುವು? ಈಗ ಯಾವ ಹಂತದಲ್ಲಿವೆ? ಪ್ರಜ್ವಲ್ ಮುಂದೇನು ಮಾಡಬಹುದು ಎಂಬ ಚರ್ಚೆ ನಡೆಯುತ್ತಿದೆ.

  • ಪ್ರಜ್ವಲ್ ರೇವಣ್ಣ ವಿರುದ್ಧ ಇರುವ ಇನ್ನೂ ಮೂರು ಕೇಸ್ ಗಳಾವುವು?
  • ಆ ಮೂರು ಕೇಸ್ ಗಳು ಈಗ ಯಾವ ಸ್ಥಿತಿಯಲ್ಲಿವೆ?
  • ತೀರ್ಪು ಯಾವಾಗ ಬರುತ್ತೆ?

ಪ್ರಜ್ವಲ್ ರೇವಣ್ಣ ಈಗ ಮುಂದೇನು ಮಾಡಬಹುದು?
ಅತ್ಯಾಚಾರ ಕೇಸ್ ನಲ್ಲಿ ಅಪರಾಧಿಯಾಗಿರುವ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಹೈಕೋರ್ಟ್ ಮೊರೆ ಹೋದ್ರೆ ಜೀವಾವಧಿ ಶಿಕ್ಷೆಯಿಂದ ರಿಲೀಫ್​ ಪಡೆಯಬಹುದೇ ವಿನಃ, ಜೈಲಿನಿಂದ ಸದ್ಯಕ್ಕಂತೂ ವಾಪಸ್​ ಬರೋದಕ್ಕಾಗಲ್ಲ. ಯಾಕಂದ್ರೆ, ಪ್ರಜ್ವಲ್​ ವಿರುದ್ಧ ಬಂದಿರೋ ತೀರ್ಪು ಬರೀ ಒಂದು ಪ್ರಕರಣದಲ್ಲಷ್ಟೇ. ಬಾಕಿ ಇರೋ ಇನ್ನೂ 3 ಪ್ರಕರಣಗಳಲ್ಲಿ ಪ್ರಜ್ವಲ್​ ಜೈಲುವಾಸ ಮುಂದುವರಿಸಲೇಬೇಕು..ಅಷ್ಟಕ್ಕೂ, ಉಳಿದ ಆ ಮೂರು ಪ್ರಕರಣಗಳು ಯಾವುವು ಅಂತ ನಾವು ವಿವರಿಸುತ್ತೇವೆ.

ಪ್ರಜ್ವಲ್​ ಕೇಸ್​ 02
ಸಿಐಡಿ ಪೊಲೀಸ್​ ಸ್ಟೇಷನ್​ನಲ್ಲಿ ದಾಖಲಾಗಿರೋ ಕೇಸ್ ಹಾಸನ ಮೂಲದ ಮಹಿಳೆ ನೀಡಿರುವ ದೂರು. ಅತ್ಯಾಚಾರ, ಬೆದರಿಕೆ, ಲೈಂಗಿಕ ಕಿರುಕುಳ, ಇತರೆ
13/09/2024ರಂದು ದಾಖಲಿಸಿರುವ ದೂರು ಪ್ರಕರಣದಲ್ಲಿ 126 ಸಾಕ್ಷಿಗಳ ವಿಚಾರಣೆ ಆಗಿದೆ 1690 ಪುಟಗಳ ಚಾರ್ಟ್​ಶೀಟ್ ಸಲ್ಲಿಕೆಯಾಗಿದೆ
ಪ್ರಜ್ವಲ್​ ವಿರುದ್ಧ ಇರೋ 2ನೇ ಪ್ರಕರಣ ಸಿಐಡಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ..ಹಾಸನ ಮೂಲದ್ದೇ ಮಹಿಳೆ ನೀಡಿರೋ ದೂರು ಅದಾಗಿದ್ದು, ಅದೂ ಕೂಡ ತುಂಬಾನೇ ಗಂಭಿರ ಸ್ವರೂಪದ ಪ್ರಕರಣವಾಗಿದೆ..ಅತ್ಯಾಚಾರ, ಬೆದರಿಕೆ, ಲೈಂಗಿಕ ಕಿರುಕುಳ ಸೇರಿ ಇತರೆ ಆರೋಪಗಳು ಪ್ರಜ್ವಲ್ ಮೇಲಿದೆ.13/09/2024ರಂದು ದಾಖಲಿಸಿರುವ ದೂರು ಇದಾಗಿದ್ದು, ಇಲ್ಲಿವರೆಗೂ ಪ್ರಕರಣದಲ್ಲಿ 126 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ..ಸಿಐಡಿಯ ಎಸ್​ಐಟಿ ತಂಡ ಈ ಕೇಸಲ್ಲಿ ಈಗಾಗಲೇ 1690 ಪುಟಗಳ ಚಾರ್ಟ್​ಶೀಟ್ ಸಲ್ಲಿಸಿದೆ.

ಪ್ರಜ್ವಲ್​ ಕೇಸ್​ 03
ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 3ನೇ ಸಂತ್ರಸ್ತೆ ನೀಡಿರುವ ದೂರಿನ ಮೇಲೆ FIR ಲೈಂಗಿಕ ಕಿರುಕುಳ, ದೌರ್ಜನ್ಯ, ಕೊಲೆ ಬೆದರಿಕೆ
ತನಿಖೆ ಮುಗಿಸಿ 681 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ 74 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಇನ್ನು, ಪ್ರಜ್ವಲ್​ ವಿರುದ್ಧದ ಮೂರನೇ ಪ್ರಕರಣ ನೋಡೋದಾದ್ರೆ, ಅದು ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರೋ ದೂರು..3ನೇ ಸಂತ್ರಸ್ತೆ ನೀಡಿರುವ ದೂರಿನ ಮೇಲೆ ಎಫ್​ಐಆರ್ ದಾಖಲಿಸಲಾಗಿದ್ದು, ಅದ್ರಲ್ಲೂ ಲೈಂಗಿಕ ಕಿರುಕುಳ, ದೌರ್ಜನ್ಯ, ಕೊಲೆ ಬೆದರಿಕೆಯಂತಹ ಘೋರ ಆರೋಪಗಳಿವೆ. ಆ ಪ್ರಕರಣದಲ್ಲಿ ತನಿಖೆ ಮುಗಿಸಿ 681 ಪುಟಗಳ ಚಾರ್ಜ್​ಶೀಟ್​​ನ ಸಿಐಡಿಯ ಎಸ್​ಐಟಿ ತಂಡ ಈಗಾಗಲೇ​ ಸಲ್ಲಿಕೆ ಮಾಡಿದೆ. 74 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ಪ್ರಜ್ವಲ್​ ಕೇಸ್​ 04
ಹೊಳೆ ನರಸೀಪುರ ಟೌನ್ ಠಾಣೆಯಲ್ಲಿ ದೂರು ದಾಖಲು 2ನೇ ಸಂತ್ರಸ್ತೆಯಿಂದ ಪ್ರಜ್ವಲ್​, ರೇವಣ್ಣ ಇಬ್ಬರ ವಿರುದ್ಧ ದೂರು ಲೈಂಗಿಕ ಕಿರುಕುಳ, ಅತ್ಯಾಚಾರ, ಬೆದರಿಕೆಗಳ ಆರೋಪ 2360 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ
ತನಿಖೆ ಮುಗಿದಿದ್ದು ವಿಚಾರಣೆಗೆ ನ್ಯಾಯಾಲಯಕ್ಕೆ ಮನವಿ ನಾಲ್ಕನೇ ಪ್ರಕರಣ ನೋಡೋದಾದ್ರೆ, ಹೊಳೆ ನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಇದು. 2ನೇ ಸಂತ್ರಸ್ತೆಯಿಂದ ಪ್ರಜ್ವಲ್​ ಹಾಗೂ ತಂದೆ ರೇವಣ್ಣ ಇಬ್ಬರ ವಿರುದ್ಧವೂ ದೂರು ದಾಖಲಾಗಿತ್ತು.ಲೈಂಗಿಕ ಕಿರುಕುಳ, ಅತ್ಯಾಚಾರ, ಬೆದರಿಕೆಗಳ ಆರೋಪವೂ ಆ ದೂರಿನಲ್ಲಿದ್ದು, ಆ ಕೇಸಲ್ಲೂ ಬರೋಬ್ಬರಿ 2360 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ. ತನಿಖೆ ಸಂಪೂರ್ಣ ಮುಗಿದಿದ್ದು ವಿಚಾರಣೆಗೆ ನ್ಯಾಯಾಲಯಕ್ಕೆ ಸಿಐಡಿ ಎಸ್​ಐಟಿ ಮನವಿ ಮಾಡಿದೆ.

ಪ್ರಜ್ವಲ್​ ವಿರುದ್ಧ ಉಳಿದ ಅತ್ಯಾಚಾರ ಪ್ರಕರಣಗಳ ಸ್ಟೇಟಸ್​ ಹೀಗಿದೆ..

ಈಗ ಹೈಕೋರ್ಟ್​ ಮೊರೆ ಹೋದ್ರೂ ಕೂಡ ಪ್ರಜ್ವಲ್​ ಜೀವಾವಧಿ ಶಿಕ್ಷೆಗೆ ತಡೆಯಾಜ್ಞೆ ತರೋದಕ್ಕೆ ಹೋಗ್ಬೇಕೇ ವಿನಃ, ಬೇಲ್​​ಗಾಗಿ ಮನವಿ ಮಾಡೋದು ಸದ್ಯಕ್ಕಂತೂ ಕನಸಿನ ಮಾತೇ ಸರಿ ಅನ್ನೋದು ಕಾನೂನು ಪಂಡಿತರದ್ದೇ ಅಭಿಪ್ರಾಯ.

 

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು