ಆರ್​ಸಿಬಿ ಬೌಲಿಂಗ್ ಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ : 9 ವರ್ಷಗಳ ಬಳಿಕ ಫೈನಲ್‌ಗೆ ಎಂಟ್ರಿ ಕೊಟ್ಟ ಆರ್​ಸಿಬಿ

ಪಂಜಾಬ್​ ಕಿಂಗ್ಸ್​ ವಿರುದ್ಧದ ಕ್ವಾಲಿಫೈಯರ್​ 1ರ ಪಂದ್ಯದಲ್ಲಿ RCB ತಂಡ ಭರ್ಜರಿ ಜಯ ಸಾಧಿಸಿ ನೇರವಾಗಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇದರಿಂದ 2009, 2011, 2016ರ ಬಳಿಕ 4ನೇ ಬಾರಿಗೆ ಆರ್​ಸಿಬಿ ಫೈನಲ್​ಗೆ ಹೋಗಿದೆ. ಮುಲ್ಲನಪುರದ ನ್ಯೂ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದಾರ್, ಬೌಲಿಂಗ್ ಆಯ್ಕೆ ಮಾಡಿದರು.

ಪಂಜಾಬ್​ ಕಿಂಗ್ಸ್​ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಪ್ರಿಯಾಂಶ್​ ಆರ್ಯ 7, ಪ್ರಭಾಸಿಮ್ರಾನ್​ ಸಿಂಗ್ 18 ರನ್​ಗೆ ಔಟ್​ ಆದರು. ನಂತರ ನಾಯಕ ಶ್ರೇಯಸ್​ ಅಯ್ಯರ್ ಕೂಡ ಕೇವಲ 2 ರನ್​ಗೆ ಡ್ರೆಸ್ಸಿಂಗ್​ ರೂಮ್​ನತ್ತ ಹೆಜ್ಜೆ ಹಾಕಿದರು. ಇವರ ಬೆನ್ನಲ್ಲೇ ಜೋಶ್ ಇಂಗ್ಲಿಷ್​ ಕೇವಲ 4 ರನ್​ಗೆ ವಿಕೆಟ್​ ಕಳೆದುಕೊಂಡರು.

ಬ್ಯಾಟಿಂಗ್​​ ಮಾಡಲು ಕ್ರೀಸ್​ಗೆ ಬಂದ ನೆಹಾಲ್ ವಧೇರಾ, ಯಶ್​ ದಯಾಳ್​ ಬೌಲಿಂಗ್​ನಲ್ಲಿ ಬೋಲ್ಡ್​ ಆದರು, ಸುಯಶ್ ಶರ್ಮಾ ಬೌಲಿಂಗ್​ನಲ್ಲಿ ಶಶಾಂಕ್​ ಸಿಂಗ್​ 3, ಮುಶೀರ್ ಖಾನ್​, ಮಾರ್ಕಸ್ ಸ್ಟೊಯಿನಿಸ್ ಔಟ್​ ಆದರು. ಇದರಿಂದ ಪಂಜಾಬ್​ ಕಿಂಗ್ಸ್​ ಕೇವಲ 14.1 ಓವರ್​ಗಳಲ್ಲಿ ಆಲೌಟ್​ ಆಗಿ 102 ರನ್​ಗಳ ಟಾರ್ಗೆಟ್​ ಅನ್ನು ಆರ್​ಸಿಬಿಗೆ ನೀಡಿತ್ತು.ಈ ಸುಲಭ ಟಾರ್ಗೆಟ್​ ಅನ್ನು ಚೇಸ್ ಮಾಡಿದ ಆರ್​ಸಿಬಿ 10 ಓವರ್​ಗೆ ಎರಡು ವಿಕೆಟ್​ ಕಳೆದುಕೊಂಡು 106 ರನ್​ ಗಳಿಸುವ ಮೂಲಕ ಜಯ ಸಾಧಿಸಿತು.

Related Posts

ಮೆಲೋಡಿ ಡಿಪ್ಲೊಮಸಿ: “ನಾವು ಜಗದ್ವಿಖ್ಯಾತ ಜೋಡಿ” ಎಂದ ಇಟಲಿ ಪ್ರಧಾನಿ ಮೆಲೋನಿ

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ನಡುವಿನ ಆತ್ಮೀಯ ಸ್ನೇಹ ಇಡೀ ವಿಶ್ವದ ಗಮನ ಸೆಳೆದಿದೆ. ಇವರಿಬ್ಬರ ರಾಜತಾಂತ್ರಿಕ ಒಡನಾಟವು ಭಾರತ ಮತ್ತು ಇಟಲಿ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಜಿ7…

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

You Missed

ಮೆಲೋಡಿ ಡಿಪ್ಲೊಮಸಿ: “ನಾವು ಜಗದ್ವಿಖ್ಯಾತ ಜೋಡಿ” ಎಂದ ಇಟಲಿ ಪ್ರಧಾನಿ ಮೆಲೋನಿ

ಮೆಲೋಡಿ ಡಿಪ್ಲೊಮಸಿ: “ನಾವು ಜಗದ್ವಿಖ್ಯಾತ ಜೋಡಿ” ಎಂದ ಇಟಲಿ ಪ್ರಧಾನಿ ಮೆಲೋನಿ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!