ಹೆಡ್​ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್​ ಗುಡ್​ ಬೈ…..!

 

ದ್ರಾವಿಡ್ ಹಠಾತ್ ನಿರ್ಧಾರದ ಹಿಂದೆದ್ಯಾ ಕಾರಣ..?
ದೊಡ್ಡ ಹುದ್ದೆಯ ಆಫರ್ ತಿರಸ್ಕರಿಸಿದ್ಯಾಕೆ ದ್ರಾವಿಡ್..?

ಸೀಸನ್​​-19ರ ಐಪಿಎಲ್ ಆರಂಭಕ್ಕೆ ಏಳೆಂಟು ತಿಂಗಳು ಬಾಕಿಯಿದೆ. ಫ್ರಾಂಚೈಸಿಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಕಾರ್ಯ ಪ್ರವೃತ್ತವಾಗಿದೆ. ಈಗಾಗಲೇ ವಿಂಡೋ ಟ್ರೇಡಿಂಗ್ ಮೂಲಕ ಆಟಗಾರರನ್ನು ತಂಡಕ್ಕೆ ಕರೆತರವ ಲೆಕ್ಕಾಚಾರದಲ್ಲಿರುವ ಫ್ರಾಂಚೈಸಿಗಳು, ಕೆಲ ಕೋಚ್​ಗಳಿಗೂ ಗೇಟ್​ಪಾಸ್ ನೀಡಿವೆ. ಇದೆಲ್ಲದರ ನಡುವೆ ರಾಜಸ್ಥಾನ್ ರಾಯಲ್ಸ್​ ತಂಡಕ್ಕೆ ಅಘಾತ ಎದುರಾಗಿದೆ. ರಾಹುಲ್ ದ್ರಾವಿಡ್, ​​​​​​​​ ತೆಗೆದುಕೊಂಡ ಒಂದು ನಿರ್ಧಾರ ಅಭಿಮಾನಿಗಳಿಗೆ ಶಾಕ್ ನೀಡಿದೆ.

ಹೆಡ್ ಕೋಚ್ ಹುದ್ದೆಗೆ ದ್ರಾವಿಡ್​ ಗುಡ್​ ಬೈ
ಕಳೆದ ವರ್ಷವಷ್ಟೇ ರಾಜಸ್ಥಾನ್ ರಾಯಲ್ಸ್​ ತಂಡದ ಹೆಡ್ ಕೋಚ್ ಹುದ್ದೆಗೇರಿದ್ದ ರಾಹುಲ್ ದ್ರಾವಿಡ್ 10 ವರ್ಷಗಳ ಬಳಿಕ ನೆಚ್ಚಿನ ತಂಡಕ್ಕೆ ರೀ ಎಂಟ್ರಿ ನೀಡಿದ್ದರು. 2 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದ ರಾಹುಲ್ ದ್ರಾವಿಡ್, ಈಗ 2026ರ ಐಪಿಎಲ್​ಗೂ ಮುನ್ನವೇ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಹುಲ್ ದ್ರಾವಿಡ್ ರಾಜೀನಾಮೆಯ ಸುತ್ತ ಅನುಮಾನದ ಹುತ್ತಗಳೇ ಬೆಳೆದು ನಿಂತಿದೆ.

ರಾಹುಲ್ ದ್ರಾವಿಡ್​ ಹಲವು ವರ್ಷಗಳಿಂದ ರಾಯಲ್ಸ್ ತಂಡದ ಪ್ರಯಾಣದ ಕೇಂದ್ರ ಬಿಂದುವಾಗಿದ್ದಾರೆ. ದ್ರಾವಿಡ್​​ ನಾಯಕತ್ವ ಒಂದು ಪೀಳಿಗೆಯ ಆಟಗಾರರ ಮೇಲೆ ಪ್ರಭಾವ ಬೀರಿದೆ. ತಂಡದೊಳಗೆ ಬಲವಾದ ಮೌಲ್ಯಗಳನ್ನ ನಿರ್ಮಿಸಿದೆ. ಫ್ರಾಂಚೈಸಿಯ ಸಂಸ್ಕೃತಿಯ ಮೇಲೆ ಅಳಿಸಲಾಗದ ಒಂದು ಗುರುತು ಬಿಟ್ಟಿದೆ. ರಾಹುಲ್ ಅವರಿಗೆ ದೊಡ್ಡ ಹುದ್ದೆಯನ್ನ ನೀಡಲು ನಿರ್ಧರಿಸಲಾಗಿತ್ತು. ದ್ರಾವಿಡ್ ಆ ಜವಾಬ್ದಾರಿ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್, ಆಟಗಾರರು, ಲಕ್ಷಾಂತರ ಅಭಿಮಾನಿಗಳು ರಾಹುಲ್ ಫ್ರಾಂಚೈಸಿಗೆ ನೀಡಿದ ಗಮನಾರ್ಹ ಸೇವೆಗಾಗಿ ಹೃತ್ಪೂರ್ವಕ ಧನ್ಯವಾದಗಳನ್ನ ಅರ್ಪಿಸುತ್ತದೆ.

 

ದೊಡ್ಡ ಹುದ್ದೆಯ ಆಫರ್ ತಿರಸ್ಕರಿಸಿದ್ಯಾಕೆ ದ್ರಾವಿಡ್?
ರಾಜಸ್ಥಾನ್ ರಾಯಲ್ಸ್​ ಫ್ರಾಂಚೈಸಿಯೇ ಹೇಳಿದಂತೆ ಹೆಡ್ ಕೋಚ್​ ದ್ರಾವಿಡ್​ಗೆ ಬಿಗ್ ಆಫರ್ ನೀಡಿದೆ. ಹೆಡ್ ಕೋಚ್ ಬದಲಾಗಿ ಕುಮಾರ ಸಂಗಕ್ಕಾರ, ನಿರ್ವಹಿಸುತ್ತಿದ್ದ ಡೈರೆಕ್ಟರ್ ಹುದ್ದೆ ವಹಿಸಲು ಮುಂದಾಗಿತ್ತು. ಈ ಆಫರ್​ನ ದ್ರಾವಿಡ್ ನಿರಾಕರಿಸಿದ್ದಾರೆ. ಹೆಡ್ ಕೋಚ್ ಹುದ್ದೆಗೂ ರಾಜೀನಾಮೆ ಸಲ್ಲಿಸಿದ್ದಾರೆ. ಇದು ಸಹಜವಾಗೇ ಹೊಸ ಪ್ರಶ್ನೆಗಳಿಗೆ ನಾಂದಿಯಾಡಿದೆ. ಹೆಡ್ ಕೋಚ್ ಹುದ್ದೆಯಿಂದ ದ್ರಾವಿಡ್​​ ದೂರ ಇದ್ರೆ ಆಟಗಾರರ ಜೊತೆಗಿನ ಸಂಬಂಧಕ್ಕೆ ಬ್ರೇಕ್ ಬೀಳುತ್ತೆ. ಈ ಕಾರಣಕ್ಕಾಗಿಯೇ ರಾಜಸ್ಥಾನ್ ರಾಯಲ್ಸ್​ ದೊಡ್ಡ ಹುದ್ದೆಯ ಆಫರ್ ನೀಡಿದೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಇದಕ್ಕೆ ಕಾರಣ ಸೀಸನ್​​-18ರಿಂದ ರಾಜಸ್ಥಾನ್ ರಾಯಲ್ಸ್​ ತಂಡದಲ್ಲಿ ನಡೀತಿರುವ ಬೆಳವಣಿಗೆಗಳು.

ಸೀಸನ್​-18ರಿಂದ ಆರ್​ಆರ್ ತಂಡದಲ್ಲಿ ಭಿನ್ನಮತ..!
ಸೀಸನ್​-18 ಮಿಡ್ ಸೀಸನ್​ನಿಂದಲೂ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅಸಮಾಧಾನದ ಹೊಗೆಯಾಡ್ತಿತ್ತು. ಡೆಲ್ಲಿ ಕ್ಯಾಪಿಟಲ್ಸ್​ ಎದುರಿನ ಪಂದ್ಯವನ್ನ ರಾಜಸ್ಥಾನ್ ಟೈ ಮಾಡಿಕೊಂಡಿತ್ತು. ಈ ವೇಳೆ ಸೂಪರ್ ಓವರ್​ನ ಡಿಸ್ಕಷನ್​ ವೇಳೆ ನಡೆದ ಕೆಲ ಘಟನೆಗಳು ಎಲ್ಲವೂ ಸರಿ ಇಲ್ಲ ಎಂಬ ಅನುಮಾನಕ್ಕೆ ನಾಂದಿಯಾಡಿತ್ತು. ದ್ರಾವಿಡ್ ಸಪೋರ್ಟ್​ ಸ್ಟಾಫ್​ ಹಾಗೂ ಆಟಗಾರರ ಜೊತೆ ಗೇಮ್​​ ಪ್ಲಾನ್​ ಮಾಡ್ತಿದ್ರೆ, ಇತ್ತ ಸಂಜು ತನಗೇನು ಸಂಬಂಧ ಇಲ್ಲವೆಂಬಂತೆ ನಡೆದುಕೊಂಡಿದ್ದರು. ಸಹ ಆಟಗಾರ ಟೀಮ್​​​​​ ಮೀಟಿಂಗ್​ಗೆ ಬರುವಂತೆ ಸನ್ನೆ ಮಾಡಿದ್ರು. ಇದಕ್ಕೆ ಸನ್ನೆಯಲ್ಲೇ ಉತ್ತರ ನೀಡಿ ಮೀಟಿಂಗ್​ನಿಂದ ದೂರ ಉಳಿದ್ದಿದ್ದರು. ಇದು ಆರ್​ಆರ್​ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನೇ ನೀಡಿತ್ತು.

ಸಂಜು ಉಳಿವಿಗಾಗಿ ಯತ್ನಿಸಿತಾ ಆರ್​ಆರ್​ ಫ್ರಾಂಚೈಸಿ?
ಸೀಸನ್​-18 ಅಂತ್ಯದ ಬೆನ್ನಲ್ಲೇ ಸಂಜು, ಆರ್​ಆರ್ ತೊರೆಯಲು ಸನ್ನದ್ಧರಾಗಿದ್ದರು. ಸ್ವತಃ ರಿಲೀಸ್ ಮಾಡಲು ಫ್ರಾಂಚೈಸಿಗೆ ಮನವಿ ಮಾಡಿದ್ದರು. ಸಂಜು ರಿಲೀಸ್​ಗೆ ಆರ್​ಆರ್​ ಹಿಂದೇಟು ಹಾಕಿತ್ತು. ಇದೇ ಕಾರಣಕ್ಕೆ ಆರ್​ಆರ್​, ದೊಡ್ಡ ಹುದ್ದೆಯ ಆಫರ್ ದ್ರಾವಿಡ್​ಗೆ ನೀಡಿತ್ತು. ಇದೆನ್ನೆಲ್ಲವನ್ನು ಅರಿತಿದ್ದ ದ್ರಾವಿಡ್ ದೊಡ್ಡ ಹುದ್ದೆಯನ್ನೇ ಅಲ್ಲ. ಹೆಡ್ ಕೋಚ್ ಹುದ್ದೆಗೂ ಗುಡ್ ಬೈ ಹೇಳಿದ್ದಾರೆ. ಗೌರವ ಇದ್ದಡೆ ಮಾತ್ರ ದ್ರಾವಿಡ್ ಎಂಬ ಲೆಜೆಂಡ್ ಇರ್ತಾರೆ ಎಂಬ ಸಂದೇಶ ಸಾರಿದ್ದಾರೆ.

 

Related Posts

ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..!

ಐಪಿಎಲ್ 2026 ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದಲ್ಲಿ ಸೆಣಸಾಡಲಿವೆ. ಈ ಪಂದ್ಯ ಮಳೆಯಿಂದ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೋತ ತಂಡಕ್ಕೆ ಕ್ವಾಲಿಫೈಯರ್ 2 ಆಡಲು ಮತ್ತೊಂದು ಅವಕಾಶವಿದ್ದರೂ,…

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ: ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ!

ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ದೆಹಲಿ ತಂಡವನ್ನು ಮಣಿಸಿದ ಆರ್‌ಸಿಬಿ ಭರ್ಜರಿ ಜಯ ದಾಖಲಿಸಿದೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡದ ಅತಿದೊಡ್ಡ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!