ಸುಜಾತ ಭಟ್ ಬಗ್ಗೆ ಚಿಕ್ಕಲ್ಲಸಂದ್ರದ ಜನರ ಶಾಕಿಂಗ್ ಮಾತುಗಳು

ಸುಜಾತ ಭಟ್ ಎಂಬ ವೃದ್ಧ ಮಹಿಳೆಯು ಧರ್ಮಸ್ಥಳದಲ್ಲಿ ತನ್ನ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ದೂರು ನೀಡಿ ಸುದ್ದಿಯಲ್ಲಿದ್ದಾರೆ. ಸುಜಾತ ಭಟ್ ನೀಡುತ್ತಿರುವ ಹೇಳಿಕೆಗಳು ಗೊಂದಲಕಾರಿಯಾಗಿವೆ. ಅಸಲಿಗೆ ಅನನ್ಯ ಭಟ್ ಎಂಬ ಮಗಳನ್ನು ಯಾರೂ ನೋಡಿಯೂ ಇಲ್ಲ. ಸುಜಾತ ಭಟ್‌ಗೆ ಅನನ್ಯ ಭಟ್ ಎಂಬ ಮಗಳು ಇದ್ದಿದ್ದಕ್ಕೆ ಯಾವುದೇ ಸಾಕ್ಷಿ, ಆಧಾರ, ದಾಖಲೆಗಳೂ ಇಲ್ಲ. ಈಗ ಸುಜಾತ ಭಟ್‌ ಎಲ್ಲೆಲ್ಲಿ ವಾಸ ಇದ್ದರು ಅಲ್ಲೆಲ್ಲಾ ಸುಜಾತ ಭಟ್ ಬಗ್ಗೆ ಜನರು ಆಡುತ್ತಿರುವ ಮಾತುಗಳು ಅಚ್ಚರಿಗೆ ಕಾರಣವಾಗಿವೆ.

ಸುಜಾತ ಭಟ್ ಕುರಿತು ಮತ್ತಷ್ಟು ವಿಚಾರ ಬಯಲಾಗಿದೆ. ಮೂರು ವರ್ಷಗಳ‌ ಹಿಂದೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ಬಳಿಯ ಚಿಕ್ಕಲ್ಲಸಂದ್ರದಲ್ಲಿ ಸುಜಾತ ಬಾಡಿಗೆ ಮನೆಯಲ್ಲಿ ವಾಸ ಇದ್ದರು. ಚಿಕ್ಕಕಲ್ಲಸಂದ್ರದ ಅಶ್ವಥ್ ಕಟ್ಟೆಯಲ್ಲಿ ಸುಜಾತ ವಾಸ ಇದ್ದರು. ಆ ವೇಳೆ ಸ್ಥಳೀಯರ ಬಳಿ ₹100-₹200 ದುಡ್ಡು ಅನ್ನು ಸುಜಾತ ಪಡೆಯುತ್ತಿದ್ದರು. ದುಡ್ಡಿಲ್ಲದಕ್ಕೆ ಚುನಾವಣಾ ಪ್ರಚಾರವನ್ನು ಕೂಡ ಸುಜಾತ ಮಾಡಿದ್ದರು. 2019,2024 ರ ಲೋಕಸಭಾ ಚುನಾವಣೆ ವೇಳೆ ಚುನಾವಣಾ ಪ್ರಚಾರವನ್ನು ರಾಜಕೀಯ ಪಕ್ಷಗಳ ಪರವಾಗಿ ಮಾಡಿದ್ದರು. ಎಲೆಕ್ಷನ್ ಕ್ಯಾಂಪೇನ್ ಗೆ ಹೋದ್ರೆ ದುಡ್ಡು ಸಿಗುತ್ತೆಂದು ನಾನೇ ಕರ್ಕೊಂಡು ಹೋಗಿದ್ದೆ ಎಂದು ಚಿಕ್ಕ ಕಲ್ಲಸಂದ್ರದ ಸ್ಥಳೀಯರಾದ ಸಣ್ಣಪ್ಪ ಹೇಳಿದ್ದಾರೆ.
ಸುಜಾತ ದೊಡ್ಡ ಫ್ರಾಡ್ ಎಂದು ಬೆಂಗಳೂರಿನ ಚಿಕ್ಕ ಕಲ್ಲಸಂದ್ರದ ಸ್ಥಳೀಯರು ಹೇಳಿದ್ದಾರೆ. ಕುಟುಂಬಗಳ ನಡುವೆ ತಂದಿಟ್ಟು ತಮಾಷೆ ನೋಡ್ತಿದ್ರು. ಸುಜಾತರಿಂದ ಈ ಏರಿಯಾದಲ್ಲಿ ಗಂಡ- ಹೆಂಡ್ತಿ ಗಲಾಟೆ ಮಾಡ್ತಿದ್ರು. ಬೇರೆಯವರ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದರು ಎಂದು ಸ್ಧಳೀಯರು ವೃದ್ಧೆ ಸುಜಾತ ವಿರುದ್ಧ ಈಗ ದೂರು ಹೇಳಿದ್ದಾರೆ.
ಸುಜಾತ ಮೇಲೆ ಒಮ್ಮೆ ಹಲ್ಲೆಯಾಯಿತು ಎಂದು ಬಿದ್ದಾಗ ನಾನೇ ಆಸ್ಪತ್ರೆ ಸೇರಿಸಿದ್ದೆ. ಆವತ್ತು ನಾನೇ ಆಸ್ಪತ್ರೆ ಬಿಲ್ ₹1500 ಕೊಟ್ಟಿದ್ದೆ . ನಮಗೆ ಅವರು ಸುಜಾತ ಅಂತ ಅಷ್ಟೇ ಗೊತ್ತು. ಸುಜಾತ ಭಟ್ ಅನ್ನೋದು ಗೊತ್ತಿಲ್ಲ . ಈಗ ಮಾಧ್ಯಮದಲ್ಲಿ ನೋಡಿ ಶಾಕ್ ಆಯ್ತು. ಸುಜಾತ ನಾಯಿಗಳನ್ನ ಆರೈಕೆ ಮಾಡ್ತಿದ್ದಳು ಎಂದು ಸ್ಥಳೀಯ ಸಣ್ಣಪ್ಪ ಎಂಬ ವ್ಯಕ್ತಿ ಹೇಳಿದ್ದಾರೆ.
ಇನ್ನೂ ಸುಜಾತ ಮನೆ ಖಾಲಿ ಮಾಡಿದ್ದರ ಬಗ್ಗೆ ಮನೆ ಮಾಲೀಕ ಕೂಡ ಮಾಹಿತಿ ನೀಡಿದ್ದಾರೆ. ಸುಜಾತ ಭಟ್ ನಮ್ಮ ಮನೆಯಲ್ಲಿ ವಾಸ ಇದ್ದರು. ಮೂರು ವರ್ಷಗಳ ಹಿಂದೆ ಖಾಲಿ ಮಾಡಿದ್ದರು. ಲೀಸ್ ಅಗ್ರಿಮೆಂಟ್ ಮುಗಿದಿತ್ತು. ಅದಕ್ಕೆ ಖಾಲಿ‌ಮಾಡಿದ್ದಾರೆ ಎಂದು ಸುಜಾತ ಭಟ್ ವಾಸ ಇದ್ದ ಮನೆ ಮಾಲೀಕ ಪೋನ್ ಮೂಲಕ ನ್ಯೂಸ್ ಫಸ್ಟ್ ಗೆ ಮಾಹಿತಿ ನೀಡಿದ್ದಾರೆ.

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು