
ಐಪಿಎಲ್ ಚಾಂಪಿಯನ್ RCB ತಂಡದ ವಿಜಯೋತ್ಸವಕ್ಕೂ ಮುನ್ನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದುರಂತವೇ ನಡೆದಿದೆ. RCB ಸೆಲೆಬ್ರೇಷನ್ ನೋಡಲು ಸ್ಟೇಡಿಯಂಗೆ ಲಕ್ಷಾಂತರ ಜನರು ಮುಗಿಬಿದ್ದಿದ್ದಾರೆ. ಕ್ರೀಡಾಂಗಣಕ್ಕೆ ಎಂಟ್ರಿ ಕೊಡುವ ವೇಳೆ ನೂಕುನುಗ್ಗಲು ಉಂಟಾಗಿದ್ದು, 10 ಆರ್ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿದ್ದು, 7ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ
ಗೆಲುವಿನ ಸಂಭ್ರಮದ ನಡುವೆ ಪ್ರಾಣ ಕಳೆದುಕೊಂಡ ಅಭಿಮಾನಿಗಳ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಬೌರಿಂಗ್ ಆಸ್ಪತ್ರೆ ಬಳಿ ಸಂಭ್ರಮಾಚರಣೆಗೆ ಬಂದು ಸಾವಿನ ಮನಸೇರಿದ ಆರ್ಸಿಬಿ ಅಭಿಮಾನಿಗಳ ಸಂಬಂಧಿಕರ ಆಕ್ರಂದನ ಮೂಗಿಲೂ ಮುಟ್ಟುವಂತಿದೆ.

ಬೆಂಗಳೂರಿನ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಾಲ್ವರು ಅಭಿಮಾನಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ ಆರ್ಸಿಬಿ ತಂಡದ ಗೆಲುವಿನ ಸಂಭ್ರಮದ ಮೇಲೆ ಆರು ಜನರು ಕಲ್ತುಳಿತದಿಂದ ಮೃತಪಟ್ಟಿದ್ದಾರೆ.





