Aparna Archives - Good News 24x7 https://www.goodnews24x7.com/tag/aparna/ Kannada Mon, 11 Aug 2025 11:29:27 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Aparna Archives - Good News 24x7 https://www.goodnews24x7.com/tag/aparna/ 32 32 85 ಮೆಟ್ರೋ ಸ್ಟೇಷನ್​ಗಳಲ್ಲೂ ಅಪರ್ಣಾದ್ದೇ ಧ್ವನಿ! ಯೆಲ್ಲೋ ಲೈನ್ ಗೂ ಬಂತು ಖ್ಯಾತ ನಿರೂಪಕಿ ಕಂಠ.. https://www.goodnews24x7.com/aparnas-voice-is-heard-at-all-85-metro-stations-the-famous-anchorwomans-voice-has-also-come-to-the-yellow-line/ Mon, 11 Aug 2025 11:03:05 +0000 https://www.goodnews24x7.com/?p=5823 ಅಪರ್ಣಾ, ಯಾರಿಗೆತಾನೇ ಗೊತ್ತಿಲ್ಲ ಹೇಳಿ , ನಟಿ ಹಾಗೂ ನಿರೂಪಕಿಯಾಗಿ ಜಯಪ್ರಿಯತೆ ಪಡೆದವರು , ಅವರ ಸುಮಧುರ ಧ್ವನಿಯು ಬೆಂಗಳೂರಿನ ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗಗಳಲ್ಲಿ ಜನಪ್ರಿಯವಾಗಿತ್ತು. ಇದೀಗ ಹೊಸದಾಗಿ ಉದ್ಘಾಟನೆಯಾದ ಹಳದಿ ಮೆಟ್ರೋ ಮಾರ್ಗದಲ್ಲಿ ಸಹ ಇವರ ಧ್ವನಿಯನ್ನು…

The post 85 ಮೆಟ್ರೋ ಸ್ಟೇಷನ್​ಗಳಲ್ಲೂ ಅಪರ್ಣಾದ್ದೇ ಧ್ವನಿ! ಯೆಲ್ಲೋ ಲೈನ್ ಗೂ ಬಂತು ಖ್ಯಾತ ನಿರೂಪಕಿ ಕಂಠ.. appeared first on Good News 24x7.

]]>

ಅಪರ್ಣಾ, ಯಾರಿಗೆತಾನೇ ಗೊತ್ತಿಲ್ಲ ಹೇಳಿ , ನಟಿ ಹಾಗೂ ನಿರೂಪಕಿಯಾಗಿ ಜಯಪ್ರಿಯತೆ ಪಡೆದವರು , ಅವರ ಸುಮಧುರ ಧ್ವನಿಯು ಬೆಂಗಳೂರಿನ ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗಗಳಲ್ಲಿ ಜನಪ್ರಿಯವಾಗಿತ್ತು. ಇದೀಗ ಹೊಸದಾಗಿ ಉದ್ಘಾಟನೆಯಾದ ಹಳದಿ ಮೆಟ್ರೋ ಮಾರ್ಗದಲ್ಲಿ ಸಹ ಇವರ ಧ್ವನಿಯನ್ನು ಬಳಸಲಾಗಿದೆ. ಅಪರ್ಣಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ತಮ್ಮ ಕೊನೆಯ ದಿನಗಳಲ್ಲಿ ಯೆಲ್ಲೋ ಲೈನ್ ನ ಮೆಟ್ರೋ ಅನ್ನೊನ್ಸಮೆಂಟ್ ರೆಕಾರ್ಡಿಂಗ್‌ ಮಾಡಿದ್ದರು. 2024ರ ಏಪ್ರಿಲ್-ಮೇ ನಲ್ಲಿ ಮೆಟ್ರೋದ ತಾಂತ್ರಿಕ ತಂಡ ಅಪರ್ಣಾ ಬಳಿ ತೆರೆಳಿ ಅವರ ಧ್ವನಿಯನ್ನು ರೆಕಾರ್ಡಿಂಗ್ ಮಾಡಿಕೊಂಡಿತ್ತು.

ಕಳೆದ ವರ್ಷ ಜುಲೈನಲ್ಲಿ ನಿಧನ ಹೊಂದಿದ್ದ ನಿರೂಪಕಿ ಅಪರ್ಣಾ ಅನಾರೋಗ್ಯ ದಿಂದ ಬಳಲುತ್ತಿದ್ದರು . ಕ್ಯಾನ್ಸರ್ ಮಧ್ಯೆಯೂ ಅಪರ್ಣಾ ತಮ್ಮ ಧ್ವನಿ ನೀಡಿ ಕರ್ತವ್ಯ ಮೆರೆದಿದ್ದಾರೆ.

ಹಳದಿ ಬಣ್ಣದ ಮಾರ್ಗ ಭಾನುವಾರ (ಆಗಸ್ಟ್ 10) ಉದ್ಘಾಟನೆಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಲೋಕಾರ್ಪಣೆ ಮಾಡಿದರು. ಆರ್​ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಈ ರೈಲು ಸಂಪರ್ಕ ಕಲ್ಪಿಸುತ್ತದೆ. ಒಟ್ಟೂ 16 ನಿಲ್ದಾಣಗಳನ್ನು ಈ ಮೆಟ್ರೋ ರೈಲು ಹಾದು ಹೋಗುತ್ತದೆ. ಈ ಮಾರ್ಗದಲ್ಲಿ ಅಪರ್ಣಾ ಧ್ವನಿ ಪ್ರತಿಧ್ವನಿಸಲಿದೆ.

 

ಅಪರ್ಣಾ ಧ್ವನಿ ತುಂಬಾನೇ ಸುಮಧುರವಾಗಿತ್ತು. ಅವರು ಆ್ಯಂಕರಿಂಗ್​ಗೆ ನಿಂತರೆ ಬಾಯಿಯಿಂದ ಮುತ್ತುಗಳು ಉದುರುತ್ತಿವೆ ಎಂದನಿಸುತ್ತಿತ್ತು. ಹಸಿರು ಹಾಗೂ ಪರ್ಪಲ್ ಲೈನ್ ಮೆಟ್ರೋಗೆ ಅಪರ್ಣಾ ಅವರೇ ಧ್ವನಿ ನೀಡಿದ್ದರು. ಇದು ಮೆಟ್ರೋದ ಹೈಲೈಟ್ ಕೂಡ ಆಗಿತ್ತು. ಹಳದಿ ಬಣ್ಣದ ಮೆಟ್ರೋಗೂ ಅವರದ್ದೇ ಧ್ವನಿ ಇರಬೇಕು ಎಂಬುದು ಕನ್ನಡಿಗರ ಆಸೆ ಆಗಿತ್ತು. ‘ಹಳೆಯ ಮಾರ್ಗದಲ್ಲಿ ಅಪರ್ಣಾ ಧ್ವನಿ ಮುಂದುವರಿಸುತ್ತೇವೆ. ಹಳದಿ ಬಣ್ಣಕ್ಕೆ ಕಷ್ಟ’ ಎಂದು ಮೆಟ್ರೋ ಅಧಿಕಾರಿಗಳು ಈ ಮೊದಲು ಹೇಳಿದ್ದರು. ಆದರೆ , ಇದೀಗ ಹಳದಿ ಲೈನ್ ಮೆಟ್ರೋಗೂ ಅಪರ್ಣಾ ಅವರ ಧ್ವನಿ ಮುಂದುವರೆದಿರುವುದು ಕನ್ನಡಿಗರಲ್ಲಿ ಸಂತಸ ತಂದಿದೆ .

ಸದ್ಯ ಹಸಿರು ಬಣ್ಣದ ಲೈನ್​ ನಾಗಸಂದ್ರದಿಂದ ಸಿಲ್ಕ್ ಇನ್ಸ್​ಟಿಟ್ಯೂಟ್​ವರೆಗೆ ಕಾರ್ಯ ನಿರ್ವಹಿಸುತ್ತಿದ್ದು, 32 ಮೆಟ್ರೋ ಸ್ಟೇಷನ್​ಗಳು ಇವೆ. ಪರ್ಪಲ್ ಲೈನ್​ ವೈಟ್ ಫೀಲ್ಡ್​​ನಿಂದ ಚೆಲ್ಲಘಟ್ಟದವರೆಗೆ ಕಾರ್ಯ ನಿರ್ವಹಿಸುತ್ತಿದ್ದು 37 ಮೆಟ್ರೋ ಸ್ಟೇಷನ್​ಗಳು ಇವೆ. ಈಗ ಹಳದಿ ಮೆಟ್ರೋ ಸೇರಿದರೆ 85 ಸ್ಟೇಷನ್​ಗಳಿದ್ದು , ಎಲ್ಲಾ ಸ್ಟೇಷನ್ ಗಳಲ್ಲೂ ಅಪರ್ಣಾ ಅವರದ್ದೇ ಧ್ವನಿ ಇರಲಿದೆ.

The post 85 ಮೆಟ್ರೋ ಸ್ಟೇಷನ್​ಗಳಲ್ಲೂ ಅಪರ್ಣಾದ್ದೇ ಧ್ವನಿ! ಯೆಲ್ಲೋ ಲೈನ್ ಗೂ ಬಂತು ಖ್ಯಾತ ನಿರೂಪಕಿ ಕಂಠ.. appeared first on Good News 24x7.

]]>
ನಿರೂಪಕಿಯಾಗಿ, ನಟಿಯಾಗಿ ಮಿಂಚಿ ಮರೆಯಾದ ಅಪರ್ಣಾ https://www.goodnews24x7.com/aparna-shines-as-a-presenter-and-actress/ Fri, 12 Jul 2024 02:54:54 +0000 https://www.goodnews24x7.com/?p=283 ಕನ್ನಡಿಗರ ಮನ ಗೆದ್ದಿದ್ದ ನಿರೂಪಕಿ ಅಪರ್ಣಾ ಅವರಿಂದು ಚಿರನಿದ್ರೆಗೆ ಜಾರಿದ್ದಾರೆ. ಹಲವು ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಅವರು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ಕನ್ನಡ ಸಿನಿ ರಂಗದ ನಟರು ಸೇರಿ ಹಲವರು…

The post ನಿರೂಪಕಿಯಾಗಿ, ನಟಿಯಾಗಿ ಮಿಂಚಿ ಮರೆಯಾದ ಅಪರ್ಣಾ appeared first on Good News 24x7.

]]>

ಕನ್ನಡಿಗರ ಮನ ಗೆದ್ದಿದ್ದ ನಿರೂಪಕಿ ಅಪರ್ಣಾ ಅವರಿಂದು ಚಿರನಿದ್ರೆಗೆ ಜಾರಿದ್ದಾರೆ. ಹಲವು ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಅವರು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ಕನ್ನಡ ಸಿನಿ ರಂಗದ ನಟರು ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.

ಯಶಸ್ವಿ ನಿರೂಪಕಿಯಾಗಿ 3 ದಶಕಗಳ ವರೆಗೆ ಕನ್ನಡ ಸೇವೆ ಸಲ್ಲಿಸಿದ ಅಪರ್ಣಾ, 2014 ರಲ್ಲಿ ಬೆಂಗಳೂರಿನ ʻನಮ್ಮ ಮೆಟ್ರೋʼದಲ್ಲಿ ಘೋಷಣೆಯಾಗುವ `ಪ್ರಯಾಣಿಕರು ಹತ್ತುವ, ಮತ್ತು ಇಳಿಯುವ ಸೂಚನೆʼಗೆ ಧ್ವನಿ ಗೂಡಿಸಿದ್ದರು.

ಆಂಗ್ಲ ಭಾಷೆ ಬಳಸದೇ ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡ್ತಾ.. ಅಚ್ಚ ಕನ್ನಡದಲ್ಲೇ ಮಾತನಾಡುತ್ತಾ ಭಾಷಾಭಿಮಾನ ಮೆರೆಯುತ್ತಾ.. ಮಜಾ ಟಾಕೀಸ್​ನಲ್ಲಿ ನಕ್ಕು ನಗಿಸಿ.. ಬಿಗ್​ ಬಾಸ್​​ನಲ್ಲಿ ಭಾಗಿಯಾಗಿ ಜನರನ್ನ ಮನರಂಜಿಸಿ.. ಚಂದನವನದ ಚಂದದ ಮಾತುಗಾರ್ತಿ.. ಕನ್ನಡ ದೂರದರ್ಶನದಲ್ಲಿ ಮಿಂಚಿ.. ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದ ಕನ್ನಡನಾಡು ಕಂಡ ಅಪರೂಪದ ನಿರೂಪಕಿ, ನಟಿ ಅಪರ್ಣಾ ವಿಧಿವಶರಾಗಿದ್ದಾರೆ.

The post ನಿರೂಪಕಿಯಾಗಿ, ನಟಿಯಾಗಿ ಮಿಂಚಿ ಮರೆಯಾದ ಅಪರ್ಣಾ appeared first on Good News 24x7.

]]>